Wednesday, May 18, 2022

ವಿದ್ಯಾರ್ಥಿಭವನ ದೋಸೆ ಪ್ರಿಯರಿಗೆ ಗುಡ್ ನ್ಯೂಸ್..!

Must read

ಬೆಂಗಳೂರು: ವಿದ್ಯಾರ್ಥಿ ಭವನ ದೋಸೆ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ಲಾಕ್ ಡೌನ್ ನಿಂದ ಬಂದ್ ಆಗಿದ್ದ ವಿದ್ಯಾರ್ಥಿ ಭವನ ಓಪನ್ ಆಗಿದೆ.

ಸಾಮಾಜಿಕ ಅಂತರ ಕಾಯ್ದುಕೊಂಡು ಬಿಸಿಬಿಸಿ ಬೆಣ್ಣೆದೋಸೆ ಕೊಂಡೊಯ್ಯಬಹುದು. ಇನ್ನು ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಮಾಸ್ಕ್ ಧರಿಸಿ ಬಂದ್ರೆ ಅಷ್ಟೇ ನಿಮಗೆ ಬಿಸಿಬಿಸಿ ಬೆಣ್ಣೆ ದೋಸೆ ಪಾರ್ಸಲ್‌ನಲ್ಲಿ ಸಿಕ್ಕುವುದು.

ಇಡ್ಲಿ ವಡೆ, ಖಾರಭಾತ್, ಕೇಸರಿ ಭಾತ್ , ಬಿಸಿ ಬಿಸಿ ಬೆಣ್ಣೆ ದೋಸೆ, ಮಸಾಲ ದೋಸೆ ಸ್ಪೆಷಲ್ ಆಗಿ ಸಿಗುತ್ತೆ. ಅಲ್ಲದೇ, ವಿದ್ಯಾರ್ಥಿ ಭವನ ಫೋನ್ ಮೂಲಕ ಬುಕ್ ಮಾಡಿ ಪಾರ್ಸಲ್ ತೆಗೆದುಕೊಂಡು ಹೋಗುವ ವ್ಯವಸ್ಥೆ ಕಲ್ಪಿಸಿದೆ. ಈ‌ ಮೂಲಕ ಹೋಟೆಲ್ ಮುಂಭಾಗ ಪಾರ್ಸಲ್‌ಗಾಗಿ ಯಾವುದೇ ಗುಂಪು ಸೇರದಂತೆ ನೋಡಿಕೊಳ್ಳಲಾಗುತ್ತಿದೆ.

ಪಾರ್ಸಲ್‌ಗೆ ಬರೋ ಪ್ರತಿಯೊಬ್ಬರಿಗೂ ಫೀವರ್ ಟೆಸ್ಟಿಂಗ್ ಹಾಗೂ ಹ್ಯಾಡ್ ಸ್ಯಾನಿಟೈಸ್ ಮಾಡಲಾಗುತ್ತಿದೆ. ಗಂಟೆಗೊಮ್ಮೆ ವಿದ್ಯಾರ್ಥಿ ಭವನ ಆವರಣವನ್ನ ಸ್ಯಾನಿಟೈಸ್ ಮಾಡಲಾಗುತ್ತೆ.

Latest article