Tuesday, August 16, 2022

ಸದಾ ಕನ್ನಡವನ್ನು ಅಗ್ರಸ್ಥಾನದಲ್ಲಿ ನೋಡೋಕೆ ರಾಕಿಂಗ್ ಸ್ಟಾರ್ ಯಶ್ ಮಾಡಿದ್ದೇನು ಗೊತ್ತಾ..?

Must read

ಬೆಂಗಳೂರು: ಇತ್ತೀಚೆಗೆ ಫೇಸ್​ಬುಕ್​ನಲ್ಲಿ ಕನ್ನಡ ಕವನ ವಾಚನ ಸಖತ್ ಸಂಚಲ ಹುಟ್ಟಿಸುತ್ತಿದೆ. ಪತ್ರಕರ್ತರು, ಸಾಹಿತಿಗಳು, ವಿದ್ಯಾರ್ಥಿಗಳು ಅಷ್ಟೇ ಯಾಕೆ ಸಿನಿಮಾ ಕಲಾವಿದರು ಕೂಡ ಇದನ್ನು ಪಾಲಿಸ್ತಿದ್ದಾರೆ.

ನವೆಂಬರ್ ಮಾಸವಾದ್ದರಿಂದ ಕನ್ನಡ ರಾಜ್ಯೋತ್ಸವ ಮಾಸದಲ್ಲಿ ಕನ್ನಡ ಪದ್ಯಗಳನ್ನು ವಾಚನ ಮಾಡೋ ಕಲ್ಪನೆ ಯಾರು ತಂದರೋ ಗೊತ್ತಿಲ್ಲ. ಆದರೆ ಅದರಿಂದ ನಮ್ಮ ಕನ್ನಡ ಸಾಹಿತ್ಯದ ಉದ್ದಗಲ, ತೀವ್ರತೆ, ತೀಕ್ಷ್ಣತೆಯ ಪರಿಚಯ ಆಗ್ತಿದೆ.

ಗೋಲ್ಡನ್ ಸ್ಟಾರ್ ನಟ ಗಣೇಶ್ ಹಾಗೂ ರಮೇಶ್ ಅರವಿಂದ್ ಕವನ ವಾಚನದಿಂದ ಚಿತ್ರರಂಗದಲ್ಲಿ ಶುರುವಾದ ಈ ವಿಶೇಷವಾದಂತಹ ಅಭಿಯಾನ ನ್ಯಾಷನಲ್ ಸ್ಟಾರ್ ಯಶ್​ರನ್ನು ಮುಟ್ಟಿದೆ. ಹಿರಿಯ ಪತ್ರಕರ್ತ ಕಮ್ ಬರಹಗಾರ ಜೋಗಿ ಅವರು ನೀಡಿದ ಕವನ ವಾಚನ ಪಂಥಾಹ್ವಾನವನ್ನು ಯಶ್ ಸ್ವೀಕರಿಸಿ, ರಾಷ್ಟ್ರಕವಿ ಕುವೆಂಪುರವರ ವಿಶ್ವಮಾನವ ಗೀತೆ ಅನಿಕೇತನವನ್ನು ತಮ್ಮ ಕಂಠದಲ್ಲಿ ಮಂಡಿಸಿದ್ದಾರೆ.

ಓ ನನ್ನ ಚೇತನ, ಆಗು ನೀ ಅನಿಕೇತನ ಅನ್ನೋ ಸಾಲುಗಳನ್ನು ತುಂಬಾ ಸೊಗಸಾಗಿ ಹೇಳೋ ಮೂಲಕ ಯಶ್​ರೊಳಗಿದ್ದ ಅಚ್ಚ ಕನ್ನಡಿಗನನ್ನು ಮತ್ತೊಮ್ಮೆ ಬಡಿದೆಬ್ಬಿಸಿದ್ದಾರೆ.

ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯನ್ನು ಸದಾ ಉತ್ತುಂಘದಲ್ಲೇ ನೋಡಬಯಸೋ ಸ್ವಾಭಿಮಾನಿ ಕನ್ನಡಿಗ ಯಶ್. ಕನ್ನಡದ ಮೇಲಿನ ಅವರ ಅಭಿಮಾನ, ಆಸಕ್ತಿ, ಪ್ರೀತಿ- ಗೌರವ ಸಿನಿಮಾಗಳ ಮೂಲಕ ದೊಡ್ಡ ಪರದೆ ಮೇಲೆ ನೋಡುವಂತಾಗಿದೆ.

ಪ್ರತಿಯೊಬ್ಬ ಕನ್ನಡಿಗ ಎದೆಮುಟ್ಟಿ ನಾನು ಕನ್ನಡಿಗ ಅಂತ ಹೇಳಿಕೊಳ್ಳೋ ದಿನ ಬರಬೇಕು. ಕನ್ನಡ ಸಿನಿಮಾನೇ ನಂ.1 ಅಂತ ಹೇಳಬೇಕು ಅನ್ನೋ ಮಹತ್ತರ ಕನಸು ಕಂಡ ಯಶ್, ಕೆಜೆಎಫ್​ನಿಂದ ಅದನ್ನು ಸಾಕಾರಗೊಳಿಸಿದ್ದಾಗಿದೆ.

ಅಣ್ತಮ್ಮನ ಕನಸು ನನಸಾದ ಬಳಿಕ ಅದನ್ನು ಹಾಗೇ ಉಳಿಸಿ, ಬೆಳೆಸೋ ಯತ್ನಗಳೂ ನಡೀತಿವೆ. ನಾಡು- ನುಡಿ- ಜಲಕ್ಕಾಗಿ ಸದಾ ಎದೆಯುಬ್ಬಿಸಿಕೊಂಡು ಮುಂದೆ ಬರೋ ಯಶ್, ಈ ಕವನ ವಾಚನ ಅಭಿಯಾನದಲ್ಲೂ ಮುಂದೆ ಬಂದು ಈ ರೀತಿಯ ಕಾರ್ಯ ಮಾಡಿರೋದು ಪ್ರತಿಯೊಬ್ಬ ಕನ್ನಡಿಗನಿಗೂ ಖುಷಿ ಕೊಟ್ಟಿದೆ. ಅದರಲೂ ಅವರ ಅಸಂಖ್ಯಾತ ಅಭಿಮಾನಿಗಳು ಇದನ್ನು ಫಾಲೋ ಕೂಡ ಮಾಡ್ತಿರೋದು ಮತ್ತೊಂದು ವಿಶೇಷ.

Also read:  ಇದನ್ನು ದಯಮಾಡಿ ನೆರವೇರಿಸಿಕೊಡಿ: ಡಿ ಬಾಸ್ ಅಭಿಮಾನಿಗಳಲ್ಲಿ ಮಾಡಿದ ಮನವಿಯಾದರೂ ಏನು..?

Latest article