Tuesday, August 16, 2022

ಸಿದ್ದರಾಮಯ್ಯನ್ನ ಕಾಂಗ್ರೆಸ್​ನಿಂದ ಅಷ್ಟು ಸುಲಭವಾಗಿ ದೂರ ಮಾಡಲಿಕ್ಕಾಗಲ್ಲ – ಮಾಜಿ ಸಚಿವ ಪುಟ್ಟರಂಗಶೆಟ್ಟಿ

Must read

ಚಾಮರಾಜನಗರ: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಅಷ್ಟು ಸುಲಭವಾಗಿ ಕಾಂಗ್ರೆಸ್​ನಿಂದ ಬೇರೆ ಮಾಡಲಿಕ್ಕಾಗಲ್ಲ ಎಂದು ಮಾಜಿ ಸಚಿವ ಪುಟ್ಟರಂಗಶೆಟ್ಟಿ ಅವರು ಮಂಗಳವಾರ ಹೇಳಿದ್ದಾರೆ.

ನಗರದಲ್ಲಿಂದು ಮೂಲ ಕಾಂಗ್ರೆಸಿಗರಿಂದ ಸಿದ್ದರಾಮಯ್ಯನವರ ಹೊರ ಹಾಕುವ ವಿಚಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಹೊರಗಡೆ ಆಕುವುದಿದ್ದರೆ, ಅದೇಗೆ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಹಾಗೂ ಐದು ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿ ಹೇಗೆ ಆಗುತ್ತಿದ್ದರು ಎಂದು ಅವರು ಪ್ರಶ್ನಿಸಿದರು.

ಇದೆಲ್ಲ ಸುಳ್ಳು, ಅದು ಸಾಧ್ಯವಿಲ್ಲ. ಮೂಲ ಕಾಂಗ್ರೆಸ್​ ಹಾಗೂ ವಲಸಿಗ ಕಾಂಗ್ರೆಸ್​ ಎಂದು ಬಿಜೆಪಿಯವರು ಸುಮ್ಮನೆ ಬಣ್ಣ ಕಟ್ಟುತ್ತಿದ್ದಾರೆ. ನಮ್ಮಲ್ಲಿ ಎಲ್ಲರೂ ನಾಯಕರುಗಳೆ, ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.

ಅಲ್ಲದೇ ಉಪಚುನಾವಣೆ ನಂತರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಹೊರಗಿಟ್ಟು ಮೈತ್ರಿ ಮಾಡಿಕೊಳ್ಳಲು ಮೂಲ ಕಾಂಗ್ರೆಸ್ಸಿಗರ ಪ್ಲಾನ್ ಮಾಡುತ್ತಿದ್ದಾರೆ. ಅದು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

Latest article