ಬೆಂಗಳೂರು: ಲಾಕ್ ಡೌನ್ ಸಡಲಿಕೆ ಆದ್ರೆ ರಾಜ್ಯದ ಸಾರಿಗೆ ನಿಗಮಗಳ ಬಳಿ ಬಸ್ ಓಡಿಸೋಕ್ಕೆ ದುಡ್ಡಿಲ್ಲದಂತಾಗಿದೆ. ರಾಜ್ಯ ಸಾರಿಗೆ ನಿಗಮಗಳಿಗೆ ಬಸ್ ಕಾರ್ಯಾಚರಣೆ ನಿರ್ವಹಣೆಗೆ ದುಡ್ಡಿನ ಚಿಂತೆಯಾಗಿದೆ. ನೌಕರರಿಗೆ ಸಂಬಳ ಮಾತ್ರವಲ್ಲ ಡಿಸೇಲ್, ಆಯಿಲ್ ಸ್ಪೇರ್ ಪಾರ್ಟ್ಸ್ ಖರೀದಿಗೂ ದುಡ್ಡಿಲ್ಲದಂತಾಗಿದೆ.
ಮೇ 3ರ ನಂತರ ಲಾಕ್ ಡೌನ್ ಸಡಿಲಿಕೆ ಆದ್ರೆ ಬಸ್ ಕಾರ್ಯಾಚರಣೆ ಮಾಡಬೇಕು. ಆದ್ರೆ ಕಾರ್ಯಾಚರಣೆ ನಿರ್ವಹಣೆಗೆ ಡಿಸೇಲ್, ಆಯಿಲ್ ಬಿಡಿಭಾಗಗಳು ಬೇಕು. ಸಾರಿಗೆ ನಿಗಮಗಳಲ್ಲಿ ಬರುವ ಆದಾಯದಲ್ಲಿ ನಿರ್ವಹಣೆ ವೆಚ್ಚವೇ ಜಾಸ್ತಿ. ಒಂದುವರೆ ತಿಂಗಳಿಂದ ಬಸ್ ನಿಂತ್ತಿರುವದರಿಂದ ಬಸ್ಗಳ ದುರಸ್ತಿ ಅಗತ್ಯವಾಗಿದೆ. ಬಸ್ ಓಡಿಸೋಕೆ ಕಾರ್ಯಾಚರಣೆ ವೆಚ್ಚದ ಬಗ್ಗೆ ನಿಗಮಗಳು ತಲೆಕೆಡಿಸಿಕೊಂಡಿದೆ. ನಿತ್ಯ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳಿಗೆ ನಿತ್ಯ ಸುಮಾರು 8 ಕೋಟಿ ಅಗತ್ಯ.
ತಿಂಗಳಿಗೆ ಸುಮಾರು 240 ಕೋಟಿ ಕಾರ್ಯಾಚರಣೆ ವೆಚ್ಚವೇ ಬೇಕು. ಒಂದುವರೆ ತಿಂಗಳಿಂದ ಟಿಕೆಟ್ ಕಲೆಕ್ಷನ್ ಶೂನ್ಯವಾಗಿದೆ. ಬಸ್ ಕಾರ್ಯಾಚರಣೆ ಮಾಡೋಕೆ ಬಿಎಂಟಿಸಿ ಕೆಎಸ್ಆರ್ಟಿಸಿ,NWKSRT, NEKSRT ತಲೆಕೆಡಿಸಿಕೊಂಡಿದೆ. ಬಿಎಂಟಿಸಿಯ ಬಹುತೇಕ ಡಿಪೋಗಳಲ್ಲಿ ಸ್ಪೇರ್ ಪಾರ್ಟ್ಸ್ಗಳೇ ಇಲ್ಲ. ಈ ಕಾರಣಕ್ಕೆ ನಿಗಮಗಳು ಬಸ್ ಓಡಿಸೋಕ್ಕೆ ತಲೆಕೆಡಿಸಿಕೊಂಡಿದೆ.