Thursday, May 19, 2022

'ಸಾವರ್ಕರ್​ಗೆ ಭಾರತರತ್ನ ಕೊಟ್ಟರೇ, ಸ್ವಾತಂತ್ರ್ಯ ಯೋಧರಿಗೆ ಗೌರವ ಕೊಟ್ಟಂತೆ'

Must read

ಕೊಪ್ಪಳ: ಸಾವರ್ಕರ್ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟವರು, ದೇಶದ ಸ್ವಾತಂತ್ರ್ಯ ದಲ್ಲಿ ಸಾವರ್ಕರ್ ಪಾತ್ರ ಬಹುಮುಖ್ಯವಾಗಿದೆ ಎಂದು ವೀರ ಸಾವರ್ಕರ್​ಗೆ ಭಾರತರತ್ನ ಕೊಡುವ ವಿಚಾರ ಬಗ್ಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸೋಮವಾರ ಪ್ರತಿಕ್ರಿಯಿಸಿದರು.

ಕೊಪ್ಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್​ಗೆ ಭಾರತರತ್ನ ಕೊಟ್ರೆ ಸ್ವಾತಂತ್ರ್ಯ ಯೋಧರಿಗೆ ಗೌರವ ಕೊಟ್ಟಂತೆ. ಸಾವರ್ಕರ್​ಅನ್ನು ಹಿಯಾಳಿಸಿದರೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಿಗೆ ಅವಮಾನ ಮಾಡಿದಂತೆ ಎಂದರು.

ಇನ್ನು ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಕೊಡಲು ನಾವು ಸಿದ್ದರಿದ್ದೇವೆ. ಇವತ್ತಿಲ್ಲ ನಾಳೆ ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ಬಂದೆ ಬರುತ್ತೆ. ನಾವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಕರ್ನಾಟಕದಲ್ಲಿ ಅರ್ಥಿಕ ಪರಿಸ್ಥಿತಿ ಚೆನ್ನಾಗಿದೆ. ಯಾವುದೇ ಹಣಕಾಸಿನ ತೊಂದರೆ ಇಲ್ಲ ಎಂದು ಅವರು ತಿಳಿಸಿದರು.

ಸದ್ಯ ನೆರೆಹಾವಳಿ ಬಾರದಂತೆ ದೇವರಲ್ಲಿ ಪ್ರಾರ್ಥಿಸುತ್ತೇವೆ. ನೆರೆಹಾವಳಿ ಮತ್ತೆ ಬಂದರೆ ಸರ್ಕಾರ ಸಮರ್ಪಕವಾಗಿ ನಿಭಾಯಿಸುತ್ತೇವೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಹೆಚ್ಚಿನ ಬಹುಮತದಲ್ಲಿ ಬರುತ್ತೆ. 273 ಸ್ಥಾನಗಳಲ್ಲಿ ಬಿಜೆಪಿ ಮತ್ತು ಮೈತ್ರಿ ಪಕ್ಷ ಗೆಲ್ಲುತ್ತೆ ಎಂದು ಅವರು ನುಡಿದರು.

ಅದುವಲ್ಲದೇ ಉಪಚುನಾವಣೆಯಲ್ಲಿ ಲಕ್ಷ್ಮಣ ಸವದಿ ಸ್ಪರ್ಧೆ ವಿಚಾರ ಬಗ್ಗೆ ಮಾತನಾಡಿದ ಅವರು, ಭವಿಷ್ಯದಲ್ಲಿ ಏನೀದೆ ಅಂತಾ ಗೊತ್ತಿಲ್ಲ, ಅನರ್ಹ ಶಾಸಕರು ಇನ್ನೂ ಪಕ್ಷ ಸೇರ್ಪಡೆ ಆಗಿಲ್ಲ, ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ತೀರ್ಮಾನವಾಗುತ್ತೆ, ಬಿಜೆಪಿ ಪಕ್ಷದಲ್ಲಿ ಯಾವುದೇ ಒಡಕು ಇಲ್ಲ, ಹಂಪೆ ಉತ್ಸವ ಎರಡು ದಿನಗಳ ಕಾಲ ನಡೆಯುತ್ತೆ, ಶೀಘ್ರದಲ್ಲೇ ದಿನಾಂಕ ನಿಗದಿ ಮಾಡಲಾಗುವುದು ಎಂದು ಕೊಪ್ಪಳದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರು ಮಾಹಿತಿ ನೀಡಿದರು.

Latest article