ಬೆಂಗಳೂರು- ಆಪರೇಶನ್ ಕಮಲ ಮಾಡಿ ಹೇಗೋ ಹರಸಾಹಸ ಪಟ್ಟು ಮುಖ್ಯಮಂತ್ರಿ ಗದ್ದುಗೆ ಮೇಲೆ ಕುಳಿತ ಸಿಎಂ ಯಡಿಯೂರಪ್ಪ ಅವರಿಗೆ ಒಂದಿಲ್ಲೊಂದು ಟ್ರಬಲ್ ಎದುರಾಗುತ್ತಿವೆ. ಇದಕ್ಕೆ ಪುಷ್ಟಿಕರಿಸುವಂತೆ ಅನರ್ಹರ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಆಗುತ್ತಿದ್ದಂತೆ ಟಿಕೇಟ್ಗಾಗಿ ಮೂಲ ಬಿಜೆಪಿಗರು ಹಾಗೂ ಅನರ್ಹ ಶಾಸಕರ ನಡುವೆ ಭಾರಿ ಫೈಟ್ ಶುರುವಾಗಿದೆ.
ಹಿರೇಕೇರೂರು ಕ್ಷೇತ್ರದ ಉಪಚುನಾವಣೆ ಟಿಕೇಟ್ಗೆ ಅನರ್ಹ ಶಾಸಕ ಬಿಸಿ ಪಾಟೀಲ್ ಹಾಗೂ ಮಾಜಿ ಶಾಸಕ ಯು.ಬಿ ಬಣಕಾರ್ ನಡುವೆ ಪೈಪೋಟಿ ಜೋರಾಗಿದೆ. ಇದರಿಂದ ಬಿ.ಎಸ್ ವೈ ಗೆ ತಲೆನೋವು ಆರಂಭವಾಗಿದೆ. ಒಂದು ವೇಳೆ ಟಿಕೇಟ್ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ದಿಸಲು ಯು.ಬಿ ಬಣಕಾರ್ ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.
ಅನರ್ಹರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿರುವ ಸಿಎಂ ಯಡಿಯೂರಪ್ಪ ಅವರು ಈಗ ಇವರಿಬ್ಬರ ನಡುವೆ ಮದ್ಯಪ್ರವೇಶ ಮಾಡಿ, ನಿನ್ನೆ ರಾತ್ರಿ ತಮ್ಮ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಇಬ್ಬರನ್ನೂ ಕರೆಸಿಕೊಂಡ ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರಿಂದ ಅನರ್ಹ ಶಾಸಕ ಬಿ.ಸಿ ಪಾಟೀಲ್, ಮಾಜಿ ಶಾಸಕ ಯು.ಬಿ ಬಣಕಾರ್ ನಡುವೆ ಸಂಧಾನಯತ್ನ ನಡೆದಿದೆ. ಸಂಧಾನ ಪ್ರಯತ್ನ ಮಾಡಿದ್ದಾರೆ. ಆದರೆ ಸಂಧಾನ ಪ್ರಯತ್ನ ವಿಫಲವಾಗಿದೆ.
ಇದಕ್ಕೆ ಬಿಎಸ್ ಯಡಿಯೂರಪ್ಪ ಅವರು ಬಿ.ಸಿ ಪಾಟೀಲ್ ರಾಜೀನಾಮೆಯಿಂದಾಗಿ ನಮಗೆ ಅಧಿಕಾರ ಸಿಕ್ಕಿದೆ. ಬಿಜೆಪಿ ಸರ್ಕಾರ ರಚನೆಯಲ್ಲಿ ಬಿ.ಸಿ ಪಾಟೀಲ್ ಅವರ ತ್ಯಾಗವೂ ಇದೆ. ನಾನವರಿಗೆ ಮಾತು ಕೊಟ್ಟಿದ್ದೇನೆ ಎಂದಿದ್ದಾರೆ. ಬಿ.ಸಿ ಪಾಟೀಲ್ ಪರ ಉಪಚುನಾವಣೆಯಲ್ಲಿ ಕೆಲಸ ಮಾಡಿ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಎಂದು ಯು.ಬಿ ಬಣಕಾರ್ಗೆ ಸಿಎಂ ಸಲಹೆ ಸೂಚಿಸಿದ್ದಾರೆ ಎನ್ನಲಾಗಿದೆ.
