Wednesday, May 18, 2022

ಮುಲಾಜು ನೋಡದ ಸೌತ್ ಸ್ಟಾರ್ಸ್.. ಮೋದಿಗೆ ಕ್ಲಾಸ್..!​

Must read

ಪ್ರಧಾನಿ ನರೇಂದ್ರ ಮೋದಿಯವರ ಪ್ರಕಾರ ಭಾರತೀಯ ಚಿತ್ರರಂಗ ಅಂದ್ರೆ ಕೇವಲ ಬಾಲಿವುಡ್​ ಅಷ್ಟೇನಾ..? ಹೀಗಂತ ಸೌತ್​ ಸ್ಟಾರ್ಸ್​ ಕೇಳ್ತಿದ್ದಾರೆ. ಟ್ವಿಟ್ಟರ್​​​ನಲ್ಲಿ ಮೆಗಾಸ್ಟಾರ್​ ಚಿರಂಜೀವಿ ಸೊಸೆ ಉಪಾಸನಾ ಮತ್ತು ನಟ, ಬಿಜೆಪಿ ಮುಖಂಡ ಜಗ್ಗೇಶ್ ಈ ಬಗ್ಗೆ ಧ್ವನಿ ಎತ್ತಿದ್ದಾರೆ.

ಮೊನ್ನೆ ಶನಿವಾರ ರಾತ್ರಿ ಬಾಲಿವುಡ್​ ಕಲಾವಿದರು ಮತ್ತು ತಂತ್ರಜ್ಞರು ಪ್ರಧಾನಿ ಮೋದಿ ಅಕ್ಕಪಕ್ಕ ನಿಂತು, ಮುಗುಳ್ನಗುತ್ತಾ ಫೋಟೋಗಳನ್ನ, ಸೆಲ್ಫಿಗಳನ್ನ ಕ್ಲಿಕ್ಕಿಸಿಕೊಂಡಿದ್ರು. ಶಾರುಖ್​ ಖಾನ್, ಆಮೀರ್​ ಖಾನ್​ರಿಂದ ಹಿಡಿದು ರಕೂಲ್ ಪ್ರೀತ್‌ ಸಿಂಗ್​ವರೆಗೆ ಎಲ್ಲರೂ ಮೋದಿ ಅವರ ಜೊತೆ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿರಿ ಹಿರಿ ಹಿಗ್ಗಿದ್ರು. ಈ ಫೋಟೋಗಳನ್ನ ಸ್ವತ: ಮೋದಿ ಅವರು ಪೋಸ್ಟ್​​​​ ಮಾಡಿ, ಉಳಿದವರು ಹಾಕಿದನ್ನ ಟ್ವಿಟ್ಟರ್‌ನಲ್ಲಿ ಶೇರ್​ ಮಾಡಿದ್ರು.

ಮೋದಿ ಪ್ರಕಾರ ಚಿತ್ರರಂಗ ಅಂದ್ರೆ ಬಾಲಿವುಡ್​​ ಅಷ್ಟೇನಾ..?

ಮುಲಾಜು ನೋಡದ ಸೌತ್ ಸ್ಟಾರ್ಸ್.. ಮೋದಿಗೆ ಕ್ಲಾಸ್..!​

ಮಹಾತ್ಮ ಗಾಂಧೀಜಿ 150ನೇ ಜನ್ಮ ದಿನಾಚರಣೆ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿ ಶನಿವಾರ ಚೇಂಜ್ ವಿಥಿನ್ ಹೆಸರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ಸೆಲಬ್ರಿಟಿಗಳನ್ನು ಭೇಟಿಯಾಗಿದ್ರು. ಈ ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ಅಮೀರ್ ಖಾನ್, ಕಂಗನಾ ರಣಾವತ್, ಸೋನಂ ಕಪೂರ್, ರಾಕುಲ್ ಪ್ರೀತ್ ಸಿಂಗ್, ಜಾಕ್ವೆಲಿನ್ ಫರ್ನಾಂಡೀಸ್ ಸೇರಿ ಹಲವು ಸಿನಿಮಾ ಹಾಗೂ ಕಿರುತೆರೆಯ ಗಣ್ಯರು ಭಾಗವಹಿಸಿದ್ದರು. ಆದ್ರೆ, ದಕ್ಷಿಣ ಭಾರತ ಚಿತ್ರರಂಗದವರಿಗೆ ಆಹ್ವಾನ ನೀಡಿರಲಿಲ್ಲ.

