ಮೈಸೂರು: ಆದಿ ಚುಂಚನಗಿರಿ ಶ್ರೀಗಳ ಪೋನ್ ಟ್ಯಾಪಿಂಗ್ ವಿಚಾರಕ್ಕೆ ಸಂಬಂಧಿದಂತೆ ಮಾಜಿ ಸಚಿವ ಸಾರಾ ಮಹೇಶ್ ಪ್ರತಿಕ್ರಿಯಿಸಿದರು. ಪ್ರಕರಣ ಸಂಬಂಧ ಇನ್ನು ಸಿಬಿಐ ತನಿಖೆ ನಡೆಯುತ್ತಿದೆ, ಅದಕ್ಕೂ ಮೊದಲೇ ಒಬ್ಬ ಮಾಜಿ ಗೃಹ ಸಚಿವರು ಹಾಲಿ ಸಚಿವ ಆರ್. ಅಶೋಕ್ ಕ್ಷಮೆಯಾಚಿಸುತ್ತಾರೆ ಎಂದು ಅವರು ಸೋಮವಾರ ತಿಳಿಸಿದರು.
ನಗರದಲ್ಲಿಂದು ಮಾಧ್ಯಮದ ಪ್ರತಿನಿಧಿಗೊಟ್ಟಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಮಗ ವಿಜಯೇಂದ್ರ ಇದು ಸರಿಯಿಲ್ಲ ಅಂತಾರೆ. ಹಾಗಾದರೆ ಇವರಿಗೆ ಸಿಬಿಐ ತನಿಖಾ ವರದಿಯ ಮಾಹಿತಿ ನೀಡ್ತಿದ್ಯಾ(?) ತನಿಖೆ ಮುಗಿಯುವ ಮುಂಚೆಯೇ ಇವರಿಗೆ ಏನು ಗೊತ್ತಾಗಿದೆ. ಇವರುಗಳು ಹೇಳಿಕೆ ನೀಡಿ ರಾಜ್ಯದ ಜನರ ದಿಕ್ಕೂ ತಪ್ಪಿಸುತ್ತಿದ್ದಾರಾ(?) ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಪ್ರಶ್ನೆ ಮಾಡಿದರು.
ಅಲ್ಲದೇ ಹಲವು ಶಾಸಕರು ರಾಜೀನಾಮೆ ನೀಡ್ತಾರೆ ಅಂತ ಕುಮಾರಸ್ವಾಮಿಯವರಿಗೆ ಗೊತ್ತಿತ್ತು. ಆದರೂ ಶ್ರೀಗಳ ಮೇಲಿನ ಗೌರವ, ಮಠದ ಮೇಲಿನ ಪ್ರೀತಿಯಿಂದ ಅಮೇರಿಕಾಕ್ಕೆ ತೆರಳಿದ್ದರು. ಶಾಸಕ ರಾಜೀನಾಮೆ ನೀಡುವ ಮಾಹಿತಿ ಸಿಎಂ ಆಗಿದ್ದರಿಂದ ಗುಪ್ತಚರ ಇಲಾಖೆಯಿಂದ ಸಿಕ್ಕಿತ್ತು. ಆದರೆ, ಬಿಜೆಪಿಯ ಸಚಿವರು ಹಾಗೂ ಸಿಎಂ ಪುತ್ರನಿಗೆ ಹೇಗೆ ಸಿಬಿಐ ತನಿಖೆ ವರದಿ ಸಿಕ್ಕಿದೆ ಎಂದರು.
ಇನ್ನು ತನಿಖೆ ಮುಗಿಸಿ ವರದಿ ನೀಡುವ ಮುಂಚೇಯೆ ಏಕೆ ಕ್ಷಮೆಯಾಚಿಸಿದ್ದಾರೆ. ನಿಮಗೆ ಮಾಹಿತಿ ನೀಡಿವರು ಯಾರು(?) ದಯಮಾಡಿ ಈ ಬಗ್ಗೆ ಸ್ಪಷ್ಟನೆ ಕೊಡಿ. ಆದಿಚುಂಚನಗಿರಿ ಮಠಕ್ಕೂ ದೇವೇಗೌಡರ ಕುಟುಂಬಕ್ಕೂ ಇರುವ ಸಂಬಂಧ ರಾಜ್ಯದ ಜನರಿಗೆ ಗೊತ್ತಿದೆ ಎಂದು ಜೆಡಿಎಸ್ ಶಾಸಕ ಸಾರಾ ಮಹೇಶ್ ಅವರು ಸಚಿವ ಆರ್.ಅಶೋಕ್ ಹಾಗೂ ವಿಜೇಯೇಂದ್ರಗೆ ಪ್ರಶ್ನೆ ಮಾಡಿದ್ದಾರೆ.