Wednesday, May 18, 2022

ಲಾಕ್​ಡೌನ್ ಉಲ್ಲಂಘನೆ ಮಾಡಿದವರ ಮೇಲೆ 10 ಪ್ರಕರಣ ದಾಖಲು – ಎಸ್​ಪಿ ಶಿವಪ್ರಕಾಶ್​ ದೇವರಾಜು

Must read

ಉತ್ತರ ಕನ್ನಡ: ತಬ್ಲಿಕ್​ ಜಮಾತ್​ಗೆ ಉತ್ತರ ಕನ್ನಡದಿಂದ 8 ಮಂದಿ ಹಾಜರಾಗಿದರು, ಎಲ್ಲರೂ ಹೋಂ ಕ್ವಾರೆಂಟೈನ್ ಆಗಿದ್ದಾರೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶಿವಪ್ರಕಾಶ್​ ದೇವರಾಜು ಅವರು ಗುರುವಾರ ಹೇಳಿದ್ದಾರೆ.

ಕಾರವಾರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಜೊತೆ ಮಾತನಾಡಿದ ಅವರು, ಇಲ್ಲಿನ ಸಿಮ್ ದಾಖಲೆ ನೀಡಿ, ದೆಹಲಿಯಲ್ಲಿ ಹಲವರು ವಾಸವಾಗಿದ್ದಾರೆ. ಎಲ್ಲರನ್ನೂ ಪತ್ತೆ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಇನ್ನು ಜನರು ಆತಂಕ ಪಡುವ ಅವಶ್ಯಕತೆ ಇಲ್ಲ, ಯಾರಾದರೂ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ ಮಾಹಿತಿ ನೀಡಿ, ನೀವೇ ಮುಂದಾಗಿ ಮಾಹಿತಿ ನೀಡಿದ್ರೆ ನಿಮಗೆ ಅನುಕೂಲ, ಮಾ.10ರ ಬಳಿಕ ಸಾಮೂಹಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದವರು ಮಾಹಿತಿ ನೀಡಿ ಎಂದು ಮಾಧ್ಯಮದ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಇನ್ನು ಲಾಕ್​ಡೌನ್ ಉಲ್ಲಂಘನೆ ಮಾಡಿದವರ ಮೇಲೆ ಮುಖ್ಯ 10 ಪ್ರಕರಣಗಳು ದಾಖಲಾಗಿವೆ, ಭಟ್ಕಳ ಪಟ್ಟಣ, ಗ್ರಾಮೀಣ, ಹಳಿಯಾಳ, ದಾಂಡೇಲಿಯಲ್ಲಿ ಈ ಕೇಸ್​ಗಳು ದಾಖಲಾಗಿದೆ. 505 1B, ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆ್ಯಕ್ಟ್​​ಯಡಿಯಲ್ಲಿ ಕೇಸ್​ ಆಗಿದೆ ಎಂದು ಅವರು ಮಾಹಿತಿ ನೀಡಿದರು.

ಅಲ್ಲದೆ, ಹಳಿಯಾಳದಲ್ಲಿ ನಮಾಜ್ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಾಗಿದೆ. ಯಾವುದೇ ಗುಂಪು ಸೇರದಂತೆ ಮೊದಲೇ ಸೂಚಿಸಿದ್ದರೂ ಸಹ ಧಾರ್ಮಿಕ ಕಾರ್ಯ ಮಾಡಿದ್ದಾರೆ. ದಾಂಡೇಲಿಯಲ್ಲಿ ನಕಲಿ ಫೇಸ್ಬುಕ್ ಪೋಸ್ಟ್ ಹಾಕಿದವರ ಮೇಲೆ ಕೇಸ್ ಹಾಕಿದ್ದೇವೆ. ಎಲ್ಲರ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸಿದೆ. ಡ್ರೋನ್ ಮೂಲಕವೂ ನಗರಗಳಲ್ಲಿ ಹದ್ದಿನ ಕಣ್ಣಿರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶಿವಪ್ರಕಾಶ್​ ದೇವರಾಜು ಅವರು ಹೇಳಿದ್ದಾರೆ.

Latest article