Wednesday, May 18, 2022

ಯಡಿಯೂರಪ್ಪ ಸಿಎಂ ಆದರೆ ಪ್ರವಾಹ ಬರುತ್ತದೆ – ವಿ.ಸೋಮಣ್ಣ

Must read

ಬೆಳಗಾವಿ: ಯಡಿಯೂರಪ್ಪ ಸಿಎಂ ಆದರೆ ಪ್ರವಾಹ ಬರುತ್ತದೆ. ಅದೇ ಬೇರೆಯವರು ಸಿಎಂ ಆದರೆ ಬರಗಾಲ ಬರುತ್ತದೆ ಎಂದು ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂತ್ರಸ್ತರಿಗೆ ಸರ್ಕಾರದಿಂದ ಅಗತ್ಯ ಪರಿಹಾರ ತಲುಪಿದೆ. ಮಾನವೀಯತೆ ದೃಷ್ಟಿಯಿಂದ ಸಿಎಂ ಬಿಎಸವೈ ಆರು ಬಾರಿ ಬಂದು ಹೋಗಿದ್ದಾರೆ. ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತೇವೆ. ಸಿಎಂ ಬಿಎಸವೈ ಹೆಚ್ಚಿನ ಪರಿಹಾರ ನೀಡುವ ಕೆಲಸವನ್ನು ಮಾಡಿದ್ದಾರೆ. ಸಂತ್ರಸ್ತರ ಪರಿಹಾರ ಮಧ್ಯವರ್ತಿಗಳಿಗೆ ಹೋಗಿಲ್ಲ. ಅದು ಅವರ ಖಾತೆಗೆ ನೇರವಾಗಿ ಹೋಗಿದೆ ಎಂದು ಸ್ಪಷ್ಟಪಡಿಸಿದರು.

ಬಿಎಸವೈ, ಅನರ್ಹ ಶಾಸಕರ ಬೆನ್ನಿಗೆ ನಿಮ್ಮ ಪಕ್ಷದವರೇ ಚೂರಿ ಹಾಕುತ್ತಿದ್ದಾರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು. ಹಾಗೇ ಏನು ಇಲ್ಲ, ಜಗತ್ತಿಗೆ ಅನರ್ಹರ ಶಾಸಕರು ಯಾಕೇ ರಾಜೀನಾಮೆ ಕೊಟ್ಟರು ಅಂತಾ ಗೊತ್ತಿದೆ. ಕಾಂಗ್ರೆಸ್ ಜೆಡಿಎಸ್​​ ಪಕ್ಷದ ಅವ್ಯವಸ್ಥೆ, ಗೌರವ ಕೊಡದ ಬಗ್ಗೆ ಬೇಸತ್ತು ರಾಜೀನಾಮೆ ನೀಡಿದ್ದಾರೆ. ಅನರ್ಹ ಶಾಸಕರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ.

ಹಾಗಂತ ನಾವು ಅನರ್ಹ ಶಾಸಕರನ್ನು ಬಿಜೆಪಿ ಸೇರಿಸಿಕೊಂಡಿದ್ದೇವೆ ಎಂದು ನಾವು ಹೇಳಿಲ್ಲ ಎಂದರು.

ಅನರ್ಹ ಶಾಸಕರ ಬಗ್ಗೆ ಬಿಎಸವೈ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಕಾಂಗ್ರೆಸನವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಕೊಟ್ಟ ಕುದುರೆಯನ್ನು ಏರದವನು ವೀರನು ಅಲ್ಲಾ, ಧೀರನು ಅಲ್ಲ, ಕಾಂಗ್ರೆಸ್, ಜೆಡಿಎಸ್​ ಪಕ್ಷ ಶಾಸಕರನ್ನು ಸರಿ ಇಟ್ಟುಕೊಳ್ಳಲು ಆಗಿಲ್ಲ ಎಂದು ಸೋಮಣ್ಣ ಟಾಂಗ್ ಕೊಟ್ಟರು.

Latest article