Wednesday, May 18, 2022

ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡ ಬಾಲಕ..!

Must read

ಬೆಂಗಳೂರು: ಪಾನಿಪೂರಿ ತಿಂದ್ಕೊಂಡು ಬರ್ತಿದ್ದ ಬಾಲಕನ್ನ ಅಪಹರಣ ಮಾಡಿದ್ದರು. ಆದರೆ ಅಪಹರಣವಾಗಿದ್ದ ಬಾಲಕ ಫಿಲ್ಮಿ ಸ್ಟೈಲ್‌ನಲ್ಲಿ ತಪ್ಪಿಸಿಕೊಂಡು ಬಂದಿದ್ದಾನೆ.

ಈತ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರದ ನಿವಾಸಿ ಮಣಿಕಂಠ. ಇಲ್ಲಿನ ಖಾಸಗಿ ಶಾಲೆಯಲ್ಲಿ ಒಂಭತ್ತನೇ ತರಗತಿ ಓದುತ್ತಿದ್ದು, ಎರಡು ದಿನಗಳ ಹಿಂದೆ ರಾತ್ರಿ ಪಾನಿಪುರ ತಿಂದ್ಕೊಂಡು ಮನೆಗೆ ಬರುವಾಗ ಅಪಹರಣವಾಗಿದ್ದ. ನಂತರ ಅಪಹರಣಕಾರರು ಎಣ್ಣೆ ಹೊಡೆಯೋಕೆ ಸೂಲಿಬೆಲೆಯ ಗ್ರಾಮದ ಹೊರಗೆ ಕಾರು ನಿಲ್ಲಿಸಿದಾಗ ತಪ್ಪಿಸಿಕೊಂಡು ಬಂದಿದ್ದಾನೆ.

ಪ್ರಜ್ಞೆ ತಪ್ಪಿಸಿ ಮೂವರು ಅಪಹರಣಕಾರರು ತನ್ನನ್ನು ಅಪಹರಿಸಿದರು ಅಂತಿದ್ದಾನೆ ಮಣಿಕಂಠ. ವಿಜಯಪುರದಿಂದ 20 ಕಿ.ಮೀ ದೂರದ ಸೂಲಿಬೆಲೆ ಗ್ರಾಮದ ಹೊರಗೆ ವಾಹನ ನಿಲ್ಲಿಸಿದಾಗ ಕಿಟಕಿಯಿಂದ ಹಾರಿ ಅವರಿಂದ ತಪ್ಪಿಸಿಕೊಂಡೆ ಅಂತ ತಿಳಿಸಿದ್ದಾನೆ.

ಇನ್ನು ಅಪಹರಣದ ಪ್ರಹಸನಕ್ಕೆ ಭೂಮಿ ಪರಿಹಾರದ ಕೋಟಿ – ಕೋಟಿ ಹಣ ಕಾರಣ ಎನ್ನಲಾಗಿದೆ. ಬಾಲಕನ ತಂದೆಯ ಸೋದರ ಸಂಬಂಧಿಗಳ ನಡುವೆ ಹಣಕ್ಕಾಗಿ ಕಿತ್ತಾಟ ನಡೆಯತ್ತಿದ್ದು, ಹೆದರಿಸಲು ಈ ರೀತಿ ಮಾಡಿದ್ದಾರೆ ಎನ್ನಲಾಗ್ತಿದೆ. ಆದರೆ ಪೊಲೀಸರ ತನಿಖೆಯಿಂದ ಮಾತ್ರ ನಿಜಾಂಶ ಬಯಲಿಗೆ ಬರಬೇಕಿದೆ.

Latest article