Wednesday, May 18, 2022

ಮೋಡಿ ಮಾಡಿದ 'ಕಿಸ್': ಇಲ್ಲಿದೆ ನೋಡಿ ಚಿತ್ರದ ರಿವ್ಯೂ ರಿಪೋರ್ಟ್

Must read

ಟೈಟಲ್​ ಮೂಲಕವೇ ಹೊಸ ನಿರೀಕ್ಷೆ ಮೂಡಿಸಿದ್ದ ಚಿತ್ರ ಕಿಸ್. ಟ್ರೇಲರ್​ ಮತ್ತು ಹಾಡುಗಳಿಂದ ಚಿತ್ರಪ್ರೇಮಿಗಳಿಗೆ ಒಂದು ಸಾರಿ ಕಿಸ್ ಚಿತ್ರವನ್ನು ನೋಡಲೇಬೇಕು ಅನ್ನೋ ಕುತೂಹಲ ಹುಟ್ಟಿಸಿತ್ತು. ಅದ್ರಲ್ಲೂ ಯಂಗ್​ಸ್ಟರ್ಸ್​, ಕಾಲೇಜ್ ಸ್ಟೂಡೆಂಟ್ಸ್​ ಬಹಳ ಕಾತುರದಿಂದ ಕಾಯ್ತಿದ್ದಂತಹ ಸಿನಿಮಾ. ಹಾಗಾದ್ರೆ ರಾಜ್ಯಾದ್ಯಂತ ತೆರೆಕಂಡಿರೋ ಕಿಸ್ ಹೇಗಿದೆ..? ಚಿತ್ರದ ಕುರಿತಾದ ಕಂಪ್ಲೀಟ್​ ರಿವ್ಯೂ ಇಲ್ಲಿದೆ ನೋಡಿ.

ಕಿಸ್.. ಟೈಟಲ್​ ಫಿಕ್ಸ್​ ಆದಾಗಿಂದ್ಲೂ ರಿಲೀಸ್​ವರೆಗೂ ಒಂದಲ್ಲ ಒಂದು ರೀತಿ ಸುದ್ದಿ ಮಾಡ್ಕೊಂಡು ಬಂದಂಹ ಸಿನಿಮಾ. ಸತತ 2 ವರೆ ವರ್ಷಗಳಿಂದ ಕಿಸ್ ಬಿಗ್​ ಸ್ಕ್ರೀನ್​ಗೆ ಬರುತ್ತೆ ಅಂತ ಕಾಯ್ತಿದ್ದೋರು ಫೈನಲಿ ಕಿಸ್ ಸಿನಿಮಾ ನೋಡಿ ಕಣ್ತುಂಬಿಕೊಂಡಿದ್ದಾರೆ. ಲೇಟಾದ್ರೂ ಲೇಟೆಸ್ಟಾಗಿ ಎಂಟ್ರಿ ಕೊಟ್ಟಿದೆ ಎಪಿ ಅರ್ಜುನ್ ಡ್ರೀಮ್ ಪ್ರಾಜೆಕ್ಟ್ ಕಿಸ್.

ಕಿಸ್ ಸ್ಟೋರಿಲೈನ್

ಕಿಸ್.. ತುಂಟ ತುಟಿಗಳ ಆಟೋಗ್ರಾಫ್​ ಅಂತ ಟ್ಯಾಗ್​ಲೈನ್​ ​ ಇಟ್ಟಿದ್ದು, ಅದಕ್ಕೆ ತಕ್ಕಂತೆ ಕ್ಯೂಟ್ ಲವ್​ ಸ್ಟೋರಿ, ಲವರ್ಸ್​ ನಡುವಿನ ತುಂಟತನ, ತರ್ಲೆ,ಕಿತ್ತಾಟ, ಡುಯ್ಯೆಟ್, ಪ್ಯಾಥೋ ಎಲ್ಲವೂ ಚಿತ್ರದಲ್ಲಿದೆ. ಚಿತ್ರದ ನಾಯಕ ಅರ್ಜುನ್​, ಅಗರ್ಭ ಶ್ರೀಮಂತನ ಮಗ, ನಾಯಕಿ ನಂದಿನಿ ಕಾಲೇಜು ಓದ್ತಿರೋ ಹುಡುಗಿ. ಒಂದು ಸಣ್ಣ ಕಿರಿಕ್​ನಿಂದ ಇಬ್ಬರ ಭೇಟಿಯಾಗುತ್ತೆ. ಆ ಕಿರಿಕ್​ ಪ್ರತಿಫಲವಾಗಿ 72 ದಿನಕಾಲ ಅರ್ಜುನ್​ ಅಸಿಸ್ಟೆಂಟ್ ಆಗಿ, ಕೆಲಸ ಮಾಡೋ ಪರಿಸ್ಥಿತಿ ನಾಯಕಿ ನಂದಿನಿಗೆ ಬರುತ್ತೆ.

