Wednesday, May 18, 2022

ಸಿಎಂಗೆ ತಾಕತ್ ಇದ್ರೆ ಎಲ್ಲ ಜಯಂತಿ ರದ್ದು ಮಾಡಲಿ – ವಾಟಾಳ್ ನಾಗರಾಜ್ ಸವಾಲ್

Must read

ಮೈಸೂರು: ಟಿಪ್ಪು ವಿಷಯ ಪಠ್ಯ ಪುಸ್ತಕದಿಂದ ಕೈ ಬಿಡದಂತೆ ಒತ್ತಾಯಿಸಿ ಕರ್ನಾಟಕ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಸೋಮವಾರ ಪ್ರತಿಭಟನೆ ಮಾಡಿದರು.

ನಗರದ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಔರಾಧ್ಕರ್ ವರದಿ ಜಾರಿ ಮಾಡುವುದು ಬಿಟ್ಟು, ಟಿಪ್ಪು ಹೆಸರನ್ನು ಪಠ್ಯದಿಂದ ತೆಗೆಯಲು ಹೊರಟಿರುವುದು ಸರಿಯಲ್ಲ ಎಂದು ವಾಟಾಳ್ ಅವರು ಸರ್ಕಾರದ ವಿರುದ್ಧ ಕಿಡಿಕಾರಿದರು.

ಅಂತೆಯೇ ಟಿಪ್ಪು ಜಯಂತಿ ವಿಚಾರವಾಗಿ ಮಾತನಾಡಿ, ಸಿಎಂ ಬಿಎಸ್​ ಯಡಿಯೂರಪ್ಪ ಅವರಿಗೆ ತಾಕತ್ ಇದ್ದರೆ ಎಲ್ಲ ಸಮುದಾಯದ ಜಯಂತಿಗಳನ್ನು ರದ್ದು ಮಾಡಲಿ ಎಂದು ರಾಜ್ಯ ಸರ್ಕಾರದ ವಿರುದ್ಧ ಬಹಿರಂಗ ಸವಾಲು ಹಾಕಿದರು.

Latest article