ಬಾಗಲಕೋಟೆ: ಮೈಸೂರು ಜಿಲ್ಲಾಡಳಿತ ವಿರುದ್ದ ಸಚಿವ ವಿ.ಸೋಮಣ್ಣ ಅವರು ಪೋನ್ನಲ್ಲಿ ಅಧಿಕಾರಿಗಳನ್ನು ಗದರಿದ ಘಟನೆ ಬಾಗಲಕೋಟೆಯ ತೋಟಗಾರಿಕೆ ವಿವಿಯ ಸಭೆಯಲ್ಲಿ ನಡೆದಿದೆ.
ಬಾಗಲಕೋಟೆ ಪ್ರವಾಸದಲ್ಲಿ ಇರುವ ಸಚಿವ ಸೋಮಣ್ಣ ಅವರು ಟಿಪ್ಪು ಜಯಂತಿ ಆಚರಣೆ ವಿಚಾರವಾಗಿ ಪೋನ್ನಲ್ಲಿ ಮಾತನಾಡಿ, ಸರ್ಕಾರದ ಆದೇಶ ಹೇಗಿದೆಯೋ ಹಾಗೆ ಮಾಡಿ. ಮತ್ತೆ ನೀವು ಹಳೆ ಕಾಯ್ದೆ ಅಂತ ಸಿದ್ದರಾಮಯ್ಯ ಮಾತು ಕೇಳಿದರೆ, ಮನೆಗೆ ಹೋಗ್ತಾಯಿರಿ ಎಂದು ವಿ.ಸೋಮಣ್ಣ ಅವರು ಅಧಿಕಾರಿಗಳಿಗೆ ಗದರಿಸಿದ್ದಾರ.ಎ
ಅಂತೆಯೇ ಮಾತನಾಡಿ, ಸರ್ಕಾರದ ಆದೇಶ ಏನಿದೆಯೋ ಸಿರಿಯಸ್ಸಾಗಿ ಪಾಲನೆ ಮಾಡಿ. ನಾನು ಈ ಬಗ್ಗೆ ಪೊಲೀಸರ ಜೊತೆ ಮಾತನಾಡಿದ್ದೇನೆ. ಇಬ್ಬರು ಸೇರಿ ಚರ್ಚೆ ಮಾಡಿ ನಿರ್ಧಾರ ಮಾಡಿದ್ದೇವೆ ಎಂದು ಅವರು ಮಾಜಿ ಸಚಿವ ವಿ ಸೋಮಣ್ಣ ಅವರು ಮಾತನಾಡಿದ್ದಾರೆ.