Wednesday, May 18, 2022

'ಸಿದ್ಧರಾಮಯ್ಯನವರೇ ಇದರ ಪ್ರತಿಫಲ ಅನುಭವಿಸುತ್ತೀರಿ'..!

Must read

ಹುಬ್ಬಳ್ಳಿ: ವೀರ ಸಾವರ್ಕರ್ ಅವರು ಅಪ್ರತಿಮ ಸ್ವತಂತ್ರ ಹೋರಾಟಗಾರರಾಗಿದ್ದು ಅವರ ಬಗ್ಗೆ ಕೀಳುಮಟ್ಟದ ಭಾಷೆಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಸಚಿವ ಜಗದೀಶ ಶೆಟ್ಟರ್ ಅವರು ಭಾನುವಾರ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

ನಿನ್ನೆ ಸಿದ್ಧರಾಮಯ್ಯ ಅವರು ಗಾಂಧಿ ಹತ್ಯೆಯಲ್ಲಿ ವೀರ ಸಾವರ್ಕರ್ ಅವರ ಕೈವಾಡವಿತ್ತು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ್, ಕಾಂಗ್ರೆಸ್​ ನಾಯಕರಲ್ಲಿ ಈ ರೀತಿ ಕೀಳುಮಟ್ಟ ಭಾಷೆಯಲ್ಲಿ ಮಾತನಾಡುವುದು ರೂಢಿಯಾಗಿದೆ. ಹೀಗೆ ಮಾಡಿದರೆ ನೀವು ಇದರ ಪ್ರತಿಫಲ ಅನುಭವಿಸುತ್ತೀರಿ ಎಂದು ಅವರು ಕಿಡಿಕಾರಿದರು.

ಮಾಜಿ ಸಿಎಂ ಅವರು ಕೀಳುಮಟ್ಟದಲ್ಲಿ ಮಾತನಾಡುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಸ್ವತಂತ್ರ್ಯ ಹೋರಾಟಗಾರರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಲೀಡರ್ ಶಿಪ್ ಹೆಚ್ಚಾಗುತ್ತದೆ ಎಂದು ತಿಳಿದಿದ್ದಾರೆ. ಪ್ರತಿಯೊಬ್ಬರಿಗೂ ಏಕವಚನದಲ್ಲಿ ಮಾತನಾಡುವುದೇ ಅವರ ಸಂಸ್ಕೃತಿಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬಗ್ಗೆಯೂ ಏಕವಚದಲ್ಲಿ ಸಿದ್ಧರಾಮಯ್ಯ ಮಾತನಾಡಿದ್ದಾರೆ ಎಂದರು.

ಇನ್ನು ನಾನೂ ಸಿದ್ಧರಾಮಯ್ಯ ಅವರಿಗೆ ಎಲ್ಲಿದಿಯಪ್ಪ ಎಂದು ಏಕವಚನದಲ್ಲಿ ಮಾತನಾಡುತ್ತೇನೆ. ಆ ರೀತಿ ಏಕವಚನದಲ್ಲಿ ಮಾತನಾಡಿದರೆ ಅದು ನನ್ನ ಸಣ್ಣತನವನ್ನು ತೋರಿಸುತ್ತದೆ. ಮಾಜಿ ಸಿಎಂ ಅವರು ಕೀಳುಮಟ್ಟದಲ್ಲಿ ಮಾತನಾಡುವುದನ್ನು ಬಿಡಬೇಕು. ಅದನ್ನು ಸಿದ್ಧರಾಮಯ್ಯ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

Latest article