ತುಮಕೂರು: ವಿಧಾನಸೌಧದಲ್ಲಿ ಭಾಷಣ ಮಾಡಿದರೆ ಗಡಗಡ ನಡುಗುತ್ತಿತ್ತು ಅನ್ನುತ್ತಿದ್ದವರು. ಈಗ ದೆಹಲಿಗೆ ಹೊದ್ರೆ ಅವರ ಮುಂದೆ ನಿಂತುಕೊಂಡು ಉಚ್ಚೆ ಮಾಡ್ತಾನೆ ಎಂದು ಮಾಜಿ ಸಚಿವ ಎಸ್ ಆರ್ ಶ್ರೀನಿವಾಸ್ ಅವರು ಬಿಎಸ್ವೈ ವಿರುದ್ಧ ಖಾರವಾಗಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಜೆ.ಡಿ.ಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಎಸ್ ಯಡಿಯೂರಪ್ಪ ಅಧಿಕಾರ ಇರದಿದ್ದರೆ ಅವನು ಹೀಗಾಗಲೇ ಸತ್ತು ಹೋಗುತ್ತಿದ್ದರು, ಇಷ್ಟೋತ್ತಿಗೆ ಅವರನ್ನು ಮಣ್ಣು ಮಾಡಬೇಕಿತ್ತು ಎಂದು ಅವರು ಹೇಳಿದ್ದಾರೆ.
ಅಲ್ಲದೇ ನೆರೆಪರಿಹಾರದ ಬಗ್ಗೆ ಮಾತನಾಡಿದ ಅವರು, ರಾಜ್ಯದ ಸ್ಥಿತಿ ನೋಡಿದರೆ ತಿಳಿಯುತ್ತೆ, ಸಮರ್ಥರಿಗೆ ಆಡಳಿತ ನೀಡಬೇಕು ಅಂತ. ಈಗ ಜನ ಶಂಡರಿಗೆ ಅವಕಾಶ ನೀಡಿದ್ದಾರೆ. ಮೋದಿ ಎದುರು ಮಾತನಾಡಲು ರಾಜ್ಯದ 25 ಸಂಸದರಲ್ಲಿ ಒಬ್ಬರು ಗಂಡಸು ಇಲ್ಲ ಎಂದು ಅವರು ಸಂಸದರ ವಿರುದ್ಧ ಹರಿಹಾಯ್ದಿದ್ದಾರೆ.
ಅಪ್ಪ ಮಕ್ಕಳು, ಕಳ್ಳರು ಸೇರಿ ತುಮಕೂರು ಹಾಳು ಮಾಡುತ್ತಿದ್ದಾರೆ. ಪಾಲಿಕೆ ಆಯುಕ್ತ ಭೂಬಾಲನ್ ಅವರನ್ನು ವರ್ಗಾವಣೆ ಮಾಡಿ, ಅಕೌಂಟೆಂಟ್ಗೆ ತಂದು ಕುರಿಸಿದ್ದಾರೆ. ಎಲ್ಲರೂ ಸೇರಿ ಈ ನೀಚನನ್ನು ಗೆಲ್ಲಿಸಿದ್ದೀರಿ? ಇದೇ ಸಂದರ್ಭದಲ್ಲಿ ಜಿ.ಎಸ್ ಬಸವರಾಜ್ ಅವರಪ್ಪನಿಗೆ ಹುಟ್ಟಿದ್ದರೇ ನನ್ನ ಮುಂದೆ ಬಂದು ನಿಂತು ಬಂದು ಮಾತನಾಡಲಿ ಎಂದು ಮಾಜಿ ಸಚಿವ ಎಸ್ ಆರ್ ಶ್ರೀನಿವಾಸ್ ನೇರ ಸವಾಲು ಹಾಕಿದರು.