ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಡಿ ಬೇಡಿ ವಿರೋಧ ಪಕ್ಷದ ಸ್ಥಾನ ಪಡೆದಿದ್ದಾರೆ. ಹೀಗಾಗಿ ಅವರು ಕಾಂಗ್ರೆಸ್ನಿಂದ ಹೊರಗೆ ಬಂದರೂ ಆಶ್ಚರ್ಯ ಇಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿಯಾದ ರೇಣುಕಾಚಾರ್ಯ ಅವರು ಶನಿವಾರ ಹೇಳಿದ್ದಾರೆ.
ಜಿಲ್ಲೆಯ ಹಿರೇಗೋಣಿಗೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಗೋಲಿ ಆಡುವವರು ಎಂದು ಹೇಳಿಕೆ ನೀಡುವುದು ಸರಿಯಲ್ಲ ಎಂದು ಅವರು, ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ಅವರ ಹೇಳಿಕೆ ನೀಡಿರುವುದು ಅಷ್ಟು ಸಮಂಜವಲ್ಲ. ನಿಮ್ಮಂತೆ ಮತಾಂದ ಟಿಪ್ಪು ಜಯಂತಿ ನಾವು ಮಾಡಲ್ಲ. ಸಾವರ್ಕರ್ ಬಗ್ಗೆ ಇತಿಹಾಸ ಓದಿ ತಿಳಿದುಕೊಂಡು ಮಾತನಾಡಲಿ. ಕೂಡಲೇ ಸಿದ್ದರಾಮಯ್ಯ ಈ ಹೇಳಿಕೆ ಕುರಿತು ಕ್ಷಮೆ ಯಾಚಿಸಬೇಕೆಂದು ಅವರು ಪಟ್ಟು ಹಿಡಿದರು.
ಇನ್ನು ವಿಜೇಯೇಂದ್ರ ಅವರು, ತುಮಕೂರಿನ ಎಡೆಯೂರಿನ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಬರುವಾಗ ರೇಣುಕಾಚಾರ್ಯ ಬಿಟ್ಟರೆ ಅತೀ ಹೆಚ್ಚು ಕಾಂಟ್ರುವರ್ಸಿ ಮಾಡಿಕೊಳ್ಳೊದು ನಾನೇ ಎಂದು ಹೇಳಿದರು. ಹೀಗೆ ಹೇಳಿ ವಿಜೇಯೇಂದ್ರ ಅವರು ತಮ್ಮ ಬೆಂಬಲಿಗರು ಖುಷಿ ಪಡಿಸಿದರು. ಇದಕ್ಕೆ ಬೆಂಬಲಿಗರು ಹಾಗೂ ಮುಖಂಡರು ತಮ್ಮ ನಾಯಕನ ಕಾಮಿಡಿಗೆ ಜೋರಾಗಿ ನಕ್ಕು ಸಾಥ್ ನೀಡಿರುವುದು ಕ್ಯಾಮಾರಾದಲ್ಲಿ ಸೆರೆಯಾಯಿತು.