Tuesday, August 16, 2022

ರಾಜಕೀಯಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರೂ ಅಲ್ಲ

Must read

ಬೆಂಗಳೂರು: ರಾಜಕೀಯಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರೂ ಅಲ್ಲ. ಅನರ್ಹರನ್ನ ಸೋಲಿಸಲು ನಾನು ಶರತ್​ ಬಚ್ಚೇಗೌಡಗೆ ಬೆಂಬಲ ನೀಡುತ್ತಿದ್ದೇನೆ ಅಂತ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಜೆಪಿ ಭವನದಲ್ಲಿ ಮಾತನಾಡಿದ ಅವರು, ಎಲ್ಲ 15 ಅನರ್ಹರನ್ನ ಸೋಲಿಸುವುದೇ ನನ್ನ ಪರಮ ಗುರಿ. ಯುದ್ಧದ ಅಖಾಡಕ್ಕೆ ನಿಂತಾಗ ಸಂಬಂಧಿ, ಅಣ್ಣ, ತಮ್ಮ ಎಂದು ನೋಡಬಾರದು ಅಂತ ಶ್ರೀಕೃಷ್ಣ ಹೇಳಿದ್ದಾನೆ.ನನ್ನದೂ ಅದೇ ರಣತಂತ್ರ. ಶರತ್​ಗೆ ಬೆಂಬಲ ನೀಡುತ್ತಿರುವುದು ಕೂಡ ರಣತಂತ್ರದ ಒಂದು ಭಾಗ.

ಬಚ್ಚೇಗೌಡರು ನೇರವಾಗಿ ಮಾತನಾಡುವವರು. ಒಕ್ಕಲಿಗರನ್ನ ಒಡೆಯಲು ಅವರಿಂದ ಅಂತಹ ಮಾತುಗಳನ್ನ ಆಡಿಸಲಾಯ್ತು. ದೇವೇಗೌಡರಿಗೆ, ನನಗೆ ಬಚ್ಚೇಗೌಡರು ಮಾತನಾಡಿದ್ದರು. ಆದರೆ ಹತ್ತು ವರ್ಷದ ಮಾತು ಕಟ್ಟಿಕೊಂಡು ಈಗ ಮಾಡೋದೇನಿದೆ ಅಂತ ಕುಮಾರಸ್ವಾಮಿ ಸಮರ್ಥಿಸಿಕೊಂಡರು.

Latest article