Tuesday, August 16, 2022

ಶಾಸಕ ಜಮೀರ್ ಅಹಮದ್ ಆಪ್ತನಿಂದ ವಿಚಾರಣೆ ವೇಳೆ ಹೊರಬಿತ್ತು ಸ್ಪೋಟಕ ಸತ್ಯ..!

Must read

ಬೆಂಗಳೂರು: ಮೊನ್ನೆಮೊನ್ನೆಯಷ್ಟೇ ಪ್ರೆಸ್​ಮೀಟ್​ ಮಾಡಿದ್ದ ಪೊಲೀಸ್​ ಆಯುಕ್ತರು ರಾಜಧಾನಿಯಲ್ಲಿ ಒಂದು ಕಾಲುಕೋಟಿ ಬೆಲೆಬಾಳುವ ಮೊಬೈಲ್​ನ್ನ ಸೀಝ್​ ಮಾಡಿದ್ದಾಗಿ ಹೇಳಿದರು. ಅಲ್ಲದೇ ಇದನ್ನು ರಾಬರಿ ಮಾಡಿದ್ದ ಅಫ್ಜಲ್​ ಖಾನ್​ ಹಾಗೂ ಆರೀಫ್​ ಖಾನ್​​ರನ್ನ ಬಂಧಿಸಿದಾಗ ಕೂಡ ಈ ಮಾಹಿತಿಯನ್ನು ಹೇಳಿದರು. ಈ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದ ವೇಳೆ ತಾವು ಮಾಜಿ ಸಚಿವ ಜಮೀರ್​ ಅಹಮದ್​ ಆಪ್ತರೆಂಬ ಸ್ಫೋಟಕ ಸತ್ಯವನ್ನ ಬಾಯ್ಬಿಟ್ಟಿದ್ದಾರೆ.

ಈ ಕಳ್ಳರ ಮೇಲೆ ಜಮೀರ್​ ಅಹಮದ್​ರ ಕೃಪಾಕಟಾಕ್ಷ ಇದ್ದ ಕಾರಣವೋ ಏನೋ, ಇಷ್ಟ್​ ದಿನ ಯಾವೊಬ್ಬ ಪೊಲೀಸರು ಇವರನ್ನು ಮುಟ್ಟೋ ಧೈರ್ಯ ಮಾಡಿರಲಿಲ್ವಂತೆ. ಆದರೆ ಜಮೀರ್​ ಯಾವಾಗ ಐಎಂಎ ಕೇಸ್​ನಲ್ಲಿ ಫಿಟ್​ ಆದ್ರೋ ಪೊಲೀಸ್ರು ಅಫ್ಜಲ್​ ಹಾಗೂ ಆರೀಪ್​ರನ್ನ ಜೈಲಿಗಟ್ಟಿದ್ದಾರೆ.

ಸಮಾರಂಭವೊಂದರಲ್ಲಿ ಜಮೀರ್​ ಕೈಲಿಂದಲೇ ಈ ಕಳ್ಳರು ಪ್ರಶಸ್ತಿ ಸ್ವೀಕರಿಸ್ತಾ ಇರೋ ಫೋಟೋ ಸಹ ಪೊಲೀಸರ ಕೈ ಸೇರಿದೆ. ಅದೇನೆ ಇರ್ಲಿ ಜನರನ್ನು ಕಾಯಬೇಕಾದ ರಾಜಕಾರಣಿಗಳೇ ಈ ರೀತಿ ಕಳ್ಳರನ್ನು ಪೋಷಿಸಿದ್ದು ನಿಜಕ್ಕೂ ಖಂಡನೀಯ.

Latest article