Wednesday, May 18, 2022

ವಿಕ್ರಂ ರವಿಚಂದ್ರನ್​ ಅಭಿಯನದ 'ತ್ರಿವಿಕ್ರಮ' ಟೀಸರ್ ರಿಲೀಸ್​ಗೆ ಮುಹೂರ್ತ ಫಿಕ್ಸ್​​

Must read

ಜೂನಿಯರ್ ಕ್ರೇಜಿಸ್ಟಾರ್ ವಿಕ್ರಂ ರವಿಚಂದ್ರನ್ ಅಭೀನಯದ ತ್ರಿವಿಕ್ರಮ ಸಿನಿಮಾ ಸಖತ್​ ಸೌಂಡ್ ಮಾಡುತ್ತಿದೆ. ರಿಲೀಸ್​ಗೂ ಮುನ್ನವೇ ಒಂದಲ್ಲ ಒಂದು ದಾಖಲೆ ಬರೀತಿದೆ. ಇದೀಗ ತ್ರಿವಿಕ್ರಮ ಟೀಸರ್ ರಿಲೀಸ್​ಗೆ ಮುಹೂರ್ತ ಫೀಕ್ಸ್​ ಆಗಿದೆ.

ತ್ರಿವಿಕ್ರಮ. ಟೈಟಲ್​ ಮೂಲಕವೇ ಸ್ಯಾಂಡಲ್​ವುಡ್​ನಲ್ಲಿ ಕ್ಯೂರಿಯಾಸಿಟಿ ಬಿಲ್ಡ್​ ಮಾಡಿರುವ ಚಿತ್ರ. ಈಗಾಗಲೇ ಚಿತ್ರದ ಪೋಸ್ಟರ್, ಮೇಕಿಂಗ್ ನೋಡಿದ್ರೆ, ಸ್ಯಾಂಡಲ್​ವುಡ್​ನಲ್ಲಿ ಸಖತ್​ ಸೌಂಡ್ ಭರವಸೆ ಹುಟ್ಟಿಸಿದ್ದಾನೆ ತ್ರಿವಿಕ್ರಮ.

ನಿರ್ದೇಶಕ ಸಹಾನಾಮೂರ್ತಿ ಮತ್ತು ವಿಕ್ರಂ ರವಿಚಂದ್ರನ್​ ಕಾಂಬಿನೇಷನ್​ನಲ್ಲಿ ಬರ್ತಿರೋ ತ್ರಿವಿಕ್ರಮ ಸಿನಿಮಾ, ಈಗಾಗಲೇ ಒಂದಲ್ಲ ಒಂದು ವಿಶೇಷತೆಗಳಿಂದ ಸುದ್ದಿ ಮಾಡುತ್ತಿದೆ. ಈ ಹಿಂದೆ ಚಿತ್ರದ ನಾಯಕ ವಿಕ್ರಂ, ಬ್ಯಾಂಕಾಂಕ್​ನಲ್ಲಿ ರಿಯಲ್​ ಹುಲಿ ಜೊತೆ ದೃಶ್ಯ ಚಿತ್ರೀಕರಣ ಮಾಡಿದ್ದು ಕೂಡ ಸುದ್ದಿಯಾಗಿತ್ತು.

ರೀಸೆಂಟಾಗಿ ಚಿತ್ರದ ಆಡಿಯೋ ರೈಟ್ಸ್ ಕೂಡ ಬರೋಬ್ಬರಿ 50 ಲಕ್ಷಕ್ಕೆ ಸೇಲ್​ ಆಗಿದ್ದು ಗೊತ್ತೇಯಿದೆ. ಇಷ್ಟೆಲ್ಲಾ ವಿಚಾರವಾಗಿ ಸುದ್ದಿ ಮಾಡ್ತಿರೋ ತ್ರಿವಿಕ್ರಮನ ಟೀಸರ್​ಗೆ ರಿಲೀಸ್​ಗೆ ದಿನಗಣನೆ ಶುರುವಾಗಿದೆ. ವಿಕ್ರಂ ರವಿಚಂದ್ರನ್​ ಹುಟ್ಟುಹಬ್ಬದ ದಿನ ಅಂದ್ರೆ ಇದೇ ಆಗಸ್ಟ್ 16ರಂದು ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.

ತ್ರಿವಿಕ್ರಮ ಸಿನಿಮಾ ಮೂಲಕ ಜೂನಿಯರ್ ಕ್ರೇಜಿಸ್ಟಾರ್ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡುತ್ತಿದ್ದು, ಆರಂಭದಲ್ಲೇ ಸಖತ್​ ಸುದ್ದಿ ಮಾಡುತ್ತಿದ್ದಾರೆ. ಕೊರೊನಾ ಸಮಸ್ಯೆ ಮತ್ತು ಥಿಯೇಟರ್ ಅನ್​ಲಾಕ್​ ಆಗ್ತಿದ್ದ ಹಾಗೇ ತ್ರಿವಿಕ್ರಮ ಸಿನಿಮಾ ಥಿಯೇಟರ್ ಅಂಗಳಕ್ಕೆ ಲಗ್ಗೆ ಇಡಲಿದೆ.

Latest article