ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್ ವಿರುದ್ಧ ಹೋರಾಡಲು ಲಾಕ್ಡೌನ್ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶ, ರಾಜ್ಯದಲ್ಲಿ ತುರ್ತು ಸಂದರ್ಭದಲ್ಲಿ ಬಳಕೆ ಮಾಡುವ ಹಾಗೂ ಸರಕು ಸಾಗಾಣಿಕೆ ವಾಹನಗಳನ್ನ ಬಿಟ್ಟರೆ ಬಹುತೇಖ ಖಾಸಗಿ, ಸರ್ಕಾರಿ ವಾಹನಗಳು ಬಂದ್ ಆಗಿವೆ.
ಈಗ ಲಾಕ್ ಡೌನ್ ಇದ್ರೂ ಓಲಾ, ಉಬರ್ ಕ್ಯಾಬ್ ಗಳು ರಸ್ತೆಗೆ ಇಳಿಯಲಿದ್ದು ಬದಲಿಗೆ ಈ ಬಾರಿ ಆಂಬುಲೆನ್ಸ್ ರೂಪದಲ್ಲಿ ರಸ್ತೆಗೆ ಇಳಿಯಲಿವೆ. ಈ ಹಿಂದೆ ಓಲಾ ಹಾಗೂ ಉಬರ್ ಕ್ಯಾಬ್ ಪ್ರಯಾಣಿಕರು ಹೇಳಿದ ಸ್ಥಳಕ್ಕೆ ಡ್ರಾಪ್ ಮಾಡುತ್ತಿದ್ದವು.
ತುರ್ತು ಆರೋಗ್ಯ ಸೇವೆಗೆ ಓಲಾ ಮತ್ತು ಉಬರ್ ಕ್ಯಾಬ್ ಗಳ ಬಳಕೆ ಮಾಡಿಕೊಳ್ಳಲು ಆರೋಗ್ಯ ಇಲಾಖೆ ರೆಡಿಯಾಗಿದ್ದು, ಇಂದಿನಿಂದ 100 ಓಲಾ ಮತ್ತು 100 ಊಬರ್ ಕ್ಯಾಬ್ ಗಳು ರಸ್ತೆಗೆ ಇಳಿಯಲಿವೆ. ಆರೋಗ್ಯ ಸಚಿವ ಶ್ರೀರಾಮುಲು ಅವರಿಂದ ತುರ್ತು ಆರೋಗ್ಯ ಸೇವೆಗೆ ಸಾಂಕೇತಿಕವಾಗಿ ಚಾಲನೆ ದೊರಕಲಿದೆ.