Tuesday, August 16, 2022

ಯಾರ್​ ಏನೇ ಬೊಬ್ಬೆ ಹೊಡೆದ್ರು, ರಮೇಶ್​ ಜಾರಕಿಹೊಳಿ ಗೆಲ್ತಾರೆ – ಸಿಎಂ ಯಡಿಯೂರಪ್ಪ

Must read

ಬೆಳಗಾವಿ: ರಮೇಶ ಜಾರಕಿಹೊಳಿ ಅವರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದೆ. ಅಲ್ಲದೇ ನಾನು ಮುಖ್ಯಮಂತ್ರಿ ಆಗುವಲ್ಲಿ ರಮೇಶ್​ರ ಪಾತ್ರ ದೊಡ್ಡದಿದೆ ಎಂದು ಸಿಎಂ ಬಿ.ಎಸ್​ ಯಡಿಯೂರಪ್ಪ ಅವರು ಇಂದು ಹೇಳಿದರು.

ಡಿ.5 ರಂದು ಗೋಕಾಕ್​ನ ಉಪಚುನಾವಣೆ ಹಿನ್ನೆಲೆಯಲ್ಲಿ, ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಪರ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, 15 ವಿಧಾನ ಸಭಾ ಕ್ಷೇತ್ರಕ್ಕೆ ಎರಡು ಸುತ್ತು ಪ್ರಚಾರ ನಡೆಸಿರುವೆ. ಹೀಗಾಗಿ ಯಾರು ಏನೇ ಬೊಬ್ಬೆ ಹೊಡೆದ್ರು ರಮೇಶ ಜಾರಕಿಹೊಳಿ ದೊಡ್ಡ ಅಂತರದಲ್ಲಿ ಗೆಲ್ಲೋದು ಖಚಿತ ಎಂದರು.

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ನೂರಕ್ಕೆ ನೂರು ರಾಜಕೀಯದಲ್ಲಿ ಬದಲಾವಣೆಯಾಗಲಿದೆ. ಕಾಂಗ್ರೆಸ್ ನೆಲಕಚ್ಚಿ ವಿರೋಧ ಪಕ್ಷದಲ್ಲಿ ಇರುತ್ತಾರೆ. ಆಗ ನಾವು ಆಡಳಿತ ಪಕ್ಷದಲ್ಲಿ ಮೂರುವರೆ ವರ್ಷ ಆಡಳಿತ ಮುಂದುವರೆಯುತ್ತೇವೆ ಎಂದು ಸಿಎಂ ಭರವಸೆ ವ್ಯಕ್ತಪಡಿಸಿದರು.

ಅಂತೆಯೇ ಮಾತನಾಡಿ, ಯಡಿಯೂರಪ್ಪ ಸರ್ಕಾರವು ಪೂರ್ಣಾವಧಿಗೆ ಅಧಿಕಾರ ನಡೆಸಬೇಕು, ಒಳ್ಳೆಯ ಆಡಳಿತ ಕೊಡಬೇಕೆಂದು ಮತದಾರರು ಹೇಳುತ್ತಿದ್ದರು. ಆದರೆ, ವಿರೋಧ ಪಕ್ಷದವರು ಬಿಜೆಪಿಗೆ ಬಹುಮತ ಬರಬಾರದು ಮತ್ತೆ ಆರು ತಿಂಗಳಲ್ಲಿ ಚುನಾವಣೆ ಬರಬೇಕೆಂಬ ಭ್ರಮೆಯಲ್ಲಿ ಅವರು ಇದ್ದಾರೆ ಎಂದರು.

ಅಲ್ಲದೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಹಗಲು ಕನಸು ಕಾಣುತ್ತಿದ್ದಾರೆ. ಅವರ ಸಿಎಂ ಆಗುವ ಕನಸು ತಿರುಕನ ಕನಸ್ಸಾಗಿದೆ ಎಂದು ಮುಖ್ಯಮಂತ್ರಿ ಬಿಎಸ್​ವೈ ಅವರು ಸಿದ್ದರಾಮಯ್ಯ ವಿರುದ್ಧ ಗುಡುಗಿದರು.

Latest article