ಕೊರೊನಾ ಮತ್ತು ಲಾಕ್ಡೌನ್ ಸಮಸ್ಯೆಯಿಂದ ಇಡೀ ದೇಶವೇ ತತ್ತರಿಸಿ ಹೋಗಿವೆ. ಅದರಲ್ಲೂ ದಿನಗೂಲಿ ಕಾರ್ಮಿಕರು, ಸಣ್ಣಪುಟ್ಟ ಉದ್ಯೋಗ ಮಾಡ್ತಿರೋರು,ಕಿರಾಣಿ ಅಂಗಡಿಗಳ ವ್ಯಾಪಾರಿಗಳು ತೀರಾ ಸಂಕಷ್ಟದಲ್ಲಿದ್ದಾರೆ. ಇದೀಗ ಇಂತವರ ಪರ ದನಿಯೆತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ .
ಕೊರೊನಾ ಮತ್ತು ಲಾಕ್ಡೌನ್ನಿಂದ ಸಾಕಷ್ಟು ವರ್ಗಗಳು ಅತೀವ ಸಮಸ್ಯೆ ಎದುರಿಸ್ತಾ ಇದೆ. ಈ ನಿಟ್ಟಿನಲ್ಲಿ ಸ್ಯಾಂಡಲ್ವುಡ್ನ ಸೆಲೆಬ್ರೆಟಿಗಳು ಮತ್ತು ಅವ್ರ ಅಭಿಮಾನಿಗಳು ತಮ್ಮ ಕೈಲಾದಷ್ಟು ನೆರವಿನ ಹಸ್ತ ಚಾಚ್ತಿರೋದು ಗೊತ್ತೇಯಿದೆ. ಹಾಗೆಯೇ ಯಾವುದೇ ಸಮಾಜಮುಖಿ ಕೆಲಸಗಳು, ಕಷ್ಟದಲ್ಲಿರೋರಿಗೆ ಸಹಾಯ ಮಾಡೋದು, ರೈತರ ಪರ ದನಿಯೆತ್ತೋದು ಇಂತಹ ಕಾರ್ಯಗಳಲ್ಲಿ ಸದಾ ಮುಂದಿರ್ತಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಇದೀಗ ಅದೇ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ ಚಾಲೆಂಜಿಂಗ್ ಸ್ಟಾರ್ ಪತ್ನಿ ವಿಜಯಲಕ್ಷ್ಮೀ .
ಕೊರೊನಾ ಮತ್ತು ಲಾಕ್ಡೌನ್ನಿಂದ ತೀರಾ ನಷ್ಟಕೀಡಾಗಿರೋ ಕಿರಾಣಿ ಅಂಗಡಿಗಳ ಪರ ದನಿಯೆತ್ತಿದ್ದಾರೆ ವಿಜಯಲಕ್ಷ್ಮಿ ದರ್ಶನ್. ಟ್ವಿಟ್ಟರ್ನಲ್ಲಿ ಬರೆದುಕೊಂಡಿರೋ ವಿಜಯಲಕ್ಷ್ಮಿ, ಇನ್ನುಮುಂದಾದ್ರೂ ಅಮೇಜಾನ್ ಮೂಲಕ ದಿನಸಿ ಖರೀದಿ ಮಾಡೋ ಬದಲು, ನಿಮ್ಮ ಅಕ್ಕಪಕ್ಕದಲ್ಲಿರೋ ದಿನಸಿ ಅಂಗಡಿಗಳಲ್ಲಿ ಖರೀದಿ ಮಾಡಿ, ಸ್ಟಾರ್ ಹೋಟೇಲ್ಗಳಲ್ಲಿ ಕಾಫಿ ಕುಡಿಯೋ ಬದಲು, ಚಿಕ್ಕಪುಟ್ಟ ಹೊಟೇಲ್ಗಳು, ಟೀ ಅಂಗಡಿಗಳಲ್ಲಿ ಕುಡಿಯಿರಿ. ಕಿರಾಣಿ ಅಂಗಡಿಗಳಲ್ಲಿ ಅಗತ್ಯ ವಸ್ತುಗಳನ್ನ ಖರೀದಿ ಮಾಡಿ ಅಂತ ಹೇಳಿದ್ದಾರೆ.
ಅಷ್ಟೇ ಅಲ್ಲ, ಪಿಜಾ, ಮ್ಯಾಕ್ಡೋನಲ್ಸ್, ಕೆಎಫ್ಸಿಗಳು, ಲಾಕ್ಡೌನ್ ಇದ್ದರೂ ಕೂಡ ಬದುಕುತ್ತವೆ. ಆದರೆ, ಸಣ್ಣಪುಟ್ಟ ವ್ಯಾಪಾರಿಗಳು ತೊಂದರೆ ಅನುಭವಿಸ್ತಾ ಇದ್ದಾರೆ. ಹಾಗಾಗಿ ಎಲ್ಲರೂ ಕೂಡ ಕಿರಾಣಿ ಅಂಗಡಿಗಳಿಗೆ ಪ್ರಾಮುಖ್ಯತೆ ಕೊಡಿ. ಇದರಿಂದ ಅವರ ಬದುಕಿಗೆ ಸಹಾಯವಾಗುತ್ತದೆ ಅಂತ ಮನವಿ ಮಾಡಿದ್ದಾರೆ.
— Vijayalakshmi (@vijayaananth2) May 21, 2020
ಈಗಾಗ್ಲೇ ವಿದೇಶಿ ಪ್ರಾಡಕ್ಟ್ಗಳನ್ನ ಬಿಟ್ಟು ಸ್ವದೇಶಿ ಪ್ರಾಡಕ್ಟ್ಗಳನ್ನೇ ಬಳಸುವಂತೆ ಅಭಿಯಾನವೊಂದು ಶುರುವಾಗಿದೆ. ಅಂತೆಯೇ ವಿದೇಶಿ ಆ್ಯಪ್ಗಳನ್ನ ಬಿಟ್ಟು,ಆನ್ಲೈನ್ ಗ್ರೋಸರಿ ಶಾಪಿಂಗ್ ಬಿಟ್ಟು, ಕಿರಾಣಿ ಅಂಗಡಿಗೆ ಭೇಟಿ ನೀಡಿ, ನಮ್ಮವರ ಬದುಕಿಗೆ, ನಾವೇ ನೆರವಾಗಿ ನಿಲ್ಲಬೇಕಾಗಿದೆ.