ಆದರೆ ಸಿಎಂ ಮನವೊಲಿಕೆಗೆ ಒಪ್ಪದ ಯು.ಬಿ ಬಣಕಾರ್, ನನಗೂ ಬಿ.ಸಿ ಪಾಟೀಲ್ ಅವರಿಗೂ ಹಲವು ವರ್ಷಗಳಿಂದ ಪೈಪೋಟಿ ಇದೆ. ಒಂದು ವೇಳೆ ನಿಮ್ಮ ಮಾತಿಗೆ ಒಪ್ಪಿ ನಾನು ಬಿ.ಸಿ ಪಾಟೀಲ್ ಜೊತೆ ಓಡಾಡಿದರೆ ಕಾರ್ಯಕರ್ತರ ಗತಿ ಏನಾಗಬೇಕು(?) ಕ್ಷೇತ್ರದ ಜನತೆಗೆ ಹೇಗೆ ಮುಖ ತೋರಿಸಲಿ(?) ಬಿ.ಸಿ ಪಾಟೀಲ್ಗೆ ಮತ ನೀಡಿ ಎಂದು ಯಾವ ಮುಖ ಇಟ್ಟುಕೊಂಡು ನಾನು ಕೇಳಲಿ(?) ಎಂದು ಸಿಎಂ ಮುಂದೆ ಬಣಕಾರ್ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಯು.ಬಿ ಬಣಕಾರ್ ಅವರು ಒಮ್ಮೆ ಬೇಕಾದರೆ ಹಿರೇಕೇರೂರಿಗೆ ಬನ್ನಿ. ನಿಮಗೆ ವಾಸ್ತವ ಸ್ಥಿತಿ ಗೊತ್ತಾಗುತ್ತದೆ ಸಿಎಂಗೆ ತಿಳಿಸಿದ್ದಾರೆ. ಈ ವೇಳೆ ಸಿಎಂ ಮುಂದೆ ತುಟಿ ಪಿಟಕ್ ಎನ್ನದೇ ಬಿ.ಸಿ ಪಾಟೀಲ್ ಮೌನವಾಗಿದ್ದು, ನಂತರ ಸಿಎಂ ಮುಂದೆ ಬಿ.ಸಿ ಪಾಟೀಲ್ ಅಳಲು ತೋಡಿಕೊಂಡಿದ್ದಾರೆ.
ಆಗ ಸಿಎಂ ಮುಂದೆ ಬಿ.ಸಿ ಪಾಟೀಲ್ ಅವರು ಯು.ಬಿ ಬಣಕಾರ್ ಅವರನ್ನು ಮನವೊಲಿಸದಿದ್ದರೆ ಉಪಚುನಾವಣೆಯಲ್ಲಿ ನನಗೆ ಗೆಲುವು ಕಷ್ಟ ಆಗಲಿದೆ ಎಂದಿದ್ದಾರೆ. ಅದು ಹೇಗೆ(?) ಸರಿ ಮಾಡ್ತಿರೋ ನಿಮಗೆ ಬಿಟ್ಟಿದ್ದು ಎಂದು ಬಿ.ಎಸ್. ಯಡಿಯೂರಪ್ಪ ಮುಂದೆ ಬಿ.ಸಿ ಪಾಟೀಲ್ ಮನವಿ ಮಾಡಿದ್ದಾರೆ ಎಂದು ಉನ್ನತ ಮಾಹಿತಿಗಳಿಂದ ತಿಳಿದು ಬಂದಿದೆ.
ಪವನ್ ಕುಮಾರ್
(ರಾಜಕೀಯ ವರದಿಗಾರರು, ಟಿವಿ5 ಕನ್ನಡ)