Wednesday, May 18, 2022

'ಮೋದಿ ಗಾಳಿಯಿದೆ, ತರಗೆಲೆ ಥರ ತೂರಿ ಹೋಗ್ತೀಯಾ'

Must read

ಮೈಸೂರು: ವಿಜಯಶಂಕರ್ ನನ್ನ ಆತ್ಮೀಯ ಸ್ನೇಹಿತ, ನಾನು ಅವರಿಗೆ ಮೊದಲೇ ಹೇಳಿದ್ದೆ. ಮೋದಿ ಗಾಳಿ ಇದೆ, ತರಗೆಲೆ ಥರ ತೂರಿ ಹೋಗ್ತೀಯಾ ಅಂತ ಎಂದು ಮಾಜಿ ಸಚಿವ ವಿಜಯಶಂಕರ್ ಬಿಜೆಪಿ ಸೇರುವ ವದಂತಿ ವಿಚಾರವಾಗಿ ಸಚಿವ ವಿ ಸೋಮಣ್ಣ ಅವರು ಗುರುವಾರ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ವಿಜಯ್​ ಶಂಕರ್​ ಅವರ ಮನೆಯವರ ಬಳಿಯು ನಾನು ಮಾತುಕತೆ ನಡೆಸಿದ್ದೆ ಆದರು ಅವರು ಪಕ್ಷ ತೊರೆದು ಹೋಗಿದರು. ಇದೀಗ ಅವರು ಬರ್ತಾರೆ ಅಂದರೆ ಅದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ, ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ನುಡಿದರು.

ಇನ್ನು ಹರಿಯಾಣ, ಮಹಾರಾಷ್ಟ್ರದ ಫಲಿತಾಂಶ ಬಗ್ಗೆ ಮಾತನಾಡಿದ ವಿ.ಸೋಮಣ್ಣ ಅವರು, ಕರ್ನಾಟಕ ರಾಜ್ಯದಲ್ಲಿಯೂ ಅದೇ ರೀತಿಯ ಪುನರಾವರ್ತನೆ ಆಗಲಿದೆ. ಕರ್ನಾಟಕದ ಉಪಚುನಾವಣೆಯಲ್ಲಿ ನಾವು ಜಯಭೇರಿ ಬಾರಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅದುವಲ್ಲದೇ ಜನರ ರಾಷ್ಟ್ರೀಯ ಭಾವನೆ ಯಡಿಯೂರಪ್ಪ. ಯಡಿಯೂರಪ್ಪ ಜನಪ್ರಿಯ ಕಾರ್ಯಕ್ರಮ ಗೆಲುವು ತಂದುಕೊಡಲಿದೆ. ಹರಿಯಾಣ ಹಾಗೂ ಮಹಾರಾಷ್ಟ್ರದ ಗೆಲುವು. ಮೋದಿ ಅಮಿತ್ ಶಾ ಅವರಿಗೆ ಸಮರ್ಪಣೆ ಮಾಡುತ್ತೇವೆ ಎಂದು ಮೈಸೂರಿನಲ್ಲಿ ಸಚಿವ ವಿ.ಸೋಮಣ್ಣ ಅವರು ಮಾತನಾಡಿದ್ದಾರೆ.

Latest article