Tuesday, August 16, 2022

ರಾಜಕಾರಣದಲ್ಲಿ ಭ್ರಷ್ಟಾಚಾರ ಮುಕ್ತ ಆಗಬೇಕು – ಸಂಸದ ರಾಘವೇಂದ್ರ

Must read

ಹಾವೇರಿ: ರಾಜಕಾರಣದಲ್ಲಿ ಭ್ರಷ್ಟಾಚಾರ ಮುಕ್ತ ಆಗಬೇಕು ಎಂದು ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಧ್ಯಪಾನ ದುರುಪಯೋಗ ಮಾಡಿಕೊಂಡು ಮತಹಾಕಿಸುವುದನ್ನು ತಪ್ಪಿಸಬೇಕು. ಪರಿಸರಕ್ಕೆ ಒತ್ತು ನೀಡಬೇಕು, ಎಲ್ಲಾ ಮಕ್ಕಳಿಗೆ ಶಿಕ್ಷಣ ಸಿಗಬೇಕು. ಲಿಂಗಭೇದ ಮರೆತು ಎಲ್ಲರಿಗೂ ಅಭಿವೃದ್ಧಿ ಕಾರ್ಯ ಆಗಬೇಕು ಎಂದು ರಾಘವೇಂದ್ರ ತಿಳಿಸಿದರು.

ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನಾಮಪತ್ರ ವಾಪಸ್ ಹಿನ್ನಲೆ ಮಾತು ಮುಂದುವರೆಸಿದ ಅವರು, ಮಾದರಿ ತಾಲ್ಲೂಕು ಆಗಬೇಕು ಎಂಬ, ಚಿಂತನೆ ಇಟ್ಟುಕೊಂಡು ರಾಜಕೀಯದಲ್ಲಿ ಸ್ವಚತೆ ತರಲು ಚಿಂತನೆ ಮಾಡಿದ್ದಾರೆ. ಅವರಿಗೆ ಪಕ್ಷ ಯಾವುದು ಮುಖ್ಯ ಅಲ್ಲ ಎಂದರು,

ಇನ್ನೂ ಅವರು ನಾಮಪತ್ರ ವಾಪಸ್​ ಪಡೆಯಲು ಕಾರಣ ಎಂದರೇ, ಉಪಚುನಾವಣೆ ಸಂದರ್ಭದಲ್ಲಿ ಚುನಾವಣೆಗೆ ಸ್ಪರ್ಧಿಸೋದು ಬೇಡ ಅಂತ ರಂಭಾಪುರಿ ಪೀಠ, ಉಜೈನಿ ಪೀಠ, ಪಂಚಪೀಠ ಸ್ವಾಮೀಜಿ ಅವರಿಗೆ ವಿನಂತಿ ಮಾಡಿದ್ದಾರೆ. ಅದಕ್ಕಾಗಿ ಸ್ವಾಮೀಜಿ ನಾಮಪತ್ರ ವಾಪಸ್ ಪಡೆದಿದ್ದಾರೆ ಎಂದು ಸಂಸದ ರಾಘವೇಂದ್ರ ಇದೇ ವೇಳೆ ತಿಳಿಸಿದರು.

ಇನ್ನು ನಾಮಪತ್ರ ವಾಪಸ್ ಪಡೆದ ನಂತರ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದ್ದು, ಸಿಎಂ ಪ್ರತಿನಿಧಿಯಾಗಿ ಸಂಸದ ರಾಘವೇಂದ್ರ ಭರವಸೆ ನೀಡಿದ್ದಾರೆ. ತಾಲೂಕಿನ ಜನರ ಆಶೋತ್ತರಗಳನ್ನು ಈಡೇರಿಸೋ ಭರವಸೆ ಮೇರೆಗೆ ನಾಮಪತ್ರ ವಾಪಸ್ ಪಡೆದಿದ್ದೇನೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ನಿಮಗೆ ಒತ್ತಡ ಆಗುವಂತಿದ್ದರೆ ನಾಮಪತ್ರ ವಾಪಸ್ ಪಡೆಯುವಂತೆ ಹೇಳಿದ್ದಾರೆ ಎಂದು ತಿಳಿಸಿದರು.

Latest article