ಮೈಸೂರು: ನಮ್ಮ ಪಕ್ಷದ ನಾಯಕರಲ್ಲಿ ಮೂಲ ಹಾಗೂ ವಲಸಿಗ ಕಾಂಗ್ರೆಸ್ಸಿಗ ಎಂಬ ಮಾತೇ ಇಲ್ಲ. ಬಿಜೆಪಿಗೆ ಬೇರೆ ಯಾವುದೇ ವಿಷಯವಿಲ್ಲ. ಹೀಗಾಗಿ ಈ ವಿಷಯವನ್ನು ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಅವರು ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಒಬ್ಬಂಟಿ ಅಲ್ಲ. ಉಪ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ನಾಯಕರು 15ಕ್ಷೇತ್ರಕ್ಕೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕೂಡ ಒಂದೊಂದು ಕ್ಷೇತ್ರಕ್ಕೆ ಹೋಗುತ್ತಿದ್ದಾರೆ. ಹೀಗಾಗಿ ಮೂಲ ಹಾಗೂ ವಲಸ್ಸಿಗ ಕಾಂಗ್ರೆಸ್ಸಿಗರು ಮಾತುಗಳು ಬರುವುದಿಲ್ಲ ಎಂದರು.
ಈ ಹಿಂದೆ ನಂಜನಗೂಡು-ಗುಂಡ್ಲುಪೇಟೆ ಚುನಾವಣೆಯಲ್ಲಿ 2ಕ್ಷೇತ್ರ ಮಾತ್ರ ಇದ್ದವು, ಹಾಗಾಗಿ ಎಲ್ಲ ನಾಯಕರು ಅಂದು ಅಲ್ಲಿಗೆ ಬಂದಿದ್ದೀವಿ, ಈಗ15 ಕ್ಷೇತ್ರ ಇದೆ ಹೀಗಾಗಿ ಎಲ್ಲ ಕ್ಷೇತ್ರಗಳಲ್ಲಿವೂ ಎಲ್ಲರಂತೆ ನಾವು ಚುನಾವಣೆಯ ತಂತ್ರಗಾರಿಕೆಯಲ್ಲಿ ಬಿಜಿ ಇದ್ದೇವೆ ಎಂದು ಅವರು ತಿಳಿಸಿದರು.