ಮಹಾತ್ಮ ಗಾಂಧಿ ಅವರ 150ನೇ ಜನ್ಮ ದಿನದ ಅಂಗವಾಗಿ ಅವರ ಆದರ್ಶಗಳನ್ನು ಜನಪ್ರಿಯಗೊಳಿಸಲು ಚಿತ್ರರಂಗದವರ ಸಹಕಾರ ಬೇಕು ಅಂತ ಬಾಲಿವುಡ್​ ಮಂದಿ ಜೊತೆ ಮೋದಿ ಸಂವಾದ ನಡೆಸಿದ್ದರು. ಇದೇ ವಿಚಾರ ದಕ್ಷಿಣ ಭಾರತ ಚಿತ್ರರಂಗದರನ್ನ ಕೆರಳುವಂತೆ ಮಾಡಿದೆ.

ಪ್ರಧಾನಿ ಮೋದಿ ವಿರುದ್ಧ ಚಿರಂಜೀವಿ ಸೊಸೆ ಅಸಮಾಧಾನ..!

ನಯವಾಗಿಯೇ ಮೋದಿ ಕಿವಿ ಹಿಂಡಿದ ನವರಸನಾಯಕ..!

ಬಾಲಿವುಡ್​ ಮಂದಿ ಜೊತೆಗಿನ ಮೋದಿ ಸಂವಾದ ಕಾರ್ಯಕ್ರಮದ ಬಗ್ಗೆ ಮೊದಲಿಗೆ ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ ಸೊಸೆ ಉಪಾಸನಾ ಚಕಾರ ಎತ್ತಿದ್ರು. ಟ್ವೀಟ್​ ಮಾಡಿ ಬಹಿರಂಗವಾಗಿಯೇ ಮೋದಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ರು. ನೆಚ್ಚಿನ ಪ್ರಧಾನಿ ಮೋದಿಜಿ ನಾವು ದಕ್ಷಿಣ ಭಾರತೀಯರು ನಿಮ್ಮನ್ನು ಮೆಚ್ಚಿದ್ದೇವೆ, ಹಾಗೂ ನಿಮ್ಮನ್ನು ಪ್ರಧಾನಿಯಾಗಿ ಪಡೆದಿರುವುದಕ್ಕೆ ಹೆಮ್ಮೆ ಇದೆ. ಆದರೆ ಸಾಂಸ್ಕೃತಿಕ ಐಕಾನ್ ಗಳು ಪ್ರಮುಖ ವ್ಯಕ್ತಿಗಳ ಪ್ರಾತಿನಿಧ್ಯ ಕೇವಲ ಹಿಂದಿ ಸಿನಿಮಾ ಇಂಡಸ್ಟ್ರಿಗೆ ಸೀಮಿತವಾಗಿದೆ ಎನಿಸುತ್ತಿದೆ ಅಂತ ಉಪಾಸನಾ ಟ್ವೀಟ್ ಮಾಡಿದ್ರು.

Also read:  ಈರುಳ್ಳಿ ದರ ಹೆಚ್ಚಳದಿಂದ ಖುಷಿಯಾಗಿದ್ದ ರೈತರಿಗೆ ಶಾಕ್​..!

ರಾಮ್​ ಚರಣ್​​ ಮಡದಿ ಉಪಾಸನಾ ನಂತ್ರ ಕನ್ನಡದ ನಟ, ಬಿಜೆಪಿ ಪಕ್ಷದ ಮುಖಂಡರು ಆಗಿರುವ ಜಗ್ಗೇಶ್​, ಇದೇ ವಿಚಾರವಾಗಿ ಸಾಲು ಸಾಲು ಟ್ವೀಟ್​ಗಳನ್ನ ಮಾಡಿದ್ದಾರೆ.

