ವರ್ಷಗಳ ಹಿಂದೆ ತಮ್ಮ ಹಾರ್ಡ್ ಹಿಟ್ಟಿಂಗ್ ಮೂಲಕ ಟೀಮ್ ಇಂಡಿಯಾದ ಮಿಡ್ಲ್ ಆರ್ಡರ್ಗೆ ಹೊಸ ಖದರ್ ತಂದಿದ್ರು. ಧೋನಿ ನಾಯಕತ್ವದಲ್ಲಿ ತಂಡದ ಪ್ರಮುಖ ಆಟಗಾರನಾಗಿ ಆಟವಾಡಿದ ರೈನಾ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿ ತಮ್ಮದೇ ಆದ ಚಾಫು ಮೂಡಿಸಿದರು.
ಏಕದಿನ ಮತ್ತು ಟಿ20 ಫಾರ್ಮೆಟ್ನಲ್ಲಿ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದ ಈ ಉತ್ತರ ಪ್ರದೇಶ ಆಟಗಾರ ವರ್ಷಗಳ ಹಿಂದೆ ಫಾರ್ಮ್ ಸಮಸ್ಯೆಯಿಂದ ಬಳಲಿ ತಂಡದಿಂದಲೇ ಗೇಟ್ ಪಾಸ್ ಪಡೆದ್ರು. ನಂತರ ರೈನಾ ಟೀಮ್ ಇಂಡಿಯಾಕ್ಕೆ ಮತ್ತೆ ಎಂಟ್ರಿಕೊಡಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಫಿಟ್ನೆಸ್ ಟ್ರೇನಿಂಗ್ ಪಡೆದು ಮತ್ತೆ ತಂಡಕ್ಕೆ ಎಂಟ್ರಿ ಕೊಡಬೇಕೆಂದಿದ್ದ ಎಡಗೈ ಬ್ಯಾಟ್ಸ್ಮೆನ್ ಯೋ ಯೋ ಟೆಸ್ಟ್ನಲ್ಲೂ ಫೇಲ್ ಆಗಿ ಆಗಿದರು. ನಂತರ ಮತ್ತೆ ಯೋ ಯೋ ಟೆಸ್ಟ್ನಲ್ಲಿ ಪಾಸಾಗಿ ತಂಡಕ್ಕೆ ಮರಳಿದರು
ಟೀಮ್ ಇಂಡಿಯಾಕ್ಕೆ ಮತ್ತೆ ಎಂಟ್ರಿಕೊಡಲು ಪ್ರಾಯಸಪಟ್ಟ ರೈನಾ ಕೊನೆಗೂ ತಂಡಕ್ಕೆ ಎಂಟ್ರಿಕೊಡ್ತಾರೆ. ಕಳೆದ ವರ್ಷ ಜುಲೈನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಕೊನೆಯ ಟಿ-20 ಪಂದ್ಯವನ್ನಾಡಿದ್ದ ಸುರೇಶ್ ರೈನಾ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಆಡಲು ಅವಕಾಶ ಸಿಗುತ್ತೆ. ಆ ಪಂದ್ಯದಲ್ಲಿ ರೈನಾ ಕೇವಲ 27 ರನ್ ಕಲೆ ಹಾಕ್ತಾರೆ. ಟಿ20 ಸರಣಿ ಮುಗಿದ ನಂತರ ರೈನಾ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದೆ ಇಲ್ಲ.

ಆದರೆ, ಟೀಮ್ ಇಂಡಿಯಾದಿಂದ ದೂರ ಇರುವ ಆಟಗಾರ ಇದೀಗ ತಂಡಕ್ಕೆ ಕಮ್ಬ್ಯಾಕ್ ಮಾಡುವ ಉತ್ಸಾಹದಲ್ಲಿದ್ದಾರೆ. ಟಿ20 ವಿಶ್ವಕಪ್ವೇಳೆ ಟೀಮ್ ಇಂಡಿಯಾವನ್ನ ಪ್ರತಿನಿಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸುರೇಶ್ ರೈನಾ, ಈತ ಟೀಂ ಇಂಡಿಯಾದ ಒಂದು ಕಾಲದ ಪ್ರಮುಖ ಬ್ಯಾಟ್ಸ್ಮನ್. ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಧಾರಸ್ಥಂಭ. ಏಕಾಂಗಿಯಾಗಿ ಮ್ಯಾಚ್ಗಳನ್ನ ಗೆಲ್ಲಿಸಿಕೊಟ್ಟಂತಹ ಮ್ಯಾಚ್ ವಿನ್ನರ್. ಆದರೆ, ಟೀಮ್ ಇಂಡಿಯಾದಿಂದ ದೂರ ಉಳಿದು ಒಂದು ವರ್ಷವೇ ಕಳೆದಿದೆ.
ಟೀಂ ಇಂಡಿಯಾಕ್ಕೆ ಕಳೆದ ಕೆಲ ವರ್ಷಗಳಿಂದ 4ನೇ ಕ್ರಮಾಂಕದ ಸಮಸ್ಯೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೆ.ಎಲ್.ರಾಹುಲ್, ವಿಜಯ್ ಶಂಕರ್, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಮನೀಶ್ ಪಾಂಡೆ ಹೀಗೆ ಅನೇಕ ಆಟಗಾರರನ್ನು ಈ ಜಾಗದಲ್ಲಿ ಪ್ರಯೋಗ ನಡೆಸಿದ್ರು ಇದುವವರೆಗೆ ಮಾತ್ರ ಯಾವೊಬ್ಬ ಆಟಗಾರ ಈ ಸ್ಥಾನ ತುಂಬಲು ಸಾಧ್ಯವಾಗಲಿಲ್ಲ. ಹೀಗಿರುವಾಗ ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಮಾಡಲು ಉತ್ಸುಕರಾಗಿರುವ ಸುರೇಶ್ ರೈನಾ, ಟೀಮ್ ಇಂಡಿಯಾದ ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆ ಪರಿಹರಿಸುವುದಾಗಿ ಹೇಳಿಕೊಂಡಿದ್ದಾರೆ.
ನಾನು ಟೀಮ್ ಇಂಡಿಯಾ ಪರ 4ನೇ ಸ್ಲಾಟ್ನಲ್ಲಿ ಆಡಬಲ್ಲೆ, ಈ ಹಿಂದೆ ಆ ಕ್ರಮಾಂಕದಲ್ಲಿ ಕಣಕ್ಕಿಳಿದ ಅನುಭವ ನನಗಿದೆ. ಆದಷ್ಟು ಬೇಗ ಫಿಟ್ ಆಗಲಿದ್ದು, ಒಂದು ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆಯುವ ಭರವಸೆ ಇದೆ.
ಟಿ20 ಫಾರ್ಮೆಟ್ಗೆ ಹೇಳಿ ಮಾಡಿಸಿದ ಆಟಗಾರನಾಗಿರುವ ರೈನಾ ಮತ್ತೆ ಕೊನೆಯ ಬಾರಿಗೆ ಬ್ಲೂ ಜೆರ್ಸಿ ತೊಡಲು ಕಾಯುತ್ತಿದ್ದಾರೆ. ಹೀಗಾಗಿ ರೈನಾ ಟೀಂ ಬ್ಯಾಟಿಂಗ್ ಲೈನ್ಅಪ್ಗೆ ಆನೆ ಬಲ ನೀಡುವ ತಾಖತ್ತು ಹೊಂದಿದ್ದಾರೆ. 32 ವರ್ಷದ ರೈನಾ ತಮ್ಮ ಹಳೆ ಆಟವಾನ್ನ ಮತ್ತೆ ತೋರಿಸಬೇಕಿದೆ.