ಬೆಂಗಳೂರು: ದೇಶದ ಇತಿಹಾಸದಲ್ಲಿ ಕಂಡರಿಯದ ಪ್ರವಾಹ ಬಂದಿದ್ದನ್ನು ಕಂಡಿದ್ದೇವೆ. ಇದು ಯಡಿಯೂರಪ್ಪನವರಿಗೆ ಸವಾಲೋ? ಅಥವಾ ಇಲ್ಲವೋ ಎಂದು ಗೊತ್ತಿಲ್ಲ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರು ಇಂದು ಹೇಳಿದರು.
ರಾಜ್ಯ ಸರ್ಕಾರಕ್ಕೆ 100 ದಿನ ಪೂರೈಸಿದ ಹಿನ್ನಲೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಪ್ರವಾದ ಮಧ್ಯೆಯೂ ಅವರು ಎಲ್ಲವನ್ನೂ ನಿಭಾಯಿಸುವ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಆಗಿರುತ್ತಿದ್ದರೆ ಏನು ಮಾಡ್ತಿದ್ದರು ಎಂಬುದು ನಿಮಗೆಲ್ಲ ಗೊತ್ತಿದೆ ಎಂದು ಅವರು ನುಡಿದರು.
ಯಡಿಯೂರಪ್ಪ ಬಹಳ ಮುಂಗೋಪಿ ಎಂದು ಬಹಳ ಹಿಂದಿನಿಂದಲೂ ಹೇಳುತ್ತಿದ್ದರು. ಆದರೆ ಎಷ್ಟು ಚೆನ್ನಾಗಿ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. 77 ವರ್ಷದ ಯುವಕ ರಾತ್ರಿ ಹಗಲು ಓಡಾಟ ಮಾಡಿದ್ದನ್ನು ನೋಡಿದ್ದೀರಿ, ಸ್ಥಿತಪ್ರಜ್ಞನಾಗಿ ಯಡಿಯೂರಪ್ಪನವರ ಕೆಲಸಕ್ಕೆ ಶಹಬ್ಬಾಸ್ ಗಿರಿ ಕೊಡಬೇಕು. ಅವರ ಮ್ಯಾನೇಜ್ಮೆಂಟ್ ಆಫ್ ಅಡ್ಮಿನಿಸ್ಟ್ರೇಶನ್ ವಂಡರ್ ಪುಲ್ ಎಂದು ಅವರು ಬಣ್ಣಿಸಿದರು.