ಹಾವೇರಿ: ಜೆಡಿಎಸ್ ವರಿಷ್ಠ ಹೆಚ್ ಡಿ ದೇವೆಗೌಡ ಹಾಗೂ ಕುಮಾರಸ್ವಾಮಿ ಅವರು, ಬಿಜೆಪಿ ಸೋಲುವ ಭೀತಿಯಲ್ಲಿ ಸ್ವಾಮೀಜಿ ಅವರನ್ನು ಕಣದಿಂದ ಹಿಂದೆ ಸರಿಸಲಾಗಿದೆ ಎಂಬ ಹೇಳಿಕೆಯನ್ನು ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್ ತಳ್ಳಿ ಹಾಕಿದ್ದಾರೆ.
ನಗರದಲ್ಲಿಂದು ಜೆಡಿಎಸ್ ಅಭ್ಯರ್ಥಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನಾಮಪತ್ರ ವಾಪಾಸ್ ಪಡೆದ ಬಗ್ಗೆ ಮಾತನಾಡಿದ ಅವರು, ನನ್ನ ಆರೋಪ ಕೇಳಿ ಬಂದಿದ್ದು, ನೂರಕ್ಕೆ ನೂರರಷ್ಟು ಸುಳ್ಳು ಆರೋಪ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಾಮೀಜಿ ಸ್ಪರ್ಧಿಸುವಾಗಿದೆ. ಅವರು ನಿಂತರೆ ಅವರ ವೈಯಕ್ತಿಕ ವಿಚಾರವಾಗಿದೆ.
ಅಲ್ಲದೇ, ಅದು ಅವರ ವೈಯಕ್ತಿಕ ಮೂಲಭೂತ ಹಕ್ಕು ಎಂದು ಹೇಳಿದ್ದೆ. ಸ್ವಾಮೀಜಿ ಅವರನ್ನು ಚುನಾವಣೆಯಿಂದ ಸರಿಸಲು ನಾವು ಯಾರನ್ನು ಭೇಟಿ ಮಾಡಿಲ್ಲ, ಸಂಪರ್ಕ ಮಾಡಿಲ್ಲ. ಸ್ವಾಮೀಜಿ ಯಾಕೆ ನಾಮಪತ್ರ ಹಿಂಪಡೆದರು ಎಂದು ಅವರೇ ಉತ್ತರಿಸಿದ್ದಾರೆ ಎಂದು ಅನರ್ಹ ಶಾಸಕ ಬಿ.ಸಿ ಪಾಟೀಲ್ ತಿಳಿಸಿದರು.