Wednesday, May 18, 2022

ಮುನಿರತ್ನ ವಸರ್ಸ್​ ಮುನಿರಾಜು, ಬಿಎಸ್​ ಯಡಿಯೂರಪ್ಪ ವಸರ್ಸ್​ ಬಿಎಲ್​ ಸಂತೋಷ್​!

Must read

ಬೆಂಗಳೂರು: ಅನರ್ಹ ಶಾಸಕ ಮುನಿರತ್ನ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್​ ಯಡಿಯುರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್​ ಸಂತೋಷ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ.

ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ತುಳಸಿ ಮುನಿರಾಜುಗೌಡ ಬಂಡಾಯ ಹಿನ್ನೆಲೆ ಮುನಿರಾಜುಗೌಡ ಬೆನ್ನಿಗೆ ಬಿಎಲ್​ ಸಂತೋಷ್ ಅವರು ನಿಂತರೇ, ಅನರ್ಹ ಶಾಸಕ ಮುನಿರತ್ನ ಬೆನ್ನಿಗೆ ಬಲವಾಗಿ ಬಿಎಸ್​ ಯಡಿಯೂರಪ್ಪ ಅವರು ನಿಂತಿದ್ದಾರೆ.

ಈಗಾಗಲೇ ಸಿಎಂ ಮುನಿರಾಜುಗೌಡರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದರು. ನಿನಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡುತ್ತೇವೆ ಎಂದು ಅವರಿಗೆ ಆಫರ್​ ಕೂಡ ಕೊಟ್ಟಿದ್ದಾರೆ. ಆದರೆ, ಮುನಿರಾಜುಗೌಡ ಅವರು ಸಿಎಂ ಮಾತನ್ನು ತಿರಸ್ಕಾರ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು ಮುನಿರತ್ನ ಪ್ರಕರಣದಲ್ಲಿ ಬಿ.ಎಲ್ ಸಂತೋಷ್ ಮತ್ತು ಸಿಎಂ ಯಡಿಯೂರಪ್ಪ ಅವರ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಅನರ್ಹರಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರಿಂದ ಅವರು ರಾಜೀನಾಮೆ ನೀಡಿದ್ದಾರೆ ಎಂದು ಬಿಎಸ್​ವೈ ಅವರ ವಾದವಾಗಿದೆ.

ಮುನಿರತ್ನ ಅವರು ರಾಜೀನಾಮೆ ನೀಡಿರುವುದಕ್ಕೆ ಸರ್ಕಾರ ಬಂದಿದೆ. ಆದರೆ, ಈಗ ಅವರಿಗೆ ಟಿಕೆಟ್ ನೀಡಲ್ಲ ಎನ್ನುವುದು ಸರಿ ಅಲ್ಲ ಎನ್ನುವ ಸಿಎಂ ಮತ್ತು ಆಪ್ತ ಬಳಗದವರದ್ದು, ಬಿಎಸ್ ವೈ ಮತ್ತು ಸಂತೋಷ್ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗತ್ತಾ ಮುನಿರತ್ನ ಪ್ರಕರಣ(?) ತುಳಸಿ ಮುನಿರಾಜುಗೌಡ ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಮುನಿರತ್ನ ಅವರಿಗೆ ಸಿಎಂ ಬಿಎಸ್​ವೈ ಅವರು ಅಭಯ ನೀಡಿದ್ದಾರೆ.

Latest article