ಪ್ರಧಾನಿ ಮೋದಿಯವರೇ ಹಿಂದಿ ಚಿತ್ರರಂಗ, ಭಾರತೀಯ ಚಿತ್ರರಂಗ ಅಲ್ಲ, ದಕ್ಷಿಣ ಭಾರತ ಚಿತ್ರರಂಗ ಸಹ ನಿಮ್ಮ ಆಲೋಚನೆಗಳನ್ನ ಗೌರವಿಸುತ್ತಾರೆ. ನಾವು ನಿಮ್ಮ ಜೊತೆಗಿದ್ದೇವೆ ಅಂತ ಪ್ರೂವ್​ ಮಾಡಲು ನಮಗೂ ಅವಕಾಶ ಕೊಡಿ. ಉತ್ತರ ಭಾರತೀಯರಿಗಿಂತ ನಾವು ನಿಮ್ಮ ಆಲೋಚನೆಗಳನ್ನ ಹೆಚ್ಚು ಬೆಂಬಲಿಸುತ್ತೇವೆ.

Also read:  ದಿನಸಿ ಆಹಾರ ಪದಾರ್ಥಗಳನ್ನು ಮನೆಮನೆಗೆ ತಲುಪಿಸುವ ಯೋಜನೆಗೆ ಹೆಚ್.ಡಿ ಕುಮಾರಸ್ವಾಮಿ ಚಾಲನೆ

ಬಿಜೆಪಿ ಮುಖಂಡರು ಆಗಿರುವ ಜಗ್ಗೇಶ್​​, ತಮ್ಮದೇ ಪ್ರಧಾನಿ ಬಗ್ಗೆ ಈ ರೀತಿ ಮಾತನಾಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ತಪ್ಪು ಯಾರೇ ಮಾಡಿದ್ರು ತಪ್ಪೇ. ಅದೇ ಕಾರಣಕ್ಕೆ ಸೌತ್​ ಸ್ಟಾರ್ಸ್​​ನ ನಿರ್ಲಕ್ಷಿಸಿದ ಮೋದಿಯವರನ್ನ ನಯವಾಗಿಯೇ ಜಗ್ಗೇಶ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾರತೀಯ ಚಿತ್ರರಂಗ ಅಂದ್ರೆ ಬರೀ ಖಾನ್​​ಗಳಲ್ಲ..!

ಬಾಲಿವುಡ್​​ ನಟನಟಿಯರಿಗಿಂತ ನಾವೇನ್​ ಕಮ್ಮಿಯಿಲ್ಲ..!

ತಮ್ಮ ಟ್ವೀಟ್​​​ ಅಸ್ತ್ರಗಳನ್ನ ಮುಂದುವರೆಸಿದ ಜಗ್ಗೇಶ್, ಕರ್ನಾಟಕದಲ್ಲಿ ಹೆಚ್ಚು ಎಂಟ್ರಟ್ರೈನ್​ಮೆಂಟ್​ ಟ್ಯಾಕ್ಸ್​ ಕಲೆಕ್ಟ್​ ಆಗುತ್ತೆ. ದೇಶದ ಚಿತ್ರರಂಗ ಬಹುಭಾಷಾ ಭಾವನೆಯಿಂದ ಉಳಿದಿದೆ ವಿನಹ ಹಿಂದಿ ಚಿತ್ರರಂಗದಿಂದ ಅಲ್ಲಾ. ಚಿತ್ರರಂಗ ಅಂದ್ರೆ ಖಾನ್​ಗಳಲ್ಲ. ಬಾಲಿವುಡ್​ ಸ್ಟಾರ್ಸ್​​ಗಿಂತ ನಾವು ಯಾವುದ್ರಲ್ಲಿ ಕಮ್ಮಿಯಿಲ್ಲ. ಕನ್ನಡಿಗರು, ಪರಭಾಷೆ ಸ್ಟಾರ್​ಗಳಿಗೆ ಚಪ್ಪಾಳೆ ಹೊಡೆ ತಪ್ಪಿಗೆ ಕನ್ನಡಿಗರು ಈಗ ದಾರಿ ತಪ್ಪಿದಂತಾಗಿದೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಜಗ್ಗೇಶ್​, ಉಪಾಸನಾ ರೀತಿಯಲ್ಲೇ ತಮಿಳು ನಟಿ ಖುಷ್ಬೂ ಟ್ವೀಟ್​ ಮಾಡಿ ಗರಂ ಆಗಿದ್ದಾರೆ.

ನಾಣಿ..ಎಂಟ್ರಟ್ರೈನ್​ಮೆಂಟ್ ಬ್ಯೂರೋ,ಟಿವಿ5

Latest article