ಬೆಂಗಳೂರು: ಸಿಎಂ ಹೇಳಿದ್ದು ತಿಳಿದು ಬಹಳ ಸಂತೋಷವಾಯ್ತು ನಿನ್ನೆ ಸಿಎಂ ನನಗೆ ಕರೆ ಮಾಡಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ನಾನು ಜವಾಬ್ದಾರಿ ಮನುಷ್ಯ. ಸರ್ಕಾರಕ್ಕೆ ಪತ್ರ ಬರೆದಿದ್ದೆ. ಅಧಿಕಾರಿಗಳು ರಿಪ್ಲೈ ಕೂಡ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಸದ್ಯ ಪ್ರಜಾಪ್ರಭುತ್ವದಲ್ಲಿ ವಿಪಕ್ಷಗಳು ಇರಬೇಕು. ಕಾರ್ಯಕ್ರಮ ಮಾಡೇ ಮಾಡುತ್ತೇವೆ. ಜೂನ್ 14 ರಂದು ಕಾರ್ಯಕ್ರಮ ಮಾಡಲು ಆಗಲ್ಲ, ಸೀನಿಯರ್ ಲೀಡರ್ಸ್ ಜೊತೆ ಚರ್ಚಿಸಬೇಕು. ಗೈಡ್ಲೈನ್ಸ್ ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ಮಾಡಬೇಕು ಎಂದರು.
ಇನ್ನು ಸಿಎಲ್ಪಿ, ದೆಹಲಿ ನಾಯಕರ ಜೊತೆ ಮಾತನಾಡಬೇಕು. ಸದ್ಯದಲ್ಲೇ ದಿನಾಂಕ ನಿಗದಿಪಡಿಸುತ್ತೇವೆ. ಎಲ್ಲಾ ಅಬ್ಸರ್ವರ್ಸ್ ಕೆಲಸ ಮುಂದುವರೆಸಿ, ಎಂಎಲ್ಸಿ ಚುನಾವಣೆ ಗಮನದಲ್ಲಿಟ್ಟುಕೊಳ್ಳಬೇಕಿದೆ. ಎಲ್ಲವನ್ನು ಚರ್ಚಿಸಿ ದಿನಾಂಕ ನಿಗದಿಪಡಿಸುತ್ತೇವೆ ಎಂದು ಪದಗ್ರಹಣ ಕಾರ್ಯಕ್ರಮದ ಬಗ್ಗೆ ಮಾತನಾಡಿದರು.
ಸಿಎಂ ರಾಜ್ಯದ ಜನತೆ ಮುಂದೆ ತಿಳಿಸಿದ್ದಾರೆ. ತಿಳಿಸಿದ ನಂತರ ಇನ್ನೇನುಬೇಕು. ಸತ್ಯ ಪರೀಕ್ಷೆಗೆ ಕೇಳೋಕೆ ಆಗಲ್ಲ, ಸಿಎಂ ಮಾತು ಕೊಟ್ಟ ಮೇಲೆ ಮುಗೀತು. ಇದು ನನ್ನ ಕಾರ್ಯಕ್ರಮ ಅಲ್ಲ, ಕಾರ್ಯಕರ್ತರ ಕಾರ್ಯಕ್ರಮ. ನನಗೆ ಆಷಾಢ ಅದೂ ಇದೂ ಅಂತ ಏನಿಲ್ಲ, ಜನಕ್ಕೆ ಅನುಕೂಲವಾಗುವಂತ ದಿನ ನೋಡ್ತೀನಿ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ನುಡಿದರು.