ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಕ್ರಿಕೆಟ್ ಆಡ್ತಿರೋ ಫೊಟೋಸ್, ವೀಡಿಯೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ. ಲಾಕ್ಡೌನ್ ಹಿನ್ನೆಲೆ ನಾಲ್ಕೈದು ತಿಂಗಳಿನಿಂದ ಮನೆಯಲ್ಲೇ ಕಾಲ ಕಳೀತಿರೋ ಶಿವಣ್ಣ ಫ್ರೆಂಡ್ಸ್ ಜೊತೆ ಸೇರಿ ಕ್ರಿಕೆಟ್ ಆಡಿ ಎಂಜಾಯ್ ಮಾಡ್ತಿದ್ದಾರೆ.
ಹ್ಯಾಟ್ರಿಕ್ ಹೀರೋ ಸಿನಿಮಾ ಸಾಂಗ್, ಆ್ಯಕ್ಟಿಂಗ್, ಡ್ಯಾನ್ಸ್, ಫೈಟ್ಗೆ ಸಂಬಂಧಿಸಿದ ಫೋಟೋಸ್, ವೀಡಿಯೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗೋದನ್ನ ನೋಡಿದ್ದೇವೆ. ಆದರೆ, ಕಳೆದೆರಡು ದಿನಗಳಿಂದ ಶಿವಣ್ಣ ಕ್ರಿಕೆಟ್ ಸಖತ್ ಸೌಂಡ್ ಮಾಡುತ್ತಿದೆ. ಸೆಂಚುರಿ ಸ್ಟಾರ್ ಬ್ಯಾಟಿಂಗ್, ಬೌಲಿಂಗ್ ವೀಡಿಯೋನ ಫ್ಯಾನ್ಸ್ ರಿಪೀಟ್ ಮೋಡ್ನಲ್ಲಿ ನೋಡಿದ್ದೇ ನೋಡಿದ್ದು.
ಶಿವಣ್ಣನಿಗೆ ಸಿನಿಮಾನೇ ಜೀವಾಳ. ಸಿನಿಮಾ ಬಿಟ್ರೆ, ಕ್ರಿಕೆಟ್ ಅಚ್ಚುಮೆಚ್ಚು. ಕಾಲೇಜು ದಿನಗಳಲ್ಲೇ ಶಿವಣ್ಣ ಒಳ್ಳೇ ಕ್ರಿಕೆಟ್ ಪ್ಲೇಯರ್. ಲಾಕ್ಡೌನ್ ಶುರುವಾದ ದಿನದಿಂದ ಮನೆಯಲ್ಲೇ ಕಾಲ ಕಳೀತಿರೋ ಶಿವಣ್ಣ, ವರ್ಕ್ಔಟ್ ಮಾಡ್ತಾ ಫ್ಯಾಮಿಲಿ ಜೊತೆ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ. ಆದರೆ, ಇತ್ತೀಚೆಗೆ ಕೆಲ ದಿನಗಳಿಂದ ಮನೆಯಲ್ಲಿ ಕೂತು ಕೂತು ಸಾಕಾಗಿ ಬೇಸರ ಕಳೆಯಲು ಮತ್ತು ಫಿಟ್ನೆಸ್ಗಾಗಿ ಕ್ರಿಕೆಟ್ ಮೊರೆ ಹೋಗಿದ್ದಾರೆ.
ವಯಸ್ಸು ಐವತ್ತೆಂಟಾದರೂ ಶಿವಣ್ಣನ ಎನರ್ಜಿ ಚಿರ ಯುವಕರನ್ನ ನಾಚಿಸುವಂತಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಶಿವಣ್ಣ ಚಿತ್ರರಂಗ ನಾಯಕತ್ವ ವಹಿಸಿಕೊಂಡಿದ್ದಾರೆ. ಸಭೆಗಳ ಮೇಲೆ ಸಭೆಗಳನ್ನ ನಡೆಸಿ, ಚಿತ್ರರಂಗ ಮತ್ತು ಸರ್ಕಾರದ ನಡುವೆ ಸೇತುವೆಯಾಗುತ್ತಿದ್ದಾರೆ. ಸರ್ಕಾರದ ಸಹಾಯದಿಂದ ಚಿತ್ರರಂಗವನ್ನ ಮೇಲೆತ್ತುವ ಜವಾಬ್ದಾರಿ ಶಿವಣ್ಣನ ಹೆಗಲಿಗೇರಿದೆ.
