Wednesday, June 29, 2022

'ಸೆಪ್ಟೆಂಬರ್​ 19ರಿಂದ ಐಪಿಎಲ್​ ಆರಂಭ, ನವೆಂಬರ್​ 8ರಂದು ಫೈನಲ್​ ಪಂದ್ಯ'

Must read

ನವದೆಹಲಿ: ಬಹಳ ಕುತೂಹಲದಿಂದ ಕಾಯುತ್ತಿರುವ 2020 ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​(ಐಪಿಎಲ್​)ನ 13ನೇ ಆವೃತ್ತಿಯು ಸೆಪ್ಟೆಂಬರ್ 19ರಂದು​ ಶುರು ಆಗಲಿದೆ ಎಂದು ಐಪಿಎಲ್​ನ ಚೇರ್​ಮನ್​ ಬ್ರಿಜೇಶ್​ ಪಾಟೀಲ್​ ಅವರು ಹೇಳಿದ್ದಾರೆ.

ಪಿಟಿಐ ಗುರುವಾರ ದಿನಾಂಕಗಳನ್ನು ವರದಿ ಮಾಡಿದ ಬಳಿಕ ಪಟೇಲ್ ಈ ಬೆಳೆವಣಿಗೆಯ ಬಗ್ಗೆ ದೃಢಪಡಿಸಿದ್ದು, ದುಬೈನಲ್ಲಿ ಐಪಿಎಲ್​ 13ನೇ ಆವೃತ್ತಿಯೂ ಸ್ಪೆಪೆಂಬರ್​ 19ರಿಂದ ಶುರುವಾಗಿ 51 ದಿನಗಳ ವರೆಗೆ ಈ ಲೀಗ್​ ನಡೆಯಲಿದೆ. ನವೆಂಬರ್​ 08ರಂದು ಫೈನಲ್​ ಪಂದ್ಯ ನಡೆಯಲಿದೆ ಎಂದು ಪಿಟಿಐಗೆ ಶುಕ್ರವಾರ ಹೇಳಿದ್ದಾರೆ.

ಈ ಬಗ್ಗೆ ಆಡಳಿತ ಮಂಡಳಿ ಮುಂದಿನ ವಾರ ಸಭೆ ಸೇರಿ ಅಂತಿಮ ವಿವರಗಳನ್ನು ಪರಿಶೀಲನೆ​ ಮಾಡಿ ವೇಳಾಪಟ್ಟಿಗೆ ಅನುಮೋದಿಸುತ್ತದೆ. ಬಿಸಿಸಿಐ ಯೋಜನೆಯ ಬಗ್ಗೆ ಫ್ರಾಂಚೈಸಿಗಳನ್ನು ಅನೌಪಚಾರಿಕವಾಗಿ ತಿಳಿಸಿದೆ ಎಂದು ತಿಳಿದುಬಂದಿದೆ. ಜಿಸಿ ಶೀಘ್ರದಲ್ಲೇ ಭೇಟಿಯಾಗಲಿದೆ ಆದರೆ ನಾವು ವೇಳಾಪಟ್ಟಿಯನ್ನು ಅಂತಿಮಗೊಳಿಸಿದ್ದೇವೆ. ಸರ್ಕಾರದ ಅನುಮೋದನೆ ಸಿಗಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಇದು ಸೆಪ್ಟೆಂಬರ್ 19ರಿಂದ ನವೆಂಬರ್ 8 ರವರೆಗೆ ನಡೆಯುತ್ತದೆ ಎಂದು ಬ್ರಿಜೇಶ್​ ಪಾಟೀಲ್​ ಅವರು ಹೇಳಿರುವ ಬಗ್ಗೆ ಗುರುವಾರ ಪಿಟಿಐ ವರದಿ ಮಾಡಿದೆ.

ಕೋವಿಡ್​-19 ಎದುರಿಸಲು ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯ ವಿಧಾನವನ್ನು ಸಿದ್ಧಪಡಿಸಲಾಗುತ್ತಿದ್ದು, ಬಿಸಿಸಿಐ ಔಪಚಾರಿಕವಾಗಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ ಪತ್ರ ಬರೆಯಲಿದೆ ಎಂದು ಅವರು ಪಟೇಲ್ ಹೇಳಿದ್ದಾರೆ.

ನಾವು ಎಸ್‌ಒಪಿ ತಯಾರಿಸುತ್ತಿದ್ದು, ಅದು ಕೆಲವೇ ದಿನಗಳಲ್ಲಿ ಸಿದ್ಧವಾಗಲಿದೆ. ಕ್ರಿಕೆಟ್​ ಫ್ಯಾನ್ಸ್​ಗಳಿಗೆ ಅನುಮತಿ ನೀಡುವುದು ಅಥವಾ ನೀಡದಿರುವುದು ಯುಎಇ ಸರ್ಕಾರಕ್ಕೆ ಬಿಟ್ಟ ನಿರ್ಧಾರವಾಗಿದೆ. ಹೇಗಾದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಅದನ್ನು ತೀರ್ಮಾನಿಸಲು ಅವರ ಸರ್ಕಾರಕ್ಕೆ ಬಿಟ್ಟಿದ್ದೇವೆ. ನಾವು ಕೂಡ ಔಪಚಾರಿಕವಾಗಿ ಯುಎಇ ಮಂಡಳಿಗೆ ಪತ್ರ ಬರೆಯಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Latest article