ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ನಗರದಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಸಂಸದರೊಬ್ಬರ ಪುತ್ರಿಗೆ ಕೋವಿಡ್-19 ಪಾಸಿಟಿವ್ ಪತ್ತೆ ಆಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ತಿಳಿಸಿದ್ದಾರೆ.
ಮಂಗಳವಾರದ ಮಾಧ್ಯಮದ ಜೊತೆ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆ ಮನೆಯಲ್ಲಿ ಇರುವ ಸಂಸದರ ಪುತ್ರಿ. ಗಯಾನದಿಂದ ಭಾರತಕ್ಕೆ ಬಂದಿದ್ದರು. ಅವರ ಮನೆಯಲ್ಲಿ ಸಂಸದರು ಸೇರಿದಂತೆ ಒಟ್ಟು 6 ಜನ ಹೊರ ದೇಶದಿಂದ ಬಂದಿದ್ದರು ಎಂದು ಡಿಸಿ ಮಾಹಿತಿ ನೀಡಿದ್ದಾರೆ.
ಇನ್ನು ಅವರ ಮನೆ ಸುತ್ತಲೂ 5 ಕಿ.ಮೀ ರೆಡ್ ಝೋನ್ ಎಂದು ಘೋಷಣೆ ಮಾಡಲಾಗಿದ್ದು, ಅಲ್ಲಿರುವರು ಮನೆಯವರು ಯಾರೂ ಹೊರ ಬರುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಸದ್ಯ ಸಂಸದರು ಸೇರಿದಂತೆ ಒಟ್ಟು 6 ಜನರ ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. 4 ಜನರ ವರದಿ ಬಂದಿದ್ದು 4 ಜನರದ್ದು ನೆಗೆಟಿವ್ ಬಂದಿದೆ. ಇನ್ನೂ ಇಬ್ಬರ ವರದಿ ಬರೋದು ಬಾಕಿ ಇದೆ. ಸೋಂಕಿತ ಮಹಿಳೆ ಜೊತೆ ಮಕ್ಕಳು ಇದ್ದರು. ಆದರೆ, ಮಕ್ಕಳಲ್ಲಿ ಯಾವುದೇ ಸೋಂಕು ಕಂಡು ಬಂದಿಲ್ಲ ಎಂದು ವಿನೋತ್ ಪ್ರಿಯಾ ಅವರು ಹೇಳಿದ್ದಾರೆ.
ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದ ಆರು ಮಂದಿ ಮೇಲೆ ನಿಗಾ ವಹಿಸಲಾಗಿದ್ದು, ಸೋಂಕಿತ ವ್ಯಕ್ತಿ ಸಂಸದರ ಪುತ್ರಿ. ಸದ್ಯ ಸಂಸದರ ಜೊತೆಯಲ್ಲಿರುವ ಸೋಂಕಿತ ಮಹಿಳೆಯಿದ್ದು, ಅವರ ಜೊತೆಗೆ ಜೊತೆ ಬಂದಿದ್ದ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಬಗ್ಗೆ ತೀವ್ರ ನಿಗಾವಹಿಸಲಾಗಿದೆ. ಗಯಾನಾ-ದೆಹಲಿ-ಚಿತ್ರದುರ್ಗಕ್ಕೆ ಸೋಂಕಿತ ಮಹಿಳೆ ಬಂದಿದ್ದರು ಎಂದು ತಿಳಿಸಿದ್ದಾರೆ.
ಇನ್ನು ದಾವಣಗರೆಯಲ್ಲಿ ಹೋಂ ಕ್ವಾರೆಂಟೈನ್ ಮಾಡಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಸಂಸದರು ಮನವಿ ಮಾಡಿಕೊಂಡಿದ್ದಾರೆ.