Sunday, October 2, 2022

ಸಾಹುಕಾರ್‌ಗೆ ರೈತರಿಂದ ಘೇರಾವ್: ಒಂದೇ ಕ್ಷಣದಲ್ಲಿ ರೈತರ ಸಿಟ್ಟು ತಣ್ಣಗೆ ಮಾಡಿದ ಜಾರಕಿಹೊಳಿ..!

Must read

ಚಿಕ್ಕಮಗಳೂರು: ಇಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವೀಕ್ಷಣೆಗೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರಕ್ಕೆ ಆಗಮಿಸಿದ್ದರು. ಈ ವೇಳೆ ರೈತರು, ತಮ್ಮ ಸಮಸ್ಯೆಗಳನ್ನ ಹೇಳಿಕೊಂಡರು.

ಇದೇ ವೇಳೆ, ಕಾಮಗಾರಿ ವೀಕ್ಷಣೆ ಮುಗಿಸಿ ಹೊರಟ ಸಚಿವರ ಕಾರಿಗೆ ಅಡ್ಡ ಹಾಕಿದ ಸ್ಥಳಿಯರು ಹಾಗೂ ರೈತರು ಕಳಪೆಯಿಂದ ಕೂಡಿರೋ ರೈಲ್ವೆ ಅಂಡರ್ ಪಾಸ್ ಸೇತುವೆ ಕಾಮಗಾರಿಯನ್ನ ವೀಕ್ಷಿಸುವಂತೆ ಘೇರಾವ್ ಹಾಕಿದರು.

ಆಗ ಕಾರಿನಿಂದ ಕೆಳಗಿಳಿದ ಸಚಿವ ರಮೇಶ್ ಜಾರಕಿಹೊಳಿ, ಫೋಟೋ ಹೊಡೆಸಿಕೊಂಡು ಹೋಗಬೇಕಾ. ನಿಮ್ಮ ಕೆಲಸ ಆಗಬೇಕಾ. ಎಂದು ಒಂದೇ ಮಾತಿಗೆ ಆಕ್ರೋಶಭರಿತ ರೈತರನ್ನ ಸಮಾಧಾನ ಮಾಡಿದ್ದಾರೆ. ನಿಮ್ಮ ಸಮಸ್ಯೆಯ ಫೈಲ್ ಬಂದಿದೆ. ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆಂದು ಆಶ್ವಾಸನೆ ಕೊಟ್ಟು ಮುಂದೆ ಸಾಗಿದ್ದಾರೆ. ಇದೇ ವೇಳೆ ರೈತರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest article