ಸಿಕ್ಕಾಪಟ್ಟೆ ವೈಲೆಂಟ್ ಆಗಿರೋ ಸಿನಿಮಾದಲ್ಲಿ ಸೈಲೆಂಟ್ ಆಗಿ ಪ್ರೇಕ್ಷಕರನ್ನ ರಂಜಿಸೋಕ್ಕೆ ದೇವಸೇನಾ ಅನುಷ್ಕಾ ಶೆಟ್ಟಿ ಬರ್ತಿದ್ದಾರೆ. ನಿಶಬ್ಧಂ ನಂತ್ರ ಮುಂದೇನು..? ಅನ್ನೋ ಪ್ರಶ್ನೆಗೆ ಸ್ವೀಟಿ ಅಭಿಮಾನಿಗಳನ್ನ ಕಾಡ್ತಿದೆ. ಇದೀಗ ಆ ಪ್ರಶ್ನೆಗೆ ಉತ್ತರ ಸಿಗೋ ಟೈಮ್ ಹತ್ತಿರ ಬರ್ತಿದೆ.
ಅನುಷ್ಕಾ ಶೆಟ್ಟಿ.. ಮಲ್ಟಿ ಲಾಂಗ್ವೇಜ್ ಸಿನಿಮಾಗಳ ಮೂಲಕ ಸೌತ್ ಸಿನಿದುನಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿ ಕರಾವಳಿ ಚೆಲುವೆ. ಭಾಗಮತಿ ನಂತ್ರ ಸ್ವೀಟಿ ನಟನೆಯ ಯಾವ್ದೆ ಸಿನಿಮಾ ರಿಲೀಸ್ ಆಗ್ಲಿಲ್ಲ. ಈ ಗ್ಯಾಪ್ನಲ್ಲಿ ತೂಕ ಇಳಿಸಿಕೊಂಡು ನಿಶಬ್ಧಂ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರನ್ನ ರಂಜಿಸೋಕ್ಕೆ ಅನುಷ್ಕಾ ಶೆಟ್ಟಿ ತಯಾರಿ ನಡೆಸಿದ್ದಾರೆ.

ತೆಲುಗು ‘ಅಸುರ’ನ ಮಡದಿ ಆಗ್ತಾರಾ ಅನುಷ್ಕಾ ಶೆಟ್ಟಿ..?!
ಅಸುರನ್ ರೀಮೇಕ್ನಲ್ಲಿ ವೆಂಕಿ ಜೋಡಿಯಾಗಿ ಸ್ವೀಟಿ..?
ತಮಿಳಿನ ಸೂಪರ್ ಹಿಟ್ ಅಸುರನ್ ಸಿನಿಮಾವನ್ನ ತೆಲುಗಿಗೆ ರೀಮೇಕ್ ಮಾಡಲಾಗ್ತಿದೆ. ತಮಿಳಿನಲ್ಲಿ ಧನುಷ್ ಮಾಡಿದ್ದ ಪಾತ್ರವನ್ನ ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್ ಮಾಡ್ತಿದ್ದಾರೆ. ಸ್ವತ: ವೆಂಕಿ ಸಹೋದರ ಸುರೇಶ್ ಬಾಬು ತಮ್ಮದೇ ಬ್ಯಾನರ್ನಲ್ಲಿ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ಚಿತ್ರದಲ್ಲಿ ನಾಯಕನ ಮಡದಿ ಪಾತ್ರಕ್ಕೂ ಸಖತ್ ಸ್ಕೋಪ್ ಇದೆ. ಈ ಪಾತ್ರಕ್ಕೆ ಅನುಷ್ಕಾ ಶೆಟ್ಟಿ ಆಯ್ಕೆ ಆಗೋ ಸುಳಿವು ಸಿಕ್ತಿದೆ.

ಆ್ಯಕ್ಷನ್ ಥ್ರಿಲ್ಲರ್ ಅಸುರನ್ ಸಿನಿಮಾದಲ್ಲಿ ಧನುಷ್ ಮಡದಿಯಾಗಿ ಮಂಜು ವಾರಿಯರ್ ಅದ್ಭುತ ಅಭಿನಯ ನೀಡಿದ್ದಾರೆ. ಈ ಪಾತ್ರ ಅನುಷ್ಕಾ ಶೆಟ್ಟಿ ಮಾಡ್ಬೇಕು ಅನ್ನೋದು ಸುರೇಶ್ ಬಾಬು ಮತ್ತವರ ತಂಡದ ಆಸೆ. ಇದೇ ವಿಚಾರವಾಗಿ ಮಾತುಕತೆ ನಡೀತಿದ್ದು, ಎಲ್ಲಾ ಅಂದುಕೊಂಡಂತೆ ಆದ್ರೆ, ತೆಲುಗು ಅಸುರನ ಮಡದಿಯಾಗಿ ಡಿ ಗ್ಲಾಮರಸ್ ರೋಲ್ನಲ್ಲಿ ಕರಾವಳಿ ಚೆಲುವೆ ಕಮಾಲ್ ಮಾಡಲಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಅನುಷ್ಕಾ ಶೆಟ್ಟಿ ನಟಿಸೋ ಸಿನಿಮಾಗಳ ಸಂಖ್ಯೆ ಕಡಿಮೆಯಾಗ್ತಿದೆ ಅಂತ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಕೇವಲ ಮೂರು ಸಿನಿಮಾದಲ್ಲಿ ನಟಸಿದ್ದಾರೆ. ಈಗಾಗಲೇ ಚಿಂತಕಾಯಲ ರವಿ ಸಿನಿಮಾದಲ್ಲಿ ವೆಂಕಟೇಶ್ ಜೊತೆ ನಟಿಸಿ ಸೈ ಅನ್ನಿಸಿಕೊಂಡಿರೋ ಸ್ವೀಟಿ ಅಸುರನ್ ಸಿನಿಮಾದಲ್ಲಿ ಮತ್ತೆ ಜೊತೆಯಾದ್ರೆ, ಅಭಿಮಾನಿಗಳು ಖುಷಿಯಾಗೋದು ಗ್ಯಾರೆಂಟಿ.