Sunday, October 2, 2022

ಸಿಎಂ ಯಡಿಯೂರಪ್ಪಗೆ ಪತ್ರ ಬರೆದ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು..!

Must read

ಬೆಂಗಳೂರು: ಸಿಎಂ ಯಡಿಯೂರಪ್ಪಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪತ್ರ ಬರೆದಿದ್ದಾರೆ.

ಕೋವಿಡ್ ೧೯ ಸವಾಲಿನ ಸಂದರ್ಭವನ್ನು ‌ನಿಭಾಯಿಸುತ್ತಿರುವ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ವಿರೋಧ ಪಕ್ಷವಾಗಿ ಈ ಸಂದರ್ಭದಲ್ಲಿ ಟೀಕೆಗಳಿಗಿಂತ ಸಲಹೆ ನೀಡುವ ಮೂಲಕ ಜನತೆಗೆ ನೆರವಾಗಬೇಕು ಎಂಬುದು ನನ್ನ ಭಾವನೆ. ಸರ್ಕಾರದಿಂದ ಅಸಂಘಟಿತ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು ಅಭಿನಂದಾನರ್ಹ ಎಂದಿದ್ದಾರೆ.

ಆದರೆ ಖಾಸಗಿ ವಲಯದಲ್ಲಿ ವೃತ್ತಿ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಅಪಾರ ತೊಂದರೆ ಆಗಿದೆ. ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡ್ತಿರೋ ಶಿಕ್ಷಕರಿಗೆ ಲಾಕ್ ಡೌನ್ ನಿಂದ ಅಪಾರ ಆರ್ಥಿಕ ತೊಂದರೆ ಆಗಿದೆ. ಖಾಸಗಿ ಶಿಕ್ಷಕರ ತೊಂದರೆ ನೀಗಿಸಲು ಸರ್ಕಾರ ಕೂಡಲೇ 1300 ಆರ್ ಟಿ ಇ ಬಾಕಿ ರಿಲೀಸ್ ಮಾಡಬೇಕು. ಇದರಿಂದ ಖಾಸಗಿ ಶಿಕ್ಷಕರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಪತ್ರದ ಮುಖೇನ ಸಿಎಂಗೆ ದೇವೇಗೌಡರು ಮನವಿ ಮಾಡಿದ್ದಾರೆ.

Latest article