ಇದೆಲ್ಲದರ ನಡುವೆ ಬಿಡುವಿನ ಶಿವಣ್ಣ ಸ್ನೇಹಿತರ ಜೊತೆಗೂಡಿ ಮನೆ ಬಳಿ ಕ್ರಿಕೆಟ್ ಆಡ್ತಿದ್ದಾರೆ. ನಿರ್ಮಾಪಕ ಕೆ. ಪಿ ಶ್ರೀಕಾಂತ್ ಸೇರಿದಂತೆ ದೊಡ್ಮನೆ ಸದಸ್ಯರು ಮತ್ತು ಸ್ನೇಹಿತರು ಶಿವಣ್ಣನ ಜೊತೆ ಕ್ರಿಕೆಟ್ ಹಾಡುತ್ತಿದ್ದಾರೆ. ಎರಡು ತಂಡಗಳನ್ನ ಮಾಡಿಕೊಂಡು ಫ್ರೆಂಡ್ಲಿ ಮ್ಯಾಚ್ಗಳನ್ನ ಆಡುತ್ತಿದ್ದಾರೆ.
ಚುರಿ ಸ್ಟಾರ್ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಎತ್ತಿದ ಕೈ. ಅವರ ಆಲ್ರೌಂಡ್ ಆಟ ಈ ಫೋಟೋಸ್ ಮತ್ತು ವೀಡಿಯೋಸ್ನಲ್ಲಿ ಗೊತ್ತಾಗುತ್ತಿದೆ. ಇನ್ನು ಫೋಟೋಗಳಲ್ಲಿ ಆಟದ ಬಗ್ಗೆ ಶಿವಣ್ಣನ ಸೀರಿಯಸ್ನೆಸ್ ಹೇಗಿದೆ ಅನ್ನೋದು ಗೊತ್ತಾಗುತ್ತೆ. ಫ್ರೆಂಡ್ಲಿ ಮ್ಯಾಚ್ ಆದ್ರು ಆಟ ಅಂದ್ರೆ ಆಟ. ಅದರಲ್ಲಿ ನೋ ಕಾಂಪ್ರಮೈಸ್. ಆಟದಲ್ಲಿ ಅವರ ಅಗ್ರೇಷನ್ ಹೇಗಿತ್ತು ಅನ್ನೋದನ್ನ ನೋಡಬಹುದು. ಒಬ್ಬ ಆಟಗಾರನಿಗಿರಬೇಕಾದ ಗುಣ ಅದು.
ಇನ್ನು ಶಿವಣ್ಣನ ಕ್ರಿಕೆಟ್ ಆಟವನ್ನ ಪಕ್ಕಕ್ಕಿದ್ರೆ, ಭಜರಂಗಿ-2 ಶೂಟಿಂಗ್ಗೆ ದಿನಗಣನೆ ಶುರುವಾಗಿದೆ. ಕೊರೊನಾ ಆತಂಕದ ನಡುವೆಯೂ ನಿರ್ಮಾಪಕರಿಗೆ ತೊಂದರೆಯಾಗಬಾರದು ಅನ್ನೋ ಕಾರಣಕ್ಕೆ ಶೂಟಿಂಗ್ ಮುಂದಾಗಿದ್ದಾರೆ. ಮತ್ತೊಂದ್ಕಡೆ ಚಿತ್ರರಂಗದ ಸಮಸ್ಯೆಗಳನ್ನ ಸರ್ಕಾರ ಮುಂದಿಡುವ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ಡಿಸಿಎಂ ಅಶ್ವಥ್ ನಾರಾಯಣ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಸೀರಿಯಲ್, ಡ್ರಾಮಾ, ಫಿಲ್ಮ್ ಎಲ್ಲರಿಗೂ ಸಮಸ್ಯೆ ಆಗಿದೆ. ಸಬ್ಸಿಡಿ, ಚಿತ್ರೀಕರಣಕ್ಕೆ ಅವಕಾಶ ಸೇರಿದಂತೆ ಹಲವು ವಿಚಾರದ ಬಗ್ಗೆ ಚರ್ಚಿಸಿದ್ದಾರೆ.