Tuesday, August 16, 2022

ಮೋದಿ ಒಂದೇ ಒಂದು ಹಳ್ಳಿಗೆ ತೆರಳಿ ಬಡವರ ಕಷ್ಟ ಕೇಳಿದ್ದಾರಾ? – ಮಾಜಿ ಸಿಎಂ ಕುಮಾರಸ್ವಾಮಿ

Must read

ಬೆಂಗಳೂರು: ಸಿಎಂ ಯಡಿಯೂರಪ್ಪ ಅವರು ಈ ಹಿಂದೆ ಎಂಟಿಬಿ ನಾಗರಾಜ್ ಕೋಟಿ, ಕೋಟಿ ಲೂಟಿ ಹೊಡೆದಿದ್ದಾರೆ ಎಂದು ಹೇಳುತ್ತಿದ್ದರು, ಆದರೆ ಈಗ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಬಿಎಸ್​ವೈ ವಿರುದ್ಧ ಕಿಡಿಕಾರಿದರು.

ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವರಾಯಗೌಡ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಜಿಲ್ಲೆಯ ಒಂದು ಹಳ್ಳಿಗೂ ಹೋಗಿ ಜನರ ಕಷ್ಟಗಳನ್ನ ಆಲಿಸಲಿಲ್ಲ. ಬಡವರ ಜೊತೆ ನಾವಿದ್ದೇವೆ ಎಂದು ಒಂದು ಭಾರೀಯೂ ಪ್ರಧಾನಿ ಹೇಳಿದ್ದಾರಾ? ಎಂದು ಕುಮಾರಸ್ವಾಮಿ ಅವರು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ನನಗೆ ಸಿಕ್ಕ ಅಧಿಕಾರದ ಅವಧಿಯಲ್ಲಿ ನಾನು ಬಡವರ ಪರ ಕೆಲಸ ಮಾಡಿದ್ದೇನೆ. ನಾನು ಎಂದು ಜನರಿಗೆ ಅಗೌರವ ತೋರಿಸಿ, ಕಷ್ಟಕ್ಕೆ ದುಡಿಲ್ಲ. ನನ್ನ ಬಳಿ ಬರುವವರೇಲ್ಲ ಬಡವರೆ ಹೊರತು ಶ್ರಿಮಂತರಲ್ಲ. ಅವರಿಗಾಗಿ ನಾನು ಜೀವನವನ್ನ ಮುಡಿಪಿಡುತ್ತೇನೆ. ಅಧಿಕಾರ ಇರಲಿ,ಇಲ್ಲದೇ ಇರಲಿ ನಾನು ಇರುವುದೆ ಅವರಿಗಾಗಿ ಎಂದು ಕುಮಾರಸ್ವಾಮಿ ಅವರು ಹೇಳಿದರು.

Latest article