Thursday, May 19, 2022

'ಸುಮಲತಾ ಅಂಬರೀಶ್​ ಬಿಜೆಪಿಗೆ ಬೆಂಬಲ ಕೊಡ್ತಾರೆ ಎಂಬ ನಿರೀಕ್ಷೆ'

Must read

ಮಂಡ್ಯ: ಉಪಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ ಇನ್ನೂ ಅವಕಾಶ ಇದೆ. ಶೀಘ್ರವೇ ಅಭ್ಯರ್ಥಿ ಆಯ್ಕೆ ಮಾಡ್ತೀವಿ ಎಂದು ಮಂಡ್ಯದಲ್ಲಿ ಉಪಮುಖ್ಯಮಂತ್ರಿ ಡಾ. ಅಶ್ವತ್ ನಾರಾಯಣ್ ಅವರು ತಿಳಿಸಿದರು

ನಗರದಲ್ಲಿ ಬುಧವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪು ಕಾದು ನೋಡಿ ಅಭ್ಯರ್ಥಿ ಅಂತಿಮ ಮಡ್ತೀವಿ, ಚುನಾವಣೆ ನಡೆಯುತ್ತಾ(?)ನಡೆಯಲ್ವಾ(?) ನಡೆದರೆ, ಏನು ಮಾಡಬೇಕು(?) ನಡಿಲಿಲ್ಲ ಅಂದ್ರೆ ಏನು ಮಾಡಬೇಕು(?) ಅಂತ ತೀರ್ಮಾನ ಮಾಡ್ತೀವಿ ಎಂದು ಅವರು ನುಡಿದರು.

ಅಷ್ಟೇ ಅಲ್ಲದೇ ಕೆ.ಆರ್. ಪೇಟೆಯಿಂದ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸ್ಪರ್ಧೆ ಮಾಡಲ್ಲ, ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಬೆಂಬಲ ಕೊಟ್ಟಿತ್ತು. ಎಲ್ಲಾ ರೀತಿ ಸಹಾಯ ಮಾಡಿದ್ದೇವೆ, ಅವರು ಬಿಜೆಪಿಗೆ ಬೆಂಬಲ ಕೊಡೋದು ಅವರಿಗೆ ಬಿಟ್ಡಿದ್ದು. ಆದರೆ, ಬೆಂಬಲದ ನಿರೀಕ್ಷೆ ಮಾಡ್ತಿದ್ದೀವಿ ಎಂದರು.

ಇನ್ನು ರಾಜಕಾರಣದಲ್ಲಿ ನೂರೆಂಟು ಅವಕಾಶ ಇದೆ. ಟಿಕೆಟ್ ಆಕಾಂಕ್ಷಿತರು ದೃತಿಗೆಡಬಾರದು. ಎಲ್ಲಾ ಕ್ಷೇತ್ರದಲ್ಲೂ ನೂರಕ್ಕೆ ನೂರು ಬಿಜೆಪಿ ಜಯಭೇರಿ ಬಾರಿಸಲಿದೆ. ಕುಮಾರಸ್ವಾಮಿ-ಸಿದ್ದರಾಮಯ್ಯ ಜಗಳ ಹೀಗೆ ಆಡಲಿ. ಅದು ನಮಗೆ ಲಾಭವಾಗಲಿದೆ ಎಂದು ಮಂಡ್ಯದಲ್ಲಿ ಸಚಿವ, ಡಿಸಿಎಂ ಡಾ. ಅಶ್ವಥ್​ ನಾರಾಯಣ ಅವರು ಪ್ರತಿಕ್ರಿಯಿಸಿದರು.

Latest article