Tuesday, August 16, 2022

ಸಿಎಂ ಯಡಿಯೂರಪ್ಪಗೆ ಜ್ಞಾನ ಇಲ್ಲ ಅನಿಸುತ್ತದೆ – ಸಿದ್ದರಾಮಯ್ಯ ಕಿಡಿ

Must read

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯದ್ದು ಹಿಟ್ಲರ್ ಆಡಳಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಮೋದಿ ವಿರುದ್ಧ ಯಾರು ಮಾತನಾಡಬಾರದು ಮಾತನಾಡಿದರೆ ಅವರನ್ನು ಟಾರ್ಗೆಟ್​ ಮಾಡಲಾಗುತ್ತಾದೆ. ಮೋದಿಯವರದ್ದು ಒಂದು ರೀತಿಯಲ್ಲಿ ಹಿಟ್ಲರ್​ ಆಡಳಿತ ಎಂದು ಕಿಡಿಕಾರಿದರು.

ನಂತರ ನೆರೆ ಸಂತ್ರಸ್ತರಿಗೆ ಪರಿಹಾರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾವು ಕನಿಷ್ಠ ಪಕ್ಷ 5 ಸಾವಿರ ಕೋಟಿ ಪರಿಹಾರ ತಾತ್ಕಾಲಿಕವಾಗಿ ಕೇಳಿದ್ದೆವು. ಆದರೆ ಎರಡು ತಿಂಗಳ ಬಳಿಕ 1200 ಕೋಟಿ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ಹಣವನ್ನು ಖರ್ಚು ಮಾಡಿರಬೇಕು. ಖಜಾನೆಯಲ್ಲಿ ಹಣವಿಲ್ಲ ಅಂತಾರೆ, ಅವರಿಗೆ ಜ್ಞಾನ ಇದ್ಯಾ ಇಲ್ವಾ ಅಂತಾ ಗೊತ್ತಿಲ್ಲ. ಯಡಿಯೂರಪ್ಪ ಅವರಿಗೆ ಹಣಕಾಸಿನ ಬಗ್ಗೆ ಜ್ಞಾನ ಇಲ್ಲಾ ಅನ್ಸುತ್ತೆ. ಖಜಾನೆಯಲ್ಲಿ ಹಣ ಖಾಲಿ ಆಗೋಕೆ ಚಾನ್ಸೇ ಇಲ್ಲ. ಯಾಕಂದರೆ ಪ್ರತಿ ತಿಂಗಳು ತೆರಿಗೆ ಸಂಗ್ರಹವಾಗುತ್ತೆ ಎಂದು ಸಿದ್ದರಾಮಯ್ಯ ತಿಳಿಸಿದರು.

Latest article