ಹಾವೇರಿ: ನಾಳೆ ನಾಡಿದ್ದು ತೀರ್ಪು ಬರುವ ಭರವಸೆ ಇದ್ದು ಸ್ಪೀಕರ್ ಏಕಾಭಿಪ್ರಾಯದಿಂದ ದುರುದ್ದೇಶದ ತೀರ್ಪು ನೀಡಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ವಿರುದ್ಧ ಅನರ್ಹ ಶಾಸಕ ಬಿಸಿ ಪಾಟೀಲ್ ಅವರು ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ತಮ್ಮ ನಿವಾಸದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ನನಗೆ ನ್ಯಾಯ ಸಿಗೋ ಭರವಸೆ ಇದೆ. ನಾಳೆ ನಮ್ಮ ಕಾರ್ಯಕರ್ತರ ಅಭಿಮಾನಿಗಳ ಸಭೆ ಕರೆದಿದ್ದೇನೆ. ಆದೇಶ ಅಭಿಪ್ರಾಯ ಸಂಗ್ರಹಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಅವರು ನುಡಿದರು.
ಅಲ್ಲದೇ ಯಾರನ್ನು ಅಭ್ಯರ್ಥಿ ಮಾಡುವ ಪ್ರಶ್ನೆ ಇಲ್ಲ, ಅನರ್ಹರು ಚುನಾವಣೆ ಸ್ಪರ್ಧೆಗೆ ಯಾವುದೇ ಅಭ್ಯಂತರ ಇಲ್ಲ, ತೀರ್ಪು ನಮ್ಮ ಪರವಾಗಿ ನಮ್ಮ ಬರುತ್ತದೆ ಪ್ರಶ್ನೆಯೇ ಉದ್ಬವಿಸುವುದಿಲ್ಲ, ವಾಟ್ಸ್ ಆಪ್ ಸಂದೇಶದಲ್ಲಿ ಸಮೀಕ್ಷೆ ಮಾಡಿದ್ದೇವೆ ಎಂದು ಅವರು ಪ್ರತಿಕ್ರಿಯೆ ನೀಡಿದರು.