Wednesday, May 18, 2022

ಹೆಚ್ಚಿನ ಸೋಂಕು ಹರಡುವುದನ್ನ ತಪ್ಪಿಸಿದ ಕೇಂದ್ರ, ರಾಜ್ಯ ಸರ್ಕಾರಗಳ ಪ್ರಯತ್ನಕ್ಕೆ ಉಪರಾಷ್ಟ್ರಪತಿ ಅಭಿನಂದನೆ

Must read

ನವದೆಹಲಿ: ಕೊರೊನಾ ವೈರಸ್(ಕೋವಿಡ್19) ನಿಯಂತ್ರಣ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಯತ್ನಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಅಭಿನಂದನೆ ತಿಳಿಸಿದ್ದಾರೆ.

ಇಂದು ಟ್ವೀಟ್ ಮಾಡಿದ ಅವರು, ಕೊರೊನಾ ವೈರಸ್ ನಿಯಂತ್ರಣಕ್ಕೆ ಸರ್ಕಾರಗಳ ಜೊತೆ ಕೈಜೋಡಿಸಿದ, ಸಾರ್ವಜನಿಕರು ಸ್ವಯಂ ನಿರ್ಭಂದಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಮೊದಲ ವಾರದ ಲಾಕ್ ಡೌನ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕಿದೆ. ಹೆಚ್ಚಿನ ಸೋಂಕು ಹರಡುವುದನ್ನ ತಪ್ಪಿಸಿದೆ. ದೇಶದ ಜನರಿಗೆ ಲಾಕ್ ಡೌನ್ ನಿಂದ ತುಂಬಾ ಕಷ್ಟವಾಗಲಿದೆ. ಆದರೆ, ಅದರ ಹಿಂದೆ ಸಾಕಷ್ಟು ಸದುದ್ದೇಶವಿದೆ. ಹೀಗಾಗಿ ಕೊರೊನಾ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದಿದ್ದಾರೆ.

ದೇಶದ ನಾಗರೀಕರಿಗೆ ದೀರ್ಘಕಾಲದವರೆಗೆ ಮನೆ ಬಂಧನವು ಹೊಸ ಅನುಭವವಾಗಿದೆ. ಪರಸ್ಪರ ಗುಣಮಟ್ಟದ ಸಮಯವನ್ನು ಕಳೆಯುವ ಮೂಲಕ ಕುಟುಂಬ, ರಕ್ತ ಸಂಬಂಧಿಗಳೊಂದಿಗೆ ಬೇರೆಯಲು ಈ ಸಮಯ ಅವಕಾಶ ನೀಡುತ್ತಿದೆ ಎಂದರು.

Latest article