ಹಾಗಾದ್ರೆ 72 ದಿನಗಳ ಕಾಲ ನಾಯಕಿ ನಂದಿನಿ, ಅರ್ಜುನ್​ ಅಸಿಸ್ಟೆಂಟ್ ಆಗಿ ಕೆಲಸ ಮಾಡ್ತಾಳಾ..? ಆ ಜರ್ನಿಯಲ್ಲಿ ಎನೆಲ್ಲಾ ಆಗುತ್ತೆ..? ಇವರಿಬ್ಬರ ನಡುವೆ ಪ್ರೀತಿ ಆಗುತ್ತಾ..? ಆ ಪ್ರೀತಿ ಸಕ್ಸಸ್​ ಆಗುತ್ತಾ ಅನ್ನೋದೇ ಕಿಸ್ ಕಥಾಹಂದರ.

ಆರ್ಟಿಸ್ಟ್​ ಪರ್ಫಾಮೆನ್ಸ್​

ಚಿತ್ರದ ನಾಯಕ ಅರ್ಜುನ್​ ಪಾತ್ರದಲ್ಲಿ ಮಿಂಚಿರೋ ವಿರಾಟ್ ಮೊದಲ ಸಿನಿಮಾದಲ್ಲೇ ಸಿನಿಪ್ರಿಯರ ಗಮನ ಸೆಳೆದಿದ್ದಾರೆ. ಆ್ಯಕ್ಟಿಂಗ್, ಡಾನ್ಸ್, ಫೈಟ್, ಡೈಲಾಗ್​ ಡೆಲಿವರಿ ಎಲ್ಲದ್ರಲ್ಲೂ 100 ಪಸೆಂಟ್ ಎಫರ್ಟ್​ ಹಾಕಿ ಪರ್ಫಾರ್ಮ್​ ಮಾಡಿದ್ದಾರೆ. ಸ್ಟೈಲಿಶ್​ ಲುಕ್​ನಲ್ಲಿ ವಿರಾಟ್ ಮಿಂಚಿದ್ದು, ಕಾಲೇಜು ಹುಡುಗ-ಹುಡುಗಿಯರಿಗೆ ಇಷ್ಟವಾಗೋ ಹಾಗಿದೆ.

Also read:  ಬೇರೆ, ಬೇರೆ ಕಾರಣದಿಂದ ದೂರಾಗಿದ್ದರು,ಈಗ ಎತ್ತರಕ್ಕೆ ಬೆಳೆದಿದ್ದಾರೆ - ಶ್ರೀ ರಾಮುಲು

ಇನ್ನು ನಾಯಕಿ ನಂದಿನಿಯಾಗಿ, ಶ್ರೀಲೀಲಾ ಮಿಂಚಿದ್ದು, ಬೋಲ್ಡ್ ಅಂಡ್ ಬ್ಯೂಟಿಫುಲ್​ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲ ಸಿನಿಮಾದಲ್ಲೇ ಸಾಕಷ್ಟು ಎಫರ್ಟ್​ ಹಾಕಿ ಅಭಿನಯಿಸಿದ್ದಾರೆ. ನೋಡುಗರಿಗೆ ಶ್ರೀಲೀಲಾ ಗ್ಲಾಮರ್ & ಆ್ಯಕ್ಟಿಂಗ್ ಇಷ್ಟವಾಗಿಬಿಡುತ್ತೆ.

