Tuesday, November 29, 2022

ವಿಶ್ವದಾದ್ಯಂತ 2.18 ಕೋಟಿ ಮಂದಿಗೆ ಕೋವಿಡ್​ 19 ಸೋಂಕು, 7.73 ಲಕ್ಷ ಮಂದಿ ಸಾವು

Must read

ವಾಷಿಂಗ್ಟನ್: ಪ್ರಪಂಚದಲ್ಲಿ ಕೋವಿಡ್​ 19 ಸೋಂಕಿತರ ಸಂಖ್ಯೆ 21,826,769ಕ್ಕೆ ಬಂದು ನಿಂತಿದ್ದು, 773,075 ಮಂದಿ ಸಾವನ್ನಪ್ಪಿದ್ದಾರೆ. 6,489,249 ಸಕ್ರಿಯ ಪ್ರಕರಣಗಳಿವೆ. ಒಟ್ಟು 14,564,445 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವಿಶ್ವಮಾಪಕ ವೆಬ್​ಸೈಟ್​‌ ಮಾಹಿತಿ ನೀಡಿದೆ.

ಅಮೆರಿಕಾ 5,566,632 ಸೋಂಕಿತರೊಂದಿಗೆ ಅಗ್ರ ಸ್ಥಾನದಲ್ಲಿದೆ. 2,470,780 ಸಕ್ರಿಯ ಪ್ರಕರಣಗಳಿವೆ. ಅಲ್ಲಿ 173,128ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. 2,922,724 ಮಂದಿ ಈವರೆಗೆ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಅತಿಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಬ್ರೆಜಿಲ್‌ ಇದ್ದು, ಈ ದೇಶದಲ್ಲಿ 3,340,197 ಪ್ರಕರಣಗಳು ಪತ್ತೆಯಾಗಿವೆ. 2,432,456 ಸೋಂಕಿತರು ಗುಣಮುಖರಾಗಿದ್ದು, 799,862 ಸಕ್ರಿಯ ಪ್ರಕರಣಗಳಿವೆ. 107,879 ಮಂದಿ ಮೃತಪಟ್ಟಿದ್ದಾರೆ.

ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ 2,647,663 ಪ್ರಕರಣಗಳು ದೃಢಪಟ್ಟಿದ್ದು, 1,919,842 ಮಂದಿ ಗುಣಮುಖರಾಗಿದ್ದಾರೆ. 676,776 ಸಕ್ರಿಯ ಪ್ರಕರಣಗಳಿವೆ. ಈವರೆಗೂ 51,045 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಕೊರೊನಾ ವೈರಸ್ ಸೋಂಕಿತರ ಪೈಕಿ ನಾಲ್ಕನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 922,853 ಪ್ರಕರಣಗಳು ದೃಢಪಟ್ಟಿದ್ದು, 732,968 ಮಂದಿ ಗುಣಮುಖರಾಗಿದ್ದಾರೆ. 174,200 ಸಕ್ರಿಯ ಪ್ರಕರಣಗಳಿವೆ. ಈವರೆಗೂ 15,685 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಐದನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ 587,345 ಪ್ರಕರಣಗಳು ದೃಢಪಟ್ಟಿದ್ದು, 472,377 ಮಂದಿ ಗುಣಮುಖರಾಗಿದ್ದಾರೆ. 103,129 ಸಕ್ರಿಯ ಪ್ರಕರಣಗಳಿವೆ. ಈವರೆಗೂ 11,839 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

Latest article