Wednesday, May 18, 2022

ರಾಜ್ಯ ಸರ್ಕಾರಕ್ಕೆ 100 ದಿನ ಹಿನ್ನೆಲೆ: 80 ಮಾರ್ಕ್ಸ್​ ಕೊಟ್ಟ ಡಿ.ವಿ ಸದಾನಂದಗೌಡ.!

Must read

ಬೆಂಗಳೂರು: ಯಡಿಯೂರಪ್ಪ ಅವರು ಸಣ್ಣಪುಟ್ಟ ರಾಜಕೀಯ ಗೊಂದಲದ ಮಧ್ಯೆಯೂ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರು ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿಗಳು ಪ್ರವಾಹ ಸ್ಥಳಗಳಿಗೆ ಹಲವಾರು ಬಾರಿ ಓಡಾಡಿದ್ದಾರೆ. ಹಲವರು ಓಡಾಟ ಮಾಡಿರಲಿಕ್ಕಿಲ್ಲ, ಆದರೆ ಕ್ಯಾಪ್ಟನ್ ಓಡಾಟವೇ ಅಧಿಕಾರಿಗಳಿಗೆ ಕೆಲಸ ಮಾಡಲು ಸ್ಫೂರ್ತಿ ಎಂದರು.

ಅಲ್ಲದೇ ಸಿಎಂ ಆಗಿ ಅಪರಾಧ ಮಾಡಿಬಿಟ್ಟೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇಂತಹ ಪ್ರವಾಹದ ಮಧ್ಯದಲ್ಲಿ ಅಯ್ಯೋ! ಎನ್ನುವ ಪರಿಸ್ಥಿತಿ ಅವರಿಗೆ ನಿರ್ಮಾಣ ಆಗಿದೆ. ಅವರು ಮಾತ್ರ ಅಲ್ಲ ನಾವಾದರೂ ಅದನ್ನೇ ಮಾಡುತ್ತಿದ್ದೆವು. ಸುಖದ ಅಧಿಕಾರದ ಸುಪ್ಪತ್ತಿಗೆಯಲ್ಲಿದ್ದಾಗ ಕಷ್ಟ ಗೊತ್ತಾಗುವುದಿಲ್ಲ ಎಂದು ಅವರು ನುಡಿದರು.

ತನ್ನ ಸುತ್ತ ನೂರಾರು ಸವಾಲುಗಳು ಬಂದಾಗ ಮಾಡುವ ಕೆಲಸವನ್ನು ಪರಿಗಣಿಸಬೇಕು. ಫೇಲ್ ಆಗಿ ಆಗಿ ಪಾಸಾದವರೆಲ್ಲಾ ದೊಡ್ಡ ಸ್ಥಾನಕ್ಕೆ ಹೋಗಿದ್ದಾರೆ. ರ್ಯಾಂಕ್ ಬಂದವರಲ್ಲಾ ಇನ್ನೂ ಲ್ಯಾಬೋರೇಟರಿಯಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ಇದ್ದಾರೆ. ರಾಜಕೀಯ ಎಂದರೆ ನಿಂತ ನೀರಲ್ಲ. ಅದು ಸಮುದ್ರದ ಹಾಗೆ, ತೆರೆಗಳು ಬರುತ್ತಲೇ ಇರುತ್ತವೆ, ತೆರೆ ಗಳನ್ನು ಎದುರಿಸಿ ನಿಲ್ಲುವವನೇ ನಾಯಕ ಎಂದು ಡಿ.ವಿ ಸದಾನಂದಗೌಡ ಅವರು ತಿಳಿಸಿದರು.

ಅಲ್ಲದೇ ಸರ್ಕಾರಕ್ಕೆ ನೂರದಿನದ ಸಾಧನೆಗೆ ಅಂಕ 80 ಕೊಡಬೇಕು. ಇಂತಹ ಟೆನ್ಷನ್, ಕೋರ್ಟ್, ಆರೋಪ ಪ್ರತ್ಯಾರೋಪದ ಮಧ್ಯಯೂ ಕೆಲಸ ಮಾಡಿದ್ದು ಅದ್ಭುತ ಸಾಧನೆ ಎಂದರು ಸದಾನಂದಗೌಡ ಅವರು ಹೇಳಿದರು.

Also read:  'ಪರೀಕ್ಷೆ ಬರೆಯುತ್ತಿದ್ದ ಓರ್ವ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್'

Latest article