Wednesday, May 18, 2022

ಯಡಿಯೂರಪ್ಪನವರೇ ನಿಮಗೆ ಧಮ್ ಇದ್ಯಾ? – ಉಗ್ರಪ್ಪ ಸವಾಲ್

Must read

ಬೆಂಗಳೂರು: ಯಡಿಯೂರಪ್ಪನವರೇ ನಿಮಗೆ ಧಮ್ ಇದ್ಯಾ? ಇದ್ರೆ ರಿಸೈನ್ ಮಾಡಿ ಚುನಾವಣೆಗೆ ಬನ್ನಿ ಎಂದು ಮಾಜಿ ಸಂಸದ ವಿ.ಎಸ್​. ಉಗ್ರಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಡಿಯೋದಲ್ಲಿ ಮಾತನಾಡಿರೋದು ಯಾರು? ನಿಮ್ಮ ರಾಷ್ಟ್ರಾಧ್ಯಕ್ಷರ ಬಗ್ಗೆ ನೀವು ಮಾತನಾಡಿಲ್ವಾ? ನಿಮ್ಮ ಕಾರ್ಯಕರ್ತರು ಆಡಿಯೋ ಮಾಡಿ ಬಿಟ್ಟಿಲ್ವಾ? ಸುಪ್ರೀಂಕೋರ್ಟನ್ನೂ ಮಿಸ್ ಯೂಸ್ ಮಾಡ್ತಿದ್ದೀರ ನಿಮಗೆ ತಾಕತ್ತಿದ್ದರೆ ಸುಪ್ರೀಂನಲ್ಲಿ ವಿಚಾರಣೆಗೊಳಪಡಿಸಿ, ಅಥವಾ ಯಡಿಯೂರು ಸಿದ್ದಲಿಂಗೇಶ್ವರನ ಮುಂದೆ ಪ್ರಮಾಣ ಮಾಡಿ, ಆಡಿಯೋ ನನ್ನದಲ್ಲ ಅಂತ ಎಂದು ಉಗ್ರಪ್ಪ ಸವಾಲ್ ಹಾಕಿದರು.

ಇನ್ನೂ ಬಿಜೆಪಿಯವರಿಗೆ ಸಾಮೂಹಿಕ ಸನ್ನಿ ಹಿಡಿದಿದೆ. ಹತಾಶರಾಗಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದನ್ನು ನೋಡಿದರೆ. ಬುದ್ದಿಕಳೆದುಕೊಂಡಿರುವಂತಿದೆ. ಇವರಿಗೆ ನಿಮ್ಹಾನ್ಸ್ ಟ್ರೀಟ್ ಮೆಂಟ್ ಬೇಕಾಗಿದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ವ್ಯಂಗ್ಯವಾಡಿದರು.

ಇನ್ನೂ ಯಡಿಯೂರಪ್ಪ ಎರಡು ತಲೆ ಹಾವಿದ್ದಂತೆ, ಆಪರೇಷನ್ ಕಮಲದ ಬಗ್ಗೆ ಅವರೇ ಒಪ್ಪಿದ್ದಾರೆ. ಅಮಿತ್ ಶಾ ಅಣತಿಯಂತೆ ನಡೆದಿದೆ. ಇದನ್ನು ಯಡಿಯೂರಪ್ಪ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಮಾಧ್ಯಮಗಳಲ್ಲೂ ಧ್ವನಿ ನನ್ನದೇ ಅಂದಿದ್ದಾರೆ. ಈಗ ನೋಡಿದರೆ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

Latest article