Tuesday, November 29, 2022

ಶಾಲಾ ಶಿಕ್ಷಕರ ವರ್ಕ್ ಫ್ರಮ್ ಹೋಮ್ ಅವಧಿ ವಿಸ್ತರಿಸಿದ ಶಿಕ್ಷಣ ಇಲಾಖೆ.!

Must read

ಬೆಂಗಳೂರು: ಶಿಕ್ಷಕರು ಹಾಗೂ ಭೋಧಕೇತರ ಸಿಬ್ಬಂದಿಗಳು ಏಪ್ರೀಲ್ 30 ರವರೆಗೆ ಮನೆಯಲ್ಲಿಯೇ ಕೆಲಸ ನಿರ್ವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗಟ್ಟುವಿಕೆಗೆ ಮುಂಜಾಗೃತ ಕ್ರಮವಾಗಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಈ ಹಿಂದೆ ಮಾ.31 ರವರೆಗೆ ರಜೆ ಘೋಷಿಸಲಾಗಿತ್ತು. ಈಗ ಈ ರಜೆಯ ಅವಧಿಯನ್ನ ವಿಸ್ತರಿಸಲಾಗಿದೆ.

ಇದೀಗ ಏ. 30 ರವರೆಗೂ ರಜೆ ವಿಸ್ತರಿಸಿ, ಮನೆಯಿಂದಲೇ ಕೆಲಸ ನಿರ್ವಹಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

Latest article