Wednesday, May 18, 2022

ಲಾಕ್​ಡೌನ್​​ ಟೈಮಲ್ಲೂ ಡಿ ಬಾಸ್​​ ದರ್ಶನ್ ದಾಖಲೆ..!

Must read

ಚಾಲೆಂಜಿಂಗ್​ ಸ್ಟಾರ್​ ದರ್ಶನ್​, ಅಭಿಮಾನಿಗಳ ನೆಚ್ಚಿನ ದಾಸ, ಕನ್ನಡ ಚಿತ್ರರಂಗದ ಓನ್ ಅಂಡ್ ಓನ್ಲಿ ರಾಯಲ್ ಸ್ಟಾರ್ ದರ್ಶನ್. ಡಿ ಬಾಸ್​ ಕ್ರೇಜ್​​ ಬಗ್ಗೆ ಬಿಡಿಸಿ ಹೇಳೋದೇ ಬೇಕಾಗಿಲ್ಲ. ಸ್ಯಾಂಡಲ್​ವುಡ್​​ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನ ಹೊಂದಿರೋ ನಟ ದರ್ಶನ್. ಲಾಕ್​ಡೌನ್​ ನಡುವೆಯೂ ಬಾಕ್ಸಾಫೀಸ್​ ಸುಲ್ತಾನ್​ ಕ್ರೇಜ್​ ಹೇಗಿದೆ ಅನ್ನೋದು ಸಾಬೀತಾಗಿದೆ.

ಲಾಕ್​ಡೌನ್​ ಹಿನ್ನೆಲೆಯಲ್ಲಿ ಕಿರುತೆರೆ ಚಟುವಟಿಕೆಗಳು ಸ್ತಬ್ಧವಾಗಿದ್ದು, ಹಳೇ ಎಪಿಸೋಡ್​ಗಳನ್ನ ಮರುಪ್ರಸಾರ ಮಾಡಲಾಗುತ್ತಿದೆ. ಸೂಪರ್​ ಹಿಟ್​ ಸಿನಿಮಾಗಳನ್ನ ಪ್ರದರ್ಶನ ಮಾಡಲಾಗುತ್ತಿದೆ. ತಮ್ಮ ನೆಚ್ಚಿನ ಕಲಾವಿದರ ಸಿನಿಮಾಗಳನ್ನ ಸಿಲ್ವರ್​ ಸ್ಕ್ರೀನ್​ ಮೇಲೆ ನೋಡೋಕ್ಕೆ ಸಾಧ್ಯವಾಗುತ್ತಿಲ್ಲ. ಮನೆಯಲ್ಲೇ ಟಿವಿಯಲ್ಲಿ ಸಿನಿಮಾಗಳನ್ನು ನೋಡ್ತಾ ಎಂಜಾಯ್​ ಮಾಡುತ್ತಿದ್ದಾರೆ. ಅದರಲ್ಲೂ ದರ್ಶನ್​ ಸಿನಿಮಾಗಳಿಗೆ ಸಖತ್​ ರೆಸ್ಪಾನ್ಸ್​ ಸಿಗುತ್ತಿದೆ.

ಬಾಕ್ಸಾಫೀಸ್​ ಸುಲ್ತಾನ್​ ದರ್ಶನ್​ ಸಿನಿಮಾಗಳಿಗೆ ಕಿರುತೆರೆಯಲ್ಲಿ ಮೊದಲಿನಿಂದಲೂ ಒಳ್ಳೆ ಪ್ರತಿಕ್ರಿಯೆ ಸಿಗುತ್ತೆ. ಇದೀಗ ಲಾಕ್​​ಡೌನ್​ ಟೈಮಲ್ಲಿ ಮತ್ತಷ್ಟು ಸದ್ದು ಮಾಡುತ್ತಿದೆ. ಕಳೆದ ವಾರ ದರ್ಶನ್​ ಅಭಿನಯದ ಕುರುಕ್ಷೇತ್ರ ಮತ್ತು ಐರಾವತ ಸಿನಿಮಾಗಳನ್ನು ಪ್ರದರ್ಶನ ಮಾಡಲಾಗಿತ್ತು.

ಧಾರಾವಾಹಿಗಳೇ ದರ್ಬಾರ್​ ನಡೆಸ್ತಿದ್ದ ಕಿರುತೆರೆಯಲ್ಲೀಗ ದರ್ಶನ್​ ಸಿನಿಮಾಗಳ ಆರ್ಭಟ ಶುರುವಾಗಿದೆ. ಬಹುತಾರಾಗಣ ಕುರುಕ್ಷೇತ್ರ ಚಿತ್ರ ಸಖತ್​ ಸೌಂಡ್​ ಮಾಡಿದೆ. ನಾಗಣ್ಣ ನಿರ್ದೇಶನದ ಈ ಪೌರಾಣಿಕ ಸಿನಿಮಾ ಕಳೆದ ವರ್ಷ ತೆರೆಕಂಡು ಯಶಸ್ವಿಯಾಗಿತ್ತು. ಅಂಬರೀಶ್​, ಅರ್ಜುನ್​ ಸರ್ಜಾ, ನಿಖಿಲ್​ ಕುಮಾರ್, ಶಶಿಕುಮಾರ್, ಸೋನುಸೂದ್​ ಸೇರಿದಂತೆ ಘಟಾನುಘಟಿ ಕಲಾವಿದರು ಸಿನಿಮಾದಲ್ಲಿ ಮಿಂಚಿದರು. ಕಳೆದ ವಾರ ಕಿರುತೆರೆಯಲ್ಲಿ 4,809 ಇಂಪ್ರೆಷನ್​ ಪಡೆಯುವ ಮೂಲಕ ಕುರುಕ್ಷೇತ್ರ ಸಿನಿಮಾ ಮೊದಲ ಸ್ಥಾನ ಗಳಿಸಿದೆ.

ಐದು ವರ್ಷಗಳ ಹಿಂದೆ ಬಂದಿದ್ದ ಆ್ಯಕ್ಷನ್​ ಸಿನಿಮಾ ಐರಾವತ. ಎ.ಪಿ ಅರ್ಜುನ್​​ ನಿರ್ದೇಶನದ ಐರಾವತ ಸಿನಿಮಾ ಅಭಿಮಾನಿಗಳ ಮನ ಗೆದ್ದಿತ್ತು. ಕಿರುತೆರೆಯಲ್ಲಿ ಪ್ರಸಾರವಾದ ಈ ಚಿತ್ರಕ್ಕೂ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಐರಾವತ ಚಿತ್ರಕ್ಕೆ 4,081 ಇಂಪ್ರೆಷನ್​ ಸಿಕ್ಕಿದೆ.

ಕುರುಕ್ಷೇತ್ರ ಮತ್ತು ಐರಾವತ ಬಿಟ್ರೆ, ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ನಟವಸಾರ್ವಭೌಮ ಸಿನಿಮಾ 3ನೇ ಸ್ಥಾನದಲ್ಲಿದೆ. ಪವನ್​ ಒಡೆಯರ್​ ನಿರ್ದೇಶನದ ನಟಸಾರ್ವಭೌಮ ಚಿತ್ರಕ್ಕೆ 4,065 ಇಂಪ್ರೆಷನ್​ ಸಿಕ್ಕಿದ್ದು, ಪವರ್​ ಸ್ಟಾರ್​ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಈ ಸಿನಿಮಾ ಕೂಡ ಬಾಕ್ಸಾಫೀಸ್​ನಲ್ಲಿ ಸಖತ್​ ಸೌಂಡ್​ ಮಾಡಿತ್ತು.

Also read:  ಪುಂಡರ ಮೇಲೆ ದೇಶದ್ರೋಹದ ಕೇಸ್ ದಾಖಲಿಸಿ-ಹಿಂದೂಳಿದ ವರ್ಗಗಳ ಜಾಗೃತಿ ವೇದಿಕೆ ಆಗ್ರಹ

Latest article