Wednesday, May 18, 2022

ಸಾರಿಗೆ ನೌಕಕರಿಗೆ ಸಂಬಳ ತಡವಾಗಿರೋದ್ದಕ್ಕೆ ಕಾರಣ ಕೊಟ್ಟ ಡಿಸಿಎಂ

Must read

ಚಿತ್ರದುರ್ಗ: ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಬಳ ತಡವಾಗಿದೆ ಅದಕ್ಕಾಗಿ ನಾನು ವಿಷಾದಿಸುತ್ತೇನೆ ಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಅವರು ಸೋಮವಾರ ಹೇಳಿದ್ದಾರೆ.

ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ನಿರ್ವಾಹಕ, ಚಾಲಕರರಿಗೆ ಸಂಬಳ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ತಿಂಗಳು 5 ರಿಂದ 10 ನೇ ತಾರೀಖಿನೊಳಗೆ ಸಂಬಳ ಆಗ್ತಿತ್ತು. ದಸರಾ ಹಬ್ಬ ಇದೋದರಿಂದ ಮುಂಚಿತವಾಗಿ ಸಂಬಳ ಆಗಬೇಕಿತ್ತು. ಬಿಎಂಟಿಸಿ ಸಿಬ್ಬಂದಿಗೆ ಮುಂಚಿತವಾಗಿ 5 ಸಾವಿರ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇನ್ನು ನಿಗಮದಲ್ಲಿ ಹಣಕಾಸಿನ ತೊಂದರೆ ಇದೆ, ಸರ್ಕಾರದಿಂದಲೂ ಹಣ ಬಂದಿಲ್ಲ, ಅಲ್ಲದೇ ಮೂರು ದಿನಗಳಿಂದ ಬ್ಯಾಂಕ್ ರಜೆ ಇದೆ. 9ನೇ ತಾರೀಖು ಸಂಪೂರ್ಣ ಸಂಬಳ ಪಾವತಿಸಲಾಗುವುದು ಎಂದು ಸಾರಿಗೆ ನೌಕರರಿಗೆ ಭರವಸೆ ನೀಡಿದರು.

ಪಕ್ಷದಲ್ಲಿ ಸಿಎಂ ಬಿಎಸ್​ ಯಡಿಯೂರಪ್ಪ ಸೈಡ್ ಲೈನ್ ಎಂಬ ವಿಚಾರವಾಗಿ ಮಾತನಾಡಿದ ಡಿಸಿಎಂ, ಯಡಿಯೂರಪ್ಪ ನಮ್ಮ ನಾಯಕ, ಪ್ರಶ್ನಾತೀತ ನಾಯಕರು. ಯಡಿಯೂರಪ್ಪ ಸೈಡ್ ಲೈನ್ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟನೆ ಕೊಟ್ಟರು.

ವಿಧಾನಸೌಧದ ಆವರಣದ ಗಾಂಧಿ ಪ್ರತಿಮೆ ಮುಂದೆ ಜೆಡಿಎಸ್ ಪ್ರತಿಭಟನೆ ವಿಷಯಕ್ಕೆ ಸಂಬಂಧಿದಂತೆ ಮಾತನಾಡಿದ ಸಚಿವರು, ದೇವೇಗೌಡರು ಮಾಜಿ ಪ್ರಧಾನಿಗಳು, ಅವರ ಬಗ್ಗೆ ಗೌರವ ಇದೆ. ಅವರು ಹೋರಾಟ ಮಾಡುವ ಅವಶ್ಯಕತೆ ಇಲ್ಲ, ಕೇಂದ್ರದಿಂದ ಪರಿಹಾರ ಬಿಡುಗಡೆ ಆಗಿದೆ. 1200 ಕೋಟಿ ತಾತ್ಕಾಲಿಕ ಬಿಡುಗಡೆ, 2 ನೇ ಹಂತದಲ್ಲಿ ಹಣ ಬಿಡುಗಡೆ ಆಗತ್ತೆ ಎಂದು ಅವರು ತಿಳಿಸಿದರು.

Latest article