ಇನ್ನು ಚಿತ್ರದಲ್ಲಿ ಉಳಿದಂತೆ ಕಾಮಿಡಿ ಸ್ಟಾರ್​ಗಳಾದ ಸಾಧುಕೋಕಿಲ, ಚಿಕ್ಕಣ್ಣ ಪೋಷಕ ಪಾತ್ರದಲ್ಲಿ ಅವಿನಾಶ್, ದತ್ತಣ್ಣ ಹೀಗೆ ಸಾಕಷ್ಟು ಕಲಾವಿದರಿದ್ದು, ಪಾತ್ರಕ್ಕೆ ತಕ್ಕಂತೆ ಅದ್ಭುತ ಅಭಿನಯ ನೀಡಿದ್ದಾರೆ.

ಕಿಸ್ ಪ್ಲಸ್ ಪಾಯಿಂಟ್ಸ್

⦁ ಮೇಕಿಂಗ್

⦁ ಲೋಕೇಷನ್ಸ್

⦁ ಸಾಂಗ್ಸ್ & ಸಿನಿಮಾಟೋಗ್ರಫಿ

⦁ ನಾಯಕ – ನಾಯಕಿ ಜೋಡಿ

ಕಿಸ್ ಮೈನಸ್ ಪಾಯಿಂಟ್ಸ್

ಕಿಸ್ ಸಿನಿಮಾ ಒಂದು ಕ್ಯೂಟ್ ಲವ್​ ಸ್ಟೋರಿಯಾಗಿದ್ದು, ಚಿತ್ರದ ಕಥೆಯಲ್ಲಿ ಇನ್ನಷ್ಟು ಗಟ್ಟಿತನವಿರಬೇಕಿತ್ತು. ದ್ವಿತೀಯಾರ್ಧ ಕೊಂಚ ಲ್ಯಾಗ್​ ಅನ್ನಿಸೋದು ಹೌದು. ಇದೆಲ್ಲವನ್ನ ಹೊರತು ಪಡಿಸಿ ಒಮ್ಮೆ ಸಿನಿಮಾ ನೋಡಲು ಅಡ್ಡಿಯಿಲ್ಲ.

Also read:  ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನಟನಿಗ್ಯಾಕೆ ಈ ಶಿಕ್ಷೆ..? ಬೆಚ್ಚಿಬೀಳೋ ಭಯಾನಕ ನಗ್ನ ಸತ್ಯ

TV5 ರೇಟಿಂಗ್: 3/5

ಫೈನಲ್​ ಸ್ಟೇಟ್​ಮೆಂಟ್​

ಕಿಸ್ .. ಒಂದು ಕ್ಯೂಟ್ ಲವ್​ ಸ್ಟೋರಿ. ಹೊಸ ಪ್ರತಿಭೆಗಳು ಈ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಟ್ಟಿದ್ದು, ಹೊಸ ಕನಸುಗಳನ್ನ ಹೊತ್ತು ಬಂದಿದ್ದಾರೆ. ಎಪಿ ಅರ್ಜುನ್​ ಈ ಹೊಸ ಜೋಡಿಯನ್ನ ಅಂದವಾಗಿ ತೆರೆಮೇಲೆ ತೋರಿಸುವಲ್ಲಿ ಗೆದ್ದಿದ್ದಾರೆ. ಸಣ್ಣ-ಪುಟ್ಟ ಮೈನಸ್​ ಪಾಯಿಂಟ್ಸ್​ನ್ನ ಸೈಡಿಗಿಟ್ಟು ಒಮ್ಮೆ ಸಿನಿಮಾ ನೋಡಿದ್ರೆ ಮನರಂಜನೆ ಸಿಗೋದ್ರಲ್ಲಿ ಡೌಟೇ ಇಲ್ಲ.

ಅರ್ಚನಾಶರ್ಮಾ, ಎಂಟರ್​ಟೈನ್ಮೆಂಟ್​ ಬ್ಯುರೋ,ಟಿವಿ5

Latest article