ಸೌತ್ ಸಿನಿದುನಿಯಾದ ಟಾಪ್ ಹೀರೋಯಿನ್ ಕಾಜಲ್ ಅಗರ್ವಾಲ್ ಸೀಕ್ರೆಟ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ(?) ಈ ಸೀಕ್ರೆಟ್ ಎಂಗೇಜ್ಮೆಂಟ್ಗೆ ಹಾಜರಾದ ಟಾಲಿವುಡ್ನ ಏಕೈಕ ನಟ ಯಾರು(?) ಲಾಕ್ಡೌನ್ ಟೈಮ್ನಲ್ಲೇ ಸಾಕಷ್ಟು ಶುಭಕಾರ್ಯಗಳು ನಡೀತಿದೆ.. ಸ್ಯಾಂಡಲ್ವುಡ್ ಮಾತ್ರವಲ್ಲದೇ ಅಕ್ಕಪಕ್ಕದ ಇಂಡಸ್ಟ್ರಿ ಸೆಲೆಬ್ರೆಟಿಗಳು ಕೂಡ ಸದ್ದಿಲ್ಲದೇ ಹಾರ ಬದಲಿಸಿಕೊಂಡು, ಉಂಗುರ ಬದಲಿಸಿಕೊಂಡು ಹಿರಿಹಿರಿ ಹಿಗ್ಗುತ್ತಿದ್ದಾರೆ.. ಮೊನ್ ಮೊನ್ನೆ ಮೆಗಾ ಡಾಟರ್ ನಿಹಾರಿಕಾ ಕೋನಿದೇಲ ಎಂಗೇಜ್ಮೆಂಟ್ ನೆರವೇರಿತ್ತು. ಇದೀಗ ಮತ್ತೊಬ್ಬ ನಟಿಯ ಎಂಗೇಜ್ಮೆಂಟ್ ಸುದ್ದಿ ಬಂದಿದೆ.
ಮುಂಬೈನಿಂದ ಸೌತ್ ಸಿನಿದುನಿಯಾಗೆ ಬಂದು ಗೆದ್ದಿರೋ ನಟಿಯರ ಲಿಸ್ಟ್ ದೊಡ್ಡದಿದೆ. ಆ ಲಿಸ್ಟ್ನಲ್ಲಿ ಮಗಧೀರನ ಚೆಲುವೆ ಕಾಜಲ್ ಅಗರ್ವಾಲ್ನ ಮರೆಯುವಂತಿಲ್ಲ. 10 ವರ್ಷಗಳ ಹಿಂದೆ ಟಾಲಿವುಡ್ ಪ್ರವೇಶಿಸಿದ ಈ ಮುಂಬೈ ಪೋರಿ, ಸದ್ಯ ಸೌತ್ ಸಿನಿದುನಿಯಾದ ಟಾಪ್ ಹೀರೋಯಿನ್ ಆಗಿ ಮೆರೀತ್ತಿದ್ದಾರೆ. ಇದೀಗ ಕಾಜಲ್ ಸೀಕ್ರೆಟ್ ಎಂಗೇಜ್ಮೆಂಟ್ ನ್ಯೂಸ್ ಟಾಲಿವುಡ್ನಲ್ಲಿ ಹಾಟ್ ಟಾಪಿಕ್ ಆಗಿದೆ. ಲಾಕ್ಡೌನ್ ಟೈಮಲ್ಲೇ ಬಹಳ ಸರಳವಾಗಿ ನಿಶ್ಚಿತಾರ್ಥ ನೆರವೇರಿದೆ ಅನ್ನಲಾಗುತ್ತಿದೆ.
ತಂಗಿ ಮದುವೆಯಾದ್ರು ಕಾಜಲ್ ಮಾತ್ರ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ವಯಸ್ಸು 35 ದಾಟಿದ್ರು, ಮದುವೆ ಗೊಡವೆಯೇ ಬೇಡ ಅಂತ ಮಿತ್ರವಿಂದ ಸುಮ್ಮನಿದ್ರು. ಆದ್ರೀಗ ಕಾಜಲ್ ಅರೇಂಜ್ ಮ್ಯಾರೇಜ್ಗೆ ಒಪ್ಪಿದ್ದಾರೆ. ಎಂಗೇಜ್ಮೆಂಟ್ ಕುಡ ನಡೆದಿದೆ ಅನ್ನೋ ಗುಸುಗುಸು ಕೇಳಿ ಬರ್ತಿದೆ. ಕಾಜಲ್, ಗೌತಮ್ ಎನ್ನುವ ಉದ್ಯಮಿ ಕೈ ಹಿಡಿತ್ತಾರೆ ಅನ್ನಲಾಗುತ್ತಿದೆ.
ಬಹಳ ಸೀಕ್ರೆಟ್ ಆಗಿ ಕಾಜಲ್ ಅಗರ್ವಾಲ್ ಎಂಗೇಜ್ಮೆಂಟ್ ನಡೆದಿದೆ ಅನ್ನಲಾಗ್ತಿದೆ. ಕೆಲವೇ ಆಪ್ತರು ಮತ್ತು ಸ್ನೇಹಿತರು ಕಾರ್ಯಕ್ರಮದಲ್ಲಿ ಹಾಜರಿದ್ದರಂತೆ. ಚಿತ್ರರಂಗದಿಂದಲೂ ಕಾರ್ಯಕ್ರಮಕ್ಕೆ ಯಾರಿಗೂ ಆಹ್ವಾನ ನೀಡಿರಲಿಲ್ಲವಂತೆ. ಆದರೆ, ನಟ ಬೆಲ್ಲಂಕೊಂಡ ಸುರೇಶ್ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು ಅನ್ನಲಾಗ್ತಿದೆ. ಸೀತಾ, ಕವಚಂ ಸಿನಿಮಾದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದರು. ಅದೇ ಸ್ನೇಹದಿಂದ ಬೆಲ್ಲಂಕೊಂಡ ಶ್ರೀನಿವಾಸ್ನ ಮಾತ್ರ ಕಾಜಲ್ ಎಂಗೇಜ್ಮೆಂಟ್ಗೆ ಆಹ್ವಾನಿಸಿದ್ದರಂತೆ.
ಈ ಹಿಂದೆ ಕೂಡ ಕಾಜಲ್ ಎಂಗೇಜ್ಮೆಂಟ್ ಬಗ್ಗೆ ಅಂತೆ ಕಂತೆ ಸುದ್ದಿ ಬಂದಿತ್ತು. ಇದೀಗ ಮತ್ತೊಮ್ಮೆ ಅಂತದ್ದೇ ಸುದ್ದಿ ಬಂದಿದೆ. ಇದು ಎಷ್ಟು ನಿಜ, ಎಷ್ಟು ಸುಳ್ಳು ಅನ್ನೋದು ಇನ್ನಷ್ಟೆ ಗೊತ್ತಾಗಬೇಕಿದೆ. ಕಾಜಲ್ ಸಿನಿಮಾಗಳ ಬಗ್ಗೆ ಹೇಳೋದಾದ್ರೆ, ಮೋಸಗಾಳ್ಲು, ಆಚಾರ್ಯ, ಇಂಡಿಯನ್-2 ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕ್ವೀನ್ ರೀಮೇಕ್ ಪ್ಯಾರಿಸ್ ಪ್ಯಾರಿಸ್ ಸಿನಿಮಾದಲ್ಲಿ ನಟಿಸಿದ್ದು ಶೀಘ್ರದಲ್ಲೇ ರಿಲೀಸ್ ಆಗಲಿದೆ.