Wednesday, May 18, 2022

ಹೇಗಿದೆ ನ್ಯೂರಾನ್ ಸಿನಿಮಾ..? ಇಲ್ಲಿದೆ ನೋಡಿ ರಿವ್ಯೂ ರಿಪೋರ್ಟ್..

Must read

ಒಬ್ಬೊಬ್ಬರ ಕಲ್ಪನೆಯ ಒಂದೊಂದು ರೀತಿ. ಒಂದು ಲೆಕ್ಕಕೆ ಜೀವನವೇ ಒಂದು ಕಲ್ಪಾನ ಲೋಕ. ಅವರವರ ದೃಷ್ಟಿಯಲ್ಲಿ ಅವರವರು ಕಲ್ಪಿಸಿಕೊಳ್ತಾರೆ. ಈ ವಾರ ತೆರೆಕಂಡಿರುವ ನ್ಯೂರಾನ್ ಕಲ್ಪನೆಯೂ ಇದೇ ರೀತಿ. ಸ್ಯಾಂಡಲ್​​ವುಡ್ ಪ್ರೇಕ್ಷಕರಿಂದ ಹಿಡಿದು , ಸ್ಯಾಂಡಲ್​ವುಡ್​ ಕೆಲ ತಾರೆಯರು ನ್ಯೂರಾನ್ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.

ವೈಜ್ಞಾನಿಕ ಥ್ರಿಲ್ಲರ್ ಸಿನಿಮಾ ನ್ಯೂರಾನ್ ..!

ಡಾರ್ಜಿಲಿಂಗ್ ನೈಜ ಘಟನೆಯೆ ನ್ಯೂರಾನ್..!

ನ್ಯೂರಾನ್ ಮೆದುಳಿಗೆ ಕೆಲಸ ಕೊಡೋ ಸಿನಿಮಾ..

ಟೀಸರ್ , ಟ್ರೈಲರ್ ಮತ್ತು ಹಾಡುಗಳಿಂದ ನಿರೀಕ್ಷೆಯನ್ನು ಮೂಡಿಸಿಕೊಂಡಿದ್ದ ಸಿನಿಮಾ ನ್ಯೂರಾನ್. ಯುವ ಮನಸ್ಸುಗಳ ಕನಸು ನ್ಯೂರಾನ್ ಕೊನೆಗೂ ತೆರೆಕಂಡಿದೆ. ಮೊದಲ ದಿನವೇ ಪ್ರೇಕ್ಷಕರು ಥಿಯೇಟರ್​​ನತ್ತ ಹೆಜ್ಜೆ ಇಡುವಂತೆ ಮಾಡಿದೆ.

ನ್ಯೂರಾನ್ .. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಹಾನಿ. ಒಬ್ಬ ಮನುಷ್ಯನಿಗೆ ಮೆದುಳು ಎಷ್ಟು ಮುಖ್ಯ, ಒಬ್ಬ ಮನುಷ್ಯ ಕಲ್ಪನೆಯೂ ಎಷ್ಟರ ಮಟ್ಟಿಗಿರುತ್ತದೆ ಅನ್ನೋದನ್ನು ಥ್ರಿಲ್ಲಂಗ್ ಆಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಿಕಾಸ್ ಪುಷ್ಪಗಿರಿ.

2010ರಲ್ಲಿ ಪಶ್ಚಿಮ ಬಂಗಾಲದ ಡಾರ್ಜಿಲಿಂಗ್ ನಡೆದ ನೈಜ್ಯ ಘಟನೆಯ ಆಧಾರಿತ ಸಿನಿಮಾ ಇದು..ಆದ್ರೆ ಒನ್ ಲೈನ್ನ​​ಲ್ಲಿ ಚಿತ್ರದ ಕಥೆಯನ್ನು ಹೇಳಿಮುಗಿಸೋದು ಕಷ್ಟ. ಕಥಾನಾಯಕ ಯುವ ತನ್ನ ಪ್ರೇಯಸಿ ರಶ್ಮಿಕಾಳಿಗಾಗಿ ವಿದೇಶದಿಂದ ಸಕ್ಲೇಶಪುರದ ಬಿಸಿಲೆಗೆ ಬರುತ್ತಾನೆ. ಆಕೆಗಾಗಿ ಹುಡುಕಾಟ ನಡೆಸುತ್ತಾನೆ , ಪೊಲೀಸ್ ಮೊರೆ ಹೊಗುತ್ತಾನೆ. ಅಲ್ಲಿ ವಿಲನ್ ಆರ್ಭಟ ನಡಿತ್ತಿರುತ್ತೆ, ಅದಕ್ಕೆ ಪೊಲೀಸ್ ಕುಮ್ಮಕು ಇರುತ್ತೆ. ರಶ್ಮಿಕಾಗಳ ಹುಡುಕಾಟದಲ್ಲಿ ರಶ್ಮಿಕಾಳ ಸಿಹಿ ನೆನಪು , ಆ ನೆನಪಿನಲ್ಲಿ ಆಗಾಗ ಕಥೆಯಲ್ಲಿ ತಿರುವಿನ ಹೊನಪು. ರಶ್ಮಿಕಾ ಹುಡುಕಾಟದಲ್ಲಿ ಅಂಜಲಿ ಮತ್ತು ವೈಷ್ಣವಿ ಸಿಕ್ತಾರೆ. ಸಿನಿಮಾದ ಪ್ರೀ ಕ್ಲೈಮ್ಯಾಕ್ಸ್ ಬರೋ ತನಕ ಯಾವುದು ನಿಜ ಯಾವುದು ಸುಳ್ಳು ಅನ್ನೋದೆ ಇಂಟ್ರಸ್ಟಿಂಗ್ ಪಾಯಿಂಟ್​. ಫೈನಲ್ ಆಗಿ ಯಾವುದು ಸತ್ಯ ಯಾವುದು ಸುಳ್ಳು ಅನ್ನೋಕ್ಕೆ ಸಿನಿಮಾನವನ್ನು ಥಿಯೇಟರ್​​ಗೆ ಹೋಗಿ ನೋಡಬೇಕು.

ನ್ಯೂರಾನ್ ಆರ್ಟಿಸ್ಟ್ ಫರ್ಫಾರ್ಮೆನ್ಸ್

ನ್ಯೂರಾನ್ ಚಿತ್ರದ ಮೂಲಕ ಫಸ್ಟ್ ಟೈಮ್ ನಾಯಕ ನಟನಾಗಿ ಯುವ ಕಾಣಿಸಿಕೊಂಡಿದ್ದಾರೆ. ಇದು ಅವರ ಮೊದಲ ಪ್ರಯತ್ನ ಅನ್ನೋದು ಸಿನಿಮಾ ನೋಡಿದವರಿಗೆ ಸ್ಪಷ್ಟವಾಗುತ್ತದೆ. ಇನ್ನು ಬಹುಭಾಷ ನಟ ಕಬೀರ್ ಧೂಹಾನ್ ಸಿಂಗ್ , ಹಿರಿಯ ನಟ ಜೈ ಜಗದೀಶ್ ನಾಯಕಿಯರಾಗಿ ನೇಹಾ ಪಾಟೀಲ್ , ವೈಷ್ಣವಿ ಚಂದ್ರನ್ , ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ನ್ಯೂರಾನ್ ಚಿತ್ರದ ಎಲ್ಲಾ ಪಾತ್ರದಾರಿಗಳು ತಮಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

Also read:  ಭಗವದ್ಗೀತೆ ಮೂಲ ಪುಸ್ತಕ ಎಲ್ಲಿದೆ..?: ಈ ಪ್ರಶ್ನೆಗೆ ಕೇಂದ್ರದ ಬಳಿಯೂ ಇಲ್ಲ ಸ್ಪಷ್ಟ ಉತ್ತರ..!

ವಿನಯ್ ಕುಮಾರ್ ವಿ.ಆರ್​. ನಿರ್ಮಾಣದ ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್ ಒಳ್ಳೆಯ ಹಾಡು ಮತ್ತು ಬ್ಯಾಕ್​ಗ್ರೌಂಡ್ ಮ್ಯೂಸಿಕ್​ ಅನ್ನು ಒದಗಿಸಿದ್ದಾರೆ. ಶೋಯಬ್ ಅಹಮದ್ ಕ್ಯಾಮೆರಾ ಕೈಚಳಕ ಅಚ್ಚುಕಟ್ಟಾಗಿದೆ.

ರೇಟಿಂಗ್ಸ್ 3.0/5

ನ್ಯೂರಾನ್ ಸಿನಿಮಾ ಮನೋರಂಜನೆಯ ಜೊತೆಗೆ ಮೆದುಳಿಗೆ ಕೆಲಸ ಕೊಡೋ ಚಲನಚಿತ್ರ. ಪ್ರೇಕ್ಷಕ ಎಷ್ಟರ ಮಟ್ಟಿಗೆ ಥಿಯೇಟರ್​​​ಗೆ ಹೋಗಿ ಸಿನಿಮಾ ನೋಡಿ , ಹೊಸಬರ ಪ್ರಯತ್ನವನ್ನು ಬೆನ್ನುತಟ್ಟುತ್ತಾರೆ ಅನ್ನೋದನ್ನು ಕಾದು ನೋಡಬೇಕು